ಮಗನಿಂದ ತಂದೆಯ ಕೊಲೆ

0
58

ಸಿಂದಗಿ: 05 ಆಕಳು ಮತ್ತು ಕರು ಮಾರಾಟ ಹಿನ್ನಲೆಯಲ್ಲಿ ಬೆಸತ್ತ ಮಗ ನಿಂಗಪ್ಪ ಹರಿಜನ ಇತನು ತಂದೆಯನ್ನೇ ಕೊಲೆ ಮಾಡಿದ ಘಟನೆ ಇಂದು ಶುಕ್ರವಾರ ತಾಲೂಕಿನ ಬಂಟನೂರ ಗ್ರಾಮದಲ್ಲಿ ನಡೆದಿದೆ.

ತಾಲೂಕಿನ ಬಂಟನೂರ ಗ್ರಾಮದ ಬಾಗಪ್ಪ ಹರಿಜನ(55) ಕೊಲೆಗೀಡಾದ ವ್ಯಕ್ತಿ ಎಂದು ಗುರುತಿಸಲಾಗಿದೆ.

ಹಿನ್ನಲೆ : ಸುಮಾರು ದಿನಗಳಿಂದ ಬಾಗಪ್ಪನ ಮನೆಯಲ್ಲಿ ಆಕಳು ಮತ್ತು ಕರು ಮಾರಾಟದ ವಿಚಾರದಲ್ಲಿ ದಿನದಿನೇ ತಂದೆ ಮತ್ತು ಮಗ ನಿಂಗಪ್ಪ ಹರಿಜನ ಇವರು ಜಗವಾಡುತ್ತಿದ್ದರು ಎಂದು ತಿಳಿದು ಬಂದಿದೆ. ಆ ಹಿನ್ನಲೆಯಲ್ಲಿ ಇಂದು ಮುಂಜಾನೆ ಬಾಗಪ್ಪ ಹರಿಜನ ತನ್ನ ಆಕಳು ಮಾರಾಟ ಮಾಡಿದ ವಿಚಾರವನ್ನು ತನ್ನ ಹೆಂಡತಿ ಮಾದೇವಿ ಹರಿಜನ  ಮುಂದೆ ಹೇಳಿದಾಗ ಹೆಂಡತಿ ಮಾದೇವಿ ಹರಿಜನ ಆಕಳು ಮತ್ತು ಕರುವನ್ನು ಮಾರಾಟ ಮಾಡಲು ನಿರಾಕರಿಸಿದ್ದರಿಂದ ಬಾಗಪ್ಪನು ಹೆಂಡತಿ ಮಾದೇವಿಯ ತಲೆಗೆ ಕಲ್ಲಿನಿಂದ ಜೋರಾಗಿ ಹೊಡೆದಿದ್ದನ್ನು ಕಂಡ ಹಿರಿಯ ಮಗ ನಿಂಗಪ್ಪ ಹರಿಜನ ಇತನು ತಂದೆ ಬಾಗಪ್ಪ ಹರಿಜನ ಇತನನ್ನು ಕೊಡಲಿಯಿಂದ ತಲೆಗೆ ಬಲವಾದ ಪೆಟ್ಟು ಬಿದ್ದ ಪರಿಣಾಮ ಸ್ಥಳದಲ್ಲಿ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಈ ಕೊಲೆಯು ಹಿರಿಯ ಮಗ ನಿಂಗಪ್ಪ ಹರಿಜನ ಮಾಡಿದ್ದಾನೆ          ಎಂದು ತಾಯಿ ಮಾದೇವಿ ಹರಿಜನ ಪೋಲಿಸರ ಮುಂದೆ ಹೇಳಿಕೊಂಡಿದ್ದಾಳೆ.

ಪ್ರಕರಣವು ಸಿಂದಗಿ ಪೋಲಿಸ ಠಾಣೆಯಲ್ಲಿ ದಾಖಲಾಗಿದ್ದು. ಆರೋಪಿ ಪರಾರಿಯಾಗಿದ್ದು ಆತನ ಬಂಧನಕ್ಕೆ ಪೋಲಿಸರು ಜಾಲ ಬೀಸಿದ್ದಾರೆ.

 

loading...

LEAVE A REPLY

Please enter your comment!
Please enter your name here