ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಶ್ರೀಗಳ ವಾಣಿ ಧರ್ಮ ರಸಾಯನ

0
12

ಧರ್ಮವು ದೇವರಷ್ಟು  ಪವಿತ್ರ ವಿಶ್ವದಷ್ಟು ವಿಶಾಲ ಸಣ್ಣ ಬೀಜದಲ್ಲಿ ಬೃಹತ್ ವೃಕ್ಷ ಹುದುಗಿದೆ. ಎರಡಕ್ಷರದ ಧರ್ಮ ಪದದಲ್ಲಿ  ಪ್ರಪಂಚದ  ಪರಮಾರ್ಥ ಎಲ್ಲವೂ ಅಡಗಿದೆ. ಧರ್ಮೋ ಹಿ ದೇವಃ ಧರ್ಮವೇ ದೇವರು ಧರ್ಮ ಅಥವಾ ದೇವರು ಇಲ್ಲದಿರೆ ಜಗವೇ ಇಲ್ಲ.  ಪರಮ  ಸತ್ಯ ಪರಮಾತ್ಮನ ಮೇಲೆ ಈ ಜಗವೆಲ್ಲ ಅವಲಂಬಿತ, ಸತ್ಯ ಧರ್ಮವೇ ಮೈ ಬಿಚ್ಚಿ ಜಗವಾಗಿದೆ.

                ಧಾರ್ಯತೇ ಅನೇನ ಇತಿ ಧರ್ಮ ಯಾವುದು ರಕ್ಷಿಸುತ್ತದೆ ಯೋ ಅದು ಧರ್ಮ ಈ ವಿಶ್ವ ವೆಲ್ಲವೂ ನಾಶವಾಗದಂತೆ ಕಾಪಾ ಡುವ ಪರಮ  ಶಕ್ತಿಯೇ ಧರ್ಮ ನಮ್ಮ ಕಣ್ಣಿನ ಕಳೆ ಮನದಲ್ಲಿ  ಮೂಡುವ ಜ್ಞಾನ  ಮೈಯಲ್ಲಿ ಹರಿಯುವ ಪ್ರಾಣ ಎಲ್ಲವೂ ಈ ಮಣ್ಣಿನ ಕರುಣೆ ಸಮಸ್ತ  ಸಚರಾಚರ ಸೃಷ್ಟಿ ಎಲ್ಲವೂ ಈ ಮಣ್ಣಿನ ಮೇಲೆ ಬದುಕಿದೆ.  ಈ ಮಣ್ಣು ಇಲ್ಲವಾದರೆ ಮನುಷ್ಯನಿಲ್ಲ. ಪಶು ಪಕ್ಷಿಗಳಿಲ್ಲ ಕ್ರಿಮಿ ಕೀಟಗಳಿಲ್ಲ.  ಗಿಡ ಗಂಟಿಗಳಿಲ್ಲ, ಸಮಸ್ತ ಜಗತ್ತೇ ಇಲ್ಲ ಆದ್ದರಿಂದ ಈ ಮಣ್ಣು  ನಿಜವಾದ  ಧರ್ಮ  ದೇವರು.

                ಬಡವರ ಬಲ್ಲಿದ, ಆಜ್ಞಾನಿ  ಪಾಪಿ ಪುನೀತ ಜಾತಿ ವಿಜಾತಿ  ಎನ್ನದ ಎಲ್ಲರಿಗೂ ಅನ್ನ ಆಶ್ರಯವನ್ನಿತ್ತು ಕಾಪಾಡುವ ಈ ಪವಿತ್ರ ಮಣ್ಣು  ಧರ್ಮವಲ್ಲದಿದ್ದರೆ ಇನ್ನಾವುದು ಧರ್ಮ? ಒಂದು ಕ್ಷಣ ನಮ್ಮ ಗುಡಿಯೊಳಗಿನ  ಮೂರ್ತಿ, ಮಠ ದೊಳಗಿನ ಗ್ರಂಥಗಳಿಲ್ಲದಿದ್ದರೂ ನಾವು ಬದುಕಬಹುದು. ಆದರೆ ಬೆವರು ಸುರಿಸಿ ದುಡಿದವರಿಗೆಲ್ಲ ಬೇದ  ಮಾಡದೆ ಅನ್ನ ಪಾನವನ್ನಿತ್ತು ಸಲಹುವ ಈ ಮಣ್ಣಿಲ್ಲದಿದ್ದರೆ  ಯಾವ  ಮನುಷ್ಯನೂ ಬದುಕುವುದಿಲ್ಲ. ಯಾವ ದೇವರೂ ಬದುಕುವುದಿಲ್ಲ ಆದ್ದರಿಂದ ಈ ಮಣ್ಣು  ನೈಜ, ನಥಸರ್ಗಿಕ ಧರ್ಮ ನಾವು ಯಾವ ದೇಶಲ್ಲಿಯೇ ಇರಲಿ, ಯಾವ ಕಲದಲ್ಲಿಯೇ ಇರಲಿ, ನಮ್ಮ ಕಾಲ ಕೆಲಗೇ ಇದ್ದು ನಮ್ಮನ್ನು ಕಾಪಾಡುವ ಈ ಮಣ್ಣಿಗೆ ನಾವು ಮೊದಲು ತಲೆ ಬಾಗಬೇಕು.

                ಈ ಪ್ರಪಂಚವನ್ನು ಪೂರೆಯುವಲ್ಲಿ ಮಣ್ಣಿನೊಂದಿಗೆ ಕೈಯಲ್ಲಿ  ಕೈಯನಿಟ್ಟು, ಹೆಗಲಿಗೆ ಹೆಗಲು ಕೊಟ್ಟು ಅನವರತ ದುಡಿಯುತ್ತಿರುವ ಮಳೆ, ಗಾಳಿ, ಬೆಳಕು,  ಬಯಲು ಇವುಗಳಾದರೂ ನೈಸರ್ಗಿಕ ಧರ್ಮದ ಮಹತ್ವದ ಅಂಗಗಳೇ ಆಗಿವೆ. ನಮಗೆ ಪಂಚ  ಪ್ರಾಣದಂತಿರುವ ಈ ಪಂಚ  ಮಹಾಭೂತಗಳನ್ನು ಪರಿಶುದ್ಧವಾಗಿ ಟ್ಟುಕೊಂಡು ಬದುಕುವುದು  ನೈಜ ಧರ್ಮ, ದೇವರನ್ನು ಕಾಣಲು ಜನರು ನಿತ್ಯ ಸಲಹುವ ಈ ನಿಸರ್ಗವೇ ನೈಜ  ಧರ್ಮ ದೇವರು ಅದನ್ನು ಅರಿತು ಅನುಭವಿಸುವುದೇ ಆನಂದ ಯೋಗ!

                ಜಾಗತಿಕ ಸಾಹಿತ್ಯದಲ್ಲಿ ಈ ಧರ್ಮ ಪದವು  ಬಳಕೆಯಾದಷ್ಟು ಇನ್ನಾವ  ಪದವೂ ಬಳಕೆ ಆಗಿರಲಿಕ್ಕಿಲ್ಲ ಜಗತ್ತಿನ ಅನುಭಾವುಗಳು ಧರ್ಮ ಪದಕ್ಕೆ ಹಲವಾರು ಸುಂದರ ಅರ್ಥ ಕೊಟ್ಟಿರುವರು. ಲ್ಯಾಟಿನ್ನದಲ್ಲಿ ಧರ್ಮಕ್ಕೆ  ರಿಲಿಜಿನ್  ಎಂಬ ಪದವಿದೆ. ಅದರ ಅರ್ಥ ಕಟ್ಟುವುದು  ಮನಸ್ಸು ಮನಸ್ಸನ್ನು  ಮನಸ್ಸು  ಸತ್ಯವನ್ನು ಮನಸ್ಸು  ಜಗತ್ತನ್ನು ಸಮೀಪ ತರುವುದು ಕಟ್ಟುವುದು  ಧರ್ಮ , ಧರ್ಮ ಎನ್ನುವುದು  ನೆರಳಿನಂತೆ  ಒಬ್ಬ  ಯಾತ್ರಿಕನು ಬೇಸಿಗೆಯ  ಬಿಸಿಲಿನಲ್ಲಿ  ನಡೆದು ಎದುರಿಗೆ  ಕಾಣುತ್ತದೆ.  ಅವನಿಗೆ ಅರಿಯದಮತೆ ಕೈ ಬೀಸಿ ಕರೆದಿದೆ. ಆ ಕೆರೆಯು  ಅವನ ಹೃದಯಕ್ಕೆ ಕೇಲಿಸಿದೆ.  ಅದು ಮಾನವ ಭಾಷೆಯಲ್ಲ,  ಮಠದ ಭಾಷೆ  ನಿಸರ್ಗದ ನುಡಿ ಧರ್ಮವು ಒಂದು ದಿವ್ಯ ವೃಕ್ಷ . ಅದರಡಿಯಲ್ಲಿ ದಟ್ಟವಾದ ಶಾಂತಿಯ ನೆರಳು ಸಂಸಾರದ ಘೋರಾರಣ್ಯದಲ್ಲಿ ನಡೆದು ಮನುಷ್ಯನು  ದಣಿಯುವನು  ಧರ್ಮ ವೃಕ್ಷವು  ಅವರಿಗೆ ಚಿರಶಾಂತಿನ್ನಿತ್ತು  ಕಾಯುತ್ತದೆ.

               

loading...

LEAVE A REPLY

Please enter your comment!
Please enter your name here