ಪುಸ್ತಕ ಓದಿ, ಜೀವನ ರೂಪಿಸಿಕೊಳ್ಳಿ

0
32

ಬೆಳಗಾವಿ 7: ಪುಸ್ತಕಗಳನ್ನು ಓದಬೇಕು, ಜ್ಞಾನ ಪಡೆಯಬೇಕು. ಆ ಜ್ಞಾನದಿಂದ ನಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ನಮ್ಮ ಜೀವನ ಇತರರಿಗೆ ಮಾದರಿಯಾಗುವಂತೆ ಬದುಕಬೇಕು ಎಂದು ಬೆಳಗಾವಿ ನಗರ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಬಿ.ಪುಂಡಲೀಕ ಹೇಳಿದರು.

ಅವರು ಇಂದು ನಗರದ ಪೋಲೀಸ ಹೆಡ್ ಕ್ವಾರ್ಟರ್ಸನಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ 21 ರಲ್ಲಿ ಹಮ್ಮಿಕೊಳ್ಳಲಾದ ನಗರ ವಲಯ ಮಟ್ಟದ ಶಿತೆಗೆಯಿರಿ ಪುಸ್ತಕ ಹೊರಗೆ- ಹಚ್ಚಿರಿ ಜ್ಷಾನದ ದೀವಿಗೆಷಿ ಕಾರ್ಯಕ್ರಮ ನಿಮಿತ್ತ ಲಿಶಾಲಾ ಶ್ರದ್ದಾ ವಾಚನಾಲಯಳಿ ಉದ್ಘಾಟಿಸಿ ಮಾತನಾಡುತ್ತಿದ್ದರು.

ಮುಂದುವರೆದು ಮಾತನಾಡಿದ ಅವರು, ಪ್ರಾಥಮಿಕ ಹಾಗೂ ಪ್ರಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಮಹತ್ವಕಾಂಕ್ಷಿ ಯೋಜನೆ ಇದಾಗಿದೆ. ಇದನ್ನು ಯಶಸ್ವಿಗೊಳಿಸಲು ಇಲಾಖೆಯ ಸರ್ವರೂ ಪ್ರಯತ್ನಿಸಬೇಕು.

ವಿಶೇಷವಾಗಿ ವಿದ್ಯಾರ್ಥಿಗಳು,  ಪಾಲಕರು ಮತ್ತು ಶಿಕ್ಷಕರು ಹೆಚ್ಚಿನ ಆಸಕ್ತ ತೋರಿಸಬೇಕು. ಈಗಾಗಲೇ ಎಲ್ಲ ಸರಕಾರಿ ಶಾಲೆಗಳಿಗೆ ಪುಸ್ತಕ ಖರೀದಿಗಾಗಿ ಅನುದಾನ ಒದಗಿಸಲಾಗಿದೆ. ಹಿರಿಯ ಪ್ರಾಥಮಿಕ ಶಾಲೆಗಳು ತಲಾ 12000 ರೂ. ಮತ್ತು ಕಿರಿಯ ಪ್ರಾಥಮಿಕ ಶಾಲೆಗಳವರು ತಲಾ 6000 ರೂ. ಬೆಲೆಯ ಪುಸ್ತಕಗಳನ್ನು ಖರೀದಿಸಿದ್ದಾರೆ. ಇದಲ್ಲದೇ ಶಾಲೆಗಳಲ್ಲಿ ಸಾಕಷ್ಟು ಪುಸ್ತಕಗಳಿವೆ ಎಂದು ತಿಳಿಸಿದರು.

ಶಾಲೆಯ ಮುಖ್ಯಾಧ್ಯಾಪಕರಾದ ಎನ್.ಐ ಹಕ್ಕಿಯವರು ಮಾತನಾಡುತ್ತ ವಾಚನಾಲಯದ ಪುಸ್ತಕಗಳನ್ನು ಮುಚ್ಚಿ ಇಡದೇ ಮಕ್ಕಳ  ಕೈಗೆಟುಕುವಂತೆ ವರ್ಗದ ಕೋಣೆಗಳಲ್ಲಿ ತೂಗು ಬಿಡಬೇಕೆಂದು ಸಲಹೆ ನೀಡಿದರು. ಉಪಸ್ಥಿತರಿದ್ದ ಗಣ್ಯರೆಲ್ಲರೂ ಮಕ್ಕಳೊಂದಿಗೇ ಕುಳಿತು  ಅರ್ಧ ಘಂಟೆ ಕಾಲ ಮೌನ ವಾಚನ ಮಾಡಿದರು.

ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ವಸಂತ ಕಟ್ಟಿ, ಕೆ ಬಿ ರಾವಳ, ಎಸ್ಡಿಎಮ್ಸಿ ಅಧ್ಯಕ್ಷರಾದ ರಮೇಶ ಗೋಂಧಳಿ, ಉಪಾಧ್ಯಕ್ಷ ಮಾರುತಿ ದೊಡಮನಿ, ಸದಸ್ಯೆ ಕಸ್ತೂರಿ ಚವ್ಹಾಣ ಹಾಜರಿದ್ದರು.

ಶಿಕ್ಷಕರಾದ ಎಸ್.ಸಿ.ಮುನವಳ್ಳಿ ನಿರೂಪಿಸಿದರು. ಎ.ಜಿ.ಬಸರೀಕಟ್ಟಿ ವಂದಿಸಿದರು.

 

loading...

LEAVE A REPLY

Please enter your comment!
Please enter your name here