ರಂಗೋಳಿ- ಪುರುಷರ ಕಬಡ್ಡಿ ಪಂದ್ಯಾವಳಿ

0
50

ಬೆಳಗಾವಿ, ಸೆ. 18: ಜಿಲ್ಲಾ ಅಮೆಚೂರ್ ಕಬಡ್ಡಿ ಸಂಸ್ಥೆಯ ಅನುಮತಿ ಪಡೆದು ಶ್ರೀ ಗಜಾನನ ಯುವಕ ಮಂಡಳ ರಂಗಧೋಳಿ-ಗುತ್ತಿ (ಸಂತಿಬಸ್ತವಾಡ) ತಾ. ಬೆಳಗಾವಿ ಇವರ ವತಿಯಿಂದ ಸೆ. 23 ರಂದು ಪುರುಷರ ಕಬಡ್ಡಿ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ.

ವಿಜೇತ ತಂಡಕ್ಕೆ ಪ್ರಥಮ ಬಹುಮಾನ ರೂ. 5001 ಹಾಗೂ ಟ್ರೌಫಿ, ದ್ವಿತೀಯ ಬಹುಮಾನ ರೂ. 3001 ಹಾಗೂ ಟ್ರೌಫಿ, ತೃತೀಯ ಬಹುಮಾನ ರೂ. 1501 ಹಾಗೂ ಟ್ರೌಫಿ, ಚತುರ್ಥ ರೂ. 1001 ಹಾಗೂ ಟ್ರೌಫಿ ನೀಡಲಾಗುವುದು.

ಉತ್ತಮ ಹಿಡಿತಗಾರ, ಉತ್ತಮ ದಾಳಿಗಾರನಿಗೆ ತಲಾ 250 ರೂ. ಕೊಡಲಾಗುವುದು. ಆಸಕ್ತ ತಂಡಗಳು ಸೆ. 23 ರಂದು ಬೆಳಗ್ಗೆ 11 ಕ್ಕೆ ಸಂಘಟನಾ ಕಾರ್ಯದರ್ಶಿ ಬಸವರಾಜ ಕುಪಾನಿ ಇವರ ಬಳಿ ಹೆಸರು ನೋಂದಾಯಿಸಬೇಕು. ಹೆಚ್ಚಿನ ಮಾಹಿತಿಗೆ ಮೊ. 9739515344 ಇಲ್ಲಿಗೆ ಸಂಪರ್ಕಿಸುವಂತೆ ಜಿಲ್ಲಾ ಕಬಡ್ಡಿ ಸಂಸ್ಥೆಯ ಪ್ರ.ಕಾರ್ಯದರ್ಶಿ ಚಂದ್ರಕಾಂತ ಬರಗಾಲಿ ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here