ಎಲ್ಲವೂ ಚುನಾವಣೆಗಾಗಿ

0
34

 ಕೇಹಿಂದ್ರ ಮತ್ತು ರಾಜ್ಯ ಸರಕಾರಗಳು ಹತ್ತಿರದಲ್ಲಿಯೇ ಚುನಾಬಣೆ ನಡೆಯಬಹುದು ಎಂಬ ನೀರೀಕ್ಷೆಯಲ್ಲಿ ಇರುವಂತೆ ಕಂಡು ಬಂದಿದೆ. ಅದೇ ಕಾರಣಕ್ಕಾಗಿ ಎರಡೂ ಸರಕಾರಗಳು ಮತದಾರರ ಮನವೊಲಿಸುವ ತಂತ್ರಗಾರಿಕೆಯಲ್ಲಿ ನಿರತವಾಗಿವೆ.

ಕೇಂದ್ರ ಸರಕಾರ ವಿವಿಧ ಯೋಜನೆಗಳ: ಅಡಿಯಲ್ಲಿ ಫಲಾನುಭವಿಗಳಿಗೆ ನೀಡುವ ಹಣವನ್ನು ನೇರವಾಗಿ ಅವರ ಬ್ಯಾಂಕ ಅಕೌಂಟಿಗೆ ಜಮಾ ಮಾಡುವ ನೂತನ ಯೋಜನೆಯನ್ನು ರೂಪಿಸಿ ಜಾರಿಗೊಳಿಸಲು  ಮುಂದಾಗಿದೆ. ಜನೇವರಿ 1 ರಿಂದ  ದೇಶದ 51 ಜಿಲ್ಲೆಗಳಲ್ಲಿ ಈ ಯೋಜನೆಯನ್ನು ಮೊದಲ ಹಂತದಲ್ಲಿ ಜಾರಿಗೆ ತಂದು ನಂತರ ದೇಶದ ಎಲ್ಲ ಕಡೆಗೆ ಈ ಯೋಜನೆಯನ್ನು ಜಾರಿಗೊಳಿಸುವುದು ನಿರ್ಧರಿಸಿದೆ. ಅದೇ ರೀತಿ ಸರಕಾರಿ ನೌಕರರ ಬಡತಿಯಲ್ಲಿ ಪರಿಶಿಷ್ಟ ವರ್ಗ ಪರಿಶೊಷ್ಟ ಜಾತಿಯ ನೌಕರರಿಗೆ ಮೀಸಲಾತಿ ನೀಡುವ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗಿದೆ. ಈಗಾಗಲೇ ಈ ಮಸೂದೆ ರಾಜ್ಯ ಸಭೆಯಲ್ಲಿ ಅಂಗೀಕಾರಗೊಂಡಿದೆ. ಲೋಕಸಭೆಯಲ್ಲಿ ಅಂಗೀಕಾರ ಗೊಳ್ಳಬೇಕಾಗಿದೆ.  ಹೈದ್ರಾರಾಬಾದ ಕರ್ನಾಟಕದ ಆರು ಜಿಲ್ಲೆಗಳಿಗೆ 371 ನೇ ಕಲಂ ಅಡಿಯಲ್ಲಿ  ವಿಶೇಷ ಸ್ಥಾನಮಾನ ನೀಡುವ ಸಂವಿದಾನ ತಿದ್ದುಪಡಿ ಮಸೂದೆಯನ್ನು ಇದೇ ಅಧಿವೇಶನದಲ್ಲಿ ಅಂಗೀಕರಿಸುವ ಸಾಧ್ಯತೆ ಇದೆ. ಮೇಲಿನ ಎಲ್ಲ ಚಟುವಟಿಕೆಗಳನ್ನು ನೋಡಿದರೆ ಈ ಎಲ್ಲ ಕಾರ್ಯ ಚುನಾವಣೆಯ ಉದ್ದೇಶದಿಂದಲೇ ನಡೆಯುತ್ತಿರುವುದನ್ನು ನಾವು ಗಮನಿಸಬೇಕಾಗಿದೆ.

ಅದೇ ರೀತಿಯಲ್ಲಿ ರಾಜ್ಯ ಸರಕಾರ ಬೆಳಗಾವಿಯಲ್ಲಿ ನಡೆದ ಚಳಿಗಾಲದ ವಿಧಾನ ಮಂಡಳ ಅಧಿವೇಶನದಲ್ಲಿ ವಿವಾದಕ್ಕೆ ಒಳಗಾಗಿದ್ದ ಗೋಹತ್ಯೆ ನಿಷೇಧ ವಿದೇಯಕವನ್ನು ಯಾವುದೇ ಚರ್ಚೆ ಇಲ್ಲದೆ ಪ್ರತಿ ಪಕ್ಷಗಳ ಗೈರು ಹಾಜರಿಯಲ್ಲಿ ಅಂಗೀಕರಿಸುವ ಕಾರ್ಯವನ್ನು ಮಾಡಿದೆ. ಇದರಿಂದ ಬಹುಸಂಖ್ಯಾತರಾದ ಹಿಂದೂ ಧರ್ಮದ ಜನರ ಮತಗಳನ್ನು ಸೆಳೆಯುವುದಕ್ಕೆ ಸಾಧ್ಯವಾಗುತ್ತದೆ ಎಂಬ ಆಲೋಚನೆಯಿಂದ ತರಾತುರಿಯಲ್ಲಿ ಈ ಕಾರ್ಯವನ್ನು ಮಾಡಲಾಗಿದೆ. ಇದು ಸಹ ಮುಂದೆ ಬರಲಿರುವ ಚುನಾವಣೆಗಾಗಿ ರಾಜ್ಯ ಸರಕಾರ ನಡೆಸುತ್ತಿರುವ ಕಸರತ್ತಿನ ಒಂದು ಭಾಗವಾಗಿದೆ. ಅದೇ ರೀತಿ  ಈ ಮೊದಲು ಕೇಂದ್ರ ಸರಕಾರ ಅಂಗೀಕಾರಕ್ಕೆ ಸಿದ್ಧ ಪಡಿಸಿದ್ದ ಹೈದ್ರಾಬಾದ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡುವ ವಿದೇಯಕಕ್ಕೆ ರಾಜ್ಯ ಸರಕಾರ ಹಲವಾರು ಆಕ್ಷೇಪಣೆಗಳನ್ನು ಸಲ್ಲಿಸಿದ್ದು ಇದರಿಂದ ಕೇಂದ್ರ ಸರಕಾರ ಸಧ್ಯಕ್ಗಕೆ ಈ ವಿದೇಯಕವನ್ನು ಸಂಸತ್ತಿನಲ್ಲಿ ಮಂಡನೆ ಮಾಡಬಾರದು ಎಂಬ ನಿರ್ಧಾರಕ್ಕೆ  ಬಂದಿತ್ತು. ಆದರೆ ರಾಜ್ಯ ಸರಕಾರ ತೆಗೆದುಕೊಂಡ ನಿಲುವಿಗೆ ಹೈದ್ರಾಬಾದ್ ಕರ್ನಾಟಕ ಪ್ರದೇಶದಲ್ಲಿ ತೀವ್ರ ಪ್ರತಿಭಟನೆಗಳು ಕಂಡು ಬಂದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಕೂಡಲೇ ಎಚ್ಚೆತ್ತುಕೊಂಡು ಈಗ ಇರುವ ಸ್ಥಿತಿಯಲ್ಲಿಯೇ  ವಿದೇಯಕ ಮಂಡಿಸಲು ಸಮ್ಮತಿ ನೀಡಿದೆ. ಇದು ಸಹ ಚುನಾವಣೆಯ ದೃಷ್ಠಿಯಿಂದ ರಾಜ್ಯ ಸರಕಾರ ತೆಗೆದುಕೊಂಡ ನಿಲುವಾಗಿದೆ.

ಈ ರೀತಿಯಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಚುನಾವಣೆಯ ಕಾರಣದಿಂದಾಗಿ ಜನರ ಮನ ಒಲಿಕೆಗೆ ಮುಂದಾಗಿವೆ. ಈ ಹಿಂದೆ ಮಳೆಗಾಲದಲ್ಲಿಯೇ ಲೋಡ ಶೆಡ್ಡಿಂಗ್ ಮಾಡಿದ್ದ ಇಂಧನ ಇಲಾಖೆ ಮುಂದಿನ ಬೇಸಿಗೆಯಲ್ಲಿ ವಿದ್ಯುತ್ ಸಮಸ್ಯೆ ಉಂಟಾಗುವುದಿಲ್ಲ. ಎಂಬ ಭರವಸೆಯನ್ನು ಜನರಿಗೆ ನೀಡತೊಡಗಿದೆ. ಇದು ಸಹ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಸರಕಾರ  ಜನರಿಗೆ ನೀಡುತ್ತಿರುವ ಭರವಸೆಯಾಗಿದೆ.

ಇದನ್ನು ನೋಡಿದರೆ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ  ಚುನಾವಣೆ ಬಂದಾಗ ಮಾತ್ರ ಜನರ ಕಷ್ಟ ಸುಖಗಳು ನೆನಪಾಗುತ್ತವೆ.  ಚುನಾವಣೆ ದೂರವಿದ್ದಾಗ ಜನರ ಕಷ್ಟಗಳು ಈ ಎರಡೂ ಸರಕಾರಗಳಿಗೆ ನೆನಪಾಗುವುದೇ ಇಲ್ಲ.

loading...

LEAVE A REPLY

Please enter your comment!
Please enter your name here