ಯಶ್ ಅಸ್ತಂಗತ

0
18

ಮುಂಬಯಿ,ಅ.21-ಬಾಲಿವುಡ್ ಯಶಸ್ವಿ ಚಿತ್ರ ನಿರ್ಮಾಪಕ ಯಶ್ ಛೋಪ್ರಾ ಇಂದು ಇಲ್ಲಿಯ ಲೀಲಾವತಿ ಆಸ್ಪತ್ರೆಯಲ್ಲಿ ನಿಧನರಾದರು.

80 ವರ್ಷದ ಯಶ್ ಛೋಪ್ರಾ ಲಾಹೋರ್ನಲ್ಲಿ ಸಪ್ಟೆಂಬರ್ 23, 1932ರಲ್ಲಿ ಜನಿಸಿದ್ದರು. ಚಿಕ್ಕ ವಯಸ್ಸಿನಲ್ಲಿಯೇ ಮುಂಬಯಿಗೆ ಆಗಮಿಸಿ ಚಿತ್ರರಂಗದಲ್ಲಿ ಕಾಲಿರಿಸಿದ್ದರು. ಅವರು ಡೇಂಘಿ ಜ್ವರದಿಂದ ಬಳಲುತ್ತಿದ್ದರಲ್ಲದೆ, ಕಳೆದ ದಿನಾಂಕ 14ರಂದು ಅವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಕಾರಿಯಾಗದೆ ನಿಧನ ಹೊಂದಿದರು. 1973ರಲ್ಲಿ ಪ್ರಥಮ ಬಾರಿ ದಾಗ್ ಚಿತ್ರವನ್ನು ನಿರ್ಮಿಸಿದ ಅವರ ಹೊಸ ಇತ್ತೀಚಿನ ಚಿತ್ರ ಜಬ್ತಕ್ ಹೈ ಜಾನ್ ಚಿತ್ರ ನವೆಂಬರ್ 13ರಂದು ಬಿಡುಗಡೆಯಾಗಲು ಸಿದ್ಧವಾಗಿತ್ತು.  ಮೊಹಬತೇ , ದಿಲ್ವಾಲೆ ದುಲ್ಹನಿಯಾ ಲೇ ಜಾಯೆಂಗೆ,ದಿವಾರ್, ಸಿಲ್ಸಿಲಾ, ದಿಲ್ತೊ ಪಾಗಲ್, ವಕ್ತ್ , ಸಾಥಿಯಾ, ಧೂಮ, ಫನಾ ಮುಂತಾದ ಯಶಸ್ವಿ ಚಿತ್ರಗಳನ್ನು ನೀಡಿದ್ದಾರೆ. ಇವರು ನಿರ್ಮಿಸಿದ ದಿವಾರ್ ಚಿತ್ರದಿಂದ ಖ್ಯಾತ ದಂತಕಥೆಯಾಗಿ ಪ್ರಶಂಸಿಸಲ್ಪಡುತ್ತಿರುವ ಅಮಿತಾಬ ಬಚ್ಚನ್ಗೆ ಭಾರೀ ಬ್ರೇಕ್ ದೊರಕಿತು.  ಯಶ್ ಛೋಪ್ರಾ ಅವರು ತಮ್ಮ ಸಾಧನೆಗಾಗಿ 6 ಸಲ ರಾಷ್ಟ್ತ್ರೀಯ ಪ್ರಶಸ್ತಿಗಳನ್ನು ಪಡೆದಿರುವುದರಲ್ಲದೆ 2005ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.  ಬಾಲಿವುಡ್, ಸ್ಯಾಂಡಲ್ವುಡ್, ಕಾಲಿವುಡ್ ಎಲ್ಲ ರಂಗಗಳು ಯಶ್ ಛೋಪ್ರಾ ಅವರ ನಿಧನಕ್ಕೆ ತಮ್ಮ ತೀವ್ರ ದುಃಖ ವ್ಯಕ್ತಪಡಿಸಿವೆ.

loading...

LEAVE A REPLY

Please enter your comment!
Please enter your name here