ಅಂತ್ಯಗೊಂಡ ಅಧಿವೆಶನ

0
63

ಹೊಸದಾಗಿ ನಿರ್ಮಾಣ ಗೊಂಡಿರುವ ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ಈ ತಿಂಗಳ 5 ರಿಂದ 13 ರ ವರೆಗೆ ಚೊಚ್ಚಲು ಚಳಿಗಾಲದ ಅಧಿವೆಶನ ನಡೆಯಿತು. ಈ ಅವಧಿಯಲ್ಲಿ 7 ದಿನ ಕಲಾಪ ನಡೆದರೆ ಎರಡು ದಿನ ರಜೆ ಬಂದಿದ್ದವು.

ಈ ಏಳು ದಿನದ ಕಲಾಪದಲ್ಲಿ ಗದ್ದಲ ಗೊಂದಲಗಳು ನಡೆದವು ಹೊರಗೆ ಆಡಳಿತ ಮತ್ತು ಪ್ರತಿ ಪಕ್ಷದ ನಡುವೆ ಮಾತಿನ ಸಮರ ಧರಣಿ ನಡೆದರೆ ಹೊರಗೆ ವಿವಿಧ ಸಂಘಟನೆಗಳಿಂದ ಪ್ರತಿಭಟನೆಗಳ ಮಹಾಪೌರ ನಡೆಯಿತು. ನ್ಯಾಯಮೂರ್ತಿ ಸದಾಶಿವ ವರದಿಯ ಅನುಷ್ಠಾನಕ್ಕೆ  ಆಗ್ರಹಿಸಿ  ಪ್ರತಿಭಟನೆ ನಡೆದಾಗ ಅದು ಹಿಂಸಾಚಾರಕ್ಕೆ ತಿರುಗಿ ಬೆಳಗಾವಿ ಜಿಲ್ಲೆಯ ಎಸ್. ಪಿ. ಒಳಗೊಂಡು ಅನೇಕ ಪೋಲಿಸರು ಜೊತೆಗೆ ಪ್ರತಿಭಟನಾ ಕಾರರು ಕಲ್ಲು ತೂರಾಟ ಹಾಗೂ ಲಾಠಿ ಪ್ರಹಾರದಿಂದ ಗಾಯಗೊಂಡಿದ್ದಾರೆ. ಕಲ್ಲು ತೂರಾಟದಿಂದ ಅನೇಕ ಸರಕಾರಿ ವಾಹನಗಳು  ಜಖಂ ಗೊಂಡಿವೆ. ಅಧಿವೆಶನದ ಕೊನೆಯ ದಿನ ಪ್ರತಿ ಪಕ್ಷಗಳು ಒಂದು ದಿನ ಕಲಾಪವನ್ನು ವಿಸ್ತರಣೆ ಮಾಡಬೇಕು ಎಂದು ಬೇಡಿಕೆ ಮಂಡಿಸಿದ್ದವು. ಸರಕಾರ ಅದನ್ನು ಒಪ್ಪದೇ ಹೋದಾಗ ಪ್ರತಿ ಪಕ್ಷದವರು  ಮಧ್ಯದಲ್ಲಿಯೇ ಸಭಾ ತ್ಯಾಗ ಮಾಡಿ ಅಧಿವೇಶನವನ್ನು ಬಹಿಷ್ಕರಿಸಿದವು. ಇದರ ಲಾಭ ಪಡೆದ ಆಡಳಿತ ಪಕ್ಷದವರು ಗೋಹತ್ಯೆ ನಿಷೇಧ ಹಾಗೂ ಖಾಸಗಿ ವಿಶ್ವ ವಿದ್ಯಾಲಯಗಳಿಗೆ ಅನುಮತಿ ನೀಡುವ ವಿವಾದ ಗ್ರಸ್ತಿ ವಿದೇಯಕಗಳನ್ನು ಒಳಗೊಂಡು  ವಿಧಾನ ಸಭೆಯಲ್ಲಿ 13  ಹಾಗೂ ವಿಧಾನ ಪರಿಷತ್ತಿನಲ್ಲಿ  6 ವಿದೇಯಗಳನ್ನು ಯಾವುದೇ ಚರ್ಚೆ ಇಲ್ಲದೆ ಅಂಗೀಕರಿಸುವ ಮೂಲಕ ಪ್ರಜಾಪ್ರಭುತ್ವದ ವ್ಯವಸ್ಥೆಗೆ ಅಪಚಾರ ಮಾಡಿದೆ.

ಈ ಅಧಿವೆಶನದಲ್ಲಿ ಪೂರಕ ಬಜೆಟಿಗೆ ಅನುಮತಿ ಪಡೆಯಲಾಗಿದೆ. ಮಹಾ ಲೆಕ್ಕಪರಿಶೋಧಕರು ಅಕ್ರಮ ಗಣಿಗಾರಿಕೆ ಹಾಗೂ ಬಿಡಿಎ ಹಗರಣಗಳ ಬಗ್ಗೆ ನೀಡಿದ ಎರಡೂ ವರದಿಗಳನ್ನು ಮುಖ್ಯ ಮಂತ್ರಿ ಜಗದೀಶ ಶೆಟ್ಟರ ವಿಧಾನ ಮಂಡಳದಲ್ಲಿ ಮಂಡನೆ ಮಾಡಿದ್ದರು. ಆದರೂ ಕೊನೆಯ ಗಳಿಗೆಯಲ್ಲಿ ಈ ವರದಿಗಳನ್ನು ಮಂಡನೆ ಮಾಡುವ ಮೂಲಕ  ಈ ವರದಿಗಳ ಮೇಲೆ ಚರ್ಚೆ ನಡೆಯುವುದಕ್ಕೆ ಅವಕಾಶ ದೊರೆಯಲಿಲ್ಲ.

ಏಳು ದಿನಗಳ ಈ ಕಲಾಪಕ್ಕೆ 8 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ. 5 ಸಾವಿರ ಜನರಿಗೆ ಊಟಉಪಹಾರ ನೀಡಲು 75 ಲಕ್ಷ ರೂಪಾಯಿ ವೆಚ್ಚ ಮಾಡಲಾಗಿದೆ. ಆದರೆ ಯಾವುದೇ ಮಹತ್ವದ ಚರ್ಚೆ ನಡೆಯದೆ ಕಾಟಾಚಾರದ  ಅಧಿವೆಶನ ನಡೆಸಲು ಇಷ್ಟೊಂದು ಬಾರಿ ಹಣವನ್ನು ವೆಚ್ಚ ಮಾಡಿರುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಉಂಟಾಗಿದೆ.

ಉತ್ತರ ಕರ್ನಾಟಕದ ಗಂಡು ಮೆಟ್ಟಿನ ಕೇಂದ್ರವಾದ ಬೆಳಗಾವಿಯಲ್ಲಿ ಈ ಅಧಿವೆಶನ ನಡೆದರೂ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಯಾವುದೇ ಚರ್ಚೆ ನಡೆಯಲಿಲ್ಲ  ಒಂದು ದಿನ ಕೃಷ್ಣಾ ಯೋಜನೆಯ ಬಗ್ಗೆ  ಚರ್ಚೆ ನಡೆದಿರುವುದನ್ನು ಬಿಟ್ಟರೆ ಉಳಿದ ಎಲ್ಲ ದಿನ ಉತ್ತರ ಕರ್ನಾಟಕದ ಪ್ರಸ್ತಾಪವೇ ವಿಧಾನ ಮಂಡಳದಲ್ಲಿ ಆಗಲಿಲ್ಲ  ಉತ್ತರ ಕರ್ನಾಟಕದಲ್ಲಿ ಅಧಿವೇಶನ ನಡೆದರೂ ಅಲ್ಲಿಯ ಸಮಸ್ಯೆಗಳ ಬಗ್ಗೆ ಯಾವುದೇ  ರೀತಿಯ ಚರ್ಚೆ ನಡೆಯದಿರುವುದನ್ನು ನೋಡಿದರೆ ಇಷ್ಟೊಂದು ಹಣ ವೆಚ್ ಮಾಡಿ ಬೆಳಗಾವಿಯಲ್ಲಿ ಅಧಿವೇಶನ ನಡೆಸಿರುವುದು. ಯಾವ ಪುರುಷಾರ್ಥಕ್ಕಾಗಿ ಎಂಬ ಪ್ರಶ್ನೆ ಉಂಟಾಗಿದೆ.

ಅಧಿವೆಶನದ ಸಮಯದಲ್ಲಿಯೇ ಭಾಜಪ ಕೆಜೆಪಿ ತಿಕ್ಕಾಟದಿಂದ ಸರಕಾರ ಪತನವಾಗಬಹುದು ಎಂಬ ಭಯ ಉಂಟಾಗಿತ್ತು. ಆದರೆ ಸರಕಾರಕ್ಕೆ ಯಾವುದೇ ಅಪಾಯವಾಗದೆ ಕಲಾಪ ಸುಗಮವಾಗಿ ನಡೆದಿರುವುದೇ  ಒಂದು ಸಾಧನೆಯಾಗಿದೆ.

loading...

LEAVE A REPLY

Please enter your comment!
Please enter your name here