ಕುಲಗೋಡ ರೈತರಿಂದ ಕಬ್ಬಿನ ಬೆಲೆ ನಿಗದಿಗೆ ಅಹೋರಾತ್ರಿ ಧರಣಿ

0
27

ಮೂಡಲಗಿ 8: ಕುಲಗೋಡ ರೈತ ಸಂಘದಿಂದ ಗ್ರಾಮದ ಬಸ್ ನಿಲ್ದಾನ ಹತ್ತಿರ ಕಬ್ಬಿನ ದರ ನಿಗಧಿ ಪಡಿಸುವರಿಗೂ ಅಹೋರಾತ್ರಿ ಧರಣಿಯನ್ನು ಬುಧವಾರದಿಂದ ಪ್ರಾರಂಭಿಸಿದ್ದಾರೆ.

ಕುಲಗೋಡ ಗ್ರಾ.ಪಂ ಮಾಜಿ ಅಧ್ಯಕ್ಷ  ಸುಧೀರ ವಂಟಗೋಡಿ ಮಾತನಾಡಿ, ಕಾರ್ಖಾನೆಯವರು 2012-13 ರ ಹಂಗಾಮ ಪ್ರಾರಂಬಿಸುವ ಮೊದಲು ದರ ಘೋಷನೆ ಮಾಡಬೇಕು, ಆದರೆ ಹಂಗಾಮು ಪ್ರಾರಂಭಗೊಂಡಿದ್ದರು ಕಾರ್ಖಾನೆಯವರು ಇನ್ನೂ ಕಬ್ಬಿನ ದರ ಘೋಷನೆ ಮಾಡಿಲ್ಲಾ. ಕಬ್ಬು ಕಟಾವು ಮಾಡುವ ಮುನ್ನವೆ ಒಂದು ಟನ್ ಕಬ್ಬಿಗೆ 3000 ರೂ ಮುಂಗಡ ನೀಡಬೇಕು ವಿಳಂಬ ಮಾಡಿದರೆ ಕಾರ್ಖಾನೆಯ ಮುಂದೆ ಧರಣಿ ಮಾಡಬೇಕಾಗುತ್ತೆ ಎಂದರು.

ರೈತ ಸಂಘದ ಅಧ್ಯಕ್ಷರು  ವೆಂಕಣ್ಣ ಗುಡಗುಡಿ ಮಾತನಾಡಿದರು.

ರೈತ ಸಂಘಟದ  ಸದಸ್ಯರಾದ ರಾಮಣ್ಣಾ  ಕುರುಬಚನ್ನಾಳ, ತಮ್ಮಣ್ಣಾ ದೇವರ. ರಮೇಶ ಬಡಕಲ್ಲ. ರಾಮಣ್ಣಾ ಕುರಬಚನ್ನಾಳ. ಭೀಮಶಿ ದಾಸರಡ್ಡಿ. ಭೀಮಶಿ ದಳವಾಯಿ, ವೆಂಕಣ್ಣ ಚಿಟಗುಬ್ಬಿ,  ಈರಪ್ಪಾ ಅಂಗಡಿ. ರಾಮಣ್ಣಾ ಬಡಕಲ್ ಮುಂತಾದವರು ಧರಣಿಯಲ್ಲಿ ಪಾಲ್ಗೊಂಡಿದ್ದರು.

loading...

LEAVE A REPLY

Please enter your comment!
Please enter your name here