ನಾಚಿಕೆ ಗೇಡು

0
68

ನಮ್ಮ ದೇಶದಲ್ಲಿ ಪ್ರವಾಸ ಮಾಡುತ್ತಿರುವ ಇಂಗ್ಲೆಂಡ ಕ್ರಿಕೇಟ ಟೀಮಿನ ಜೊತೆಗೆ  ಟೀಮ ಇಂಡಿಯಾ 4 ಟೆಸ್ಟ ಪಂದ್ಯಗಳನ್ನು ಆಡಿದೆ ಇದರಲ್ಲಿ 2-1 ರ ಅಂತರದಿಂದ ಟೀಮ್ ಇಂಡಿಯಾ ಸರಣಿ ಸೋಲನ್ನು ಆನುಭವಿಸಿದೆ. ಅತ್ಯಂತ ಹೀನಾಯವಾದ  ಸೋಲಾಗಿದೆ. 28 ವರ್ಷಗಳ ನಂತರ ಭಾರತ ತಂಡ ತನ್ನ ತವರು ನೇಲದಲ್ಲಿ ಮೊದಲ ಬಾರಿ ಅಂಗ್ಲರಿಗೆರ ಶರಣಾಗಿದೆ.  8 ವರ್ಷದ ನಂತರ  ತವರು ನೆಲದಲ್ಲಿ ಟೀಮ್ ಇಂಡಿಯಾ ವಿದೇಶಿ ತಂಡ ಒಂದರ ಮೂಂದೆ  ಕೈಚೆಲ್ಲಿ ಕುಳಿತಿದೆ. ಈ ಸಮಗ್ರ  ಆಟಗಳಲ್ಲಿ ಭಾರತೀಯ ಆಟಗಾರರು ಬ್ಯಾಟಿಂಗ್ ಬೌಲಿಂಗ್ ಫಿಲ್ಡಿಂಗ್ ಹೀಗೆ ಎಲ್ಲ ವಿಭಾಗಗಳಲ್ಲಿ ವಿಫಲರಾಗಿದ್ದಾರೆ. ಅಷ್ಟೇ ಅಲ್ಲ ಟೀಮ ಇಂಡಿಯಾ ಆಟಗಾರ ಗೌತಮ ಗಂಭೀರ ವಿರುದ್ಧ ನಾಯಕ ಮಹೇಂದ್ರ ಸಿಂಗ್ ದೋಣಿ ಕ್ರಿಕೇಟ್ ನಿಯಂತ್ರಣ ಮಂಡಳಿಗೆ ದೂರು ನೀಡಿ ಗಂಭೀರ ಸ್ವಾರ್ಥ ದೋರಣೆಯನ್ನು ತಮ್ಮ ಆಟಗಾರಿಕೆಯಲ್ಲಿ ಪ್ರದರ್ಶಿಸುತ್ತಿದ್ದಾರೆ. ಅವರು  ಟೀಮು ಇಂಡಿಯಾದ ಹಿತಾಸಕ್ತಿಗಳನ್ನು ಕಾಪಾಡುತ್ತಿಲ್ಲ ಎಂದು ದೂರು ನೀಡಿದ್ದಾರೆ. ಇದನ್ನು ನೋಡಿದರೆ ಟೀಮ ಇಂಡಿಯಾದಲ್ಲಿ ಒಗ್ಗಟ್ಟು ಮಾಯವಾಗಿದೆ. ಗುಂಪುಗಾರಿಕೆ ನಡೆಯುತ್ತಿದೆ. ಎಂಬ ಅನುಮಾನಗಳು ಕಾಡುತ್ತಿವೆ. ಒಗ್ಗಟ್ಟು ಇಲ್ಲದೆ ಹೋದರೆ ಸಾಂಘೀಕವಾದ ಆಟ ಹೊರ ಹೊಮ್ಮುವದಿಲ್ಲ ಆ ಕಾರಣಕ್ಕಾಗಿಯೇ ಈ ಪಂದ್ಯಾವಳಿಯಲ್ಲಿ ನಮ್ಮ ತಂಡ ಈ ರೀತಿಯ ಹಿನಾಯ ಸೋಲನ್ನು ಅನುಭವಿಸಿದೆ ಎಂದು ಹೇಳಬೇಕಾಗುತ್ತದೆ.

ಅತ್ಯಂತ ಸುಲಭವಾಗಿ ಗೆಲ್ಲುವ ಎಲ್ಲ ಅರ್ಹತೆಗಳು ನಮ್ಮ ತಂಡದಲ್ಲಿ ಇದ್ದವು ಜೊತೆಗೆ ಬ್ಯಾಟಿಂಗ ಮತ್ತು ಬೌಲಿಂಗ್ ವಿಭಾಗದಲ್ಲಿ ನುರಿತ ಆಟಗಾರರು ಇದ್ದಾರೆ. ಈ ಎಲ್ಲ ಅರ್ಹತೆಗಳು ಇದ್ದರೂ ಸಹ ಟೀಮ ಇಂಡಿಯಾ ಹಿನಾಯವಾದ ಸ್ಥಿತಿಯಲ್ಲಿ ಈ ಸರಣಿ ಸೋಲನ್ನು ಪಡೆದುಕೊಂಡಿರುವುದನ್ನು ನೋಡಿದರೆ ಒಗ್ಗಟ್ಟು ಇಲ್ಲದಿರುವುದೇ ಇದಕ್ಕೆ ಮುಖ್ಯ ಕಾರಣವಾಗಿದೆ ಎಂದು ಹೇಳಬೇಕಾಗುತ್ತದೆ. ಭಾರತೀಯ ಕ್ರಿಕೇಟ ನಿಯಂತ್ರಣ ಮಂಡಳಿ ಈಗ ಅನುಭವಿಸಿದ ಸೋಲನ್ನು ಗಂಭೀರವಾಗಿ ಪರಿಗಣಿಸಿ ಅದರ ಕಾರಣಗಳನ್ನು ಕಂಡು ಹಿಡಿದು ಅದನ್ನು ನಿವಾರಿಸುವ ಕಾರ್ಯಕ್ಕೆ ಮುಂದಾಗಬೇಕಾಗಿದೆ.

ದೋಣಿ ಮತ್ತು ಆಟಗಾರರ ಮಧ್ಯೆ ಇರುವ ಭಿನ್ನಾಭಿಪ್ರಾಯಗಳನ್ನು ನಿವಾರಿಸಿ ಎಲ್ಲ ಆಟಗಾರರು ಒಗ್ಗಟ್ಟಿನಿಂದ ಆಟವಾಡುವ ವಾತಾವರಣವನ್ನು ಭಾರತೀಯ ಕ್ರಿಕೇಟ ನಿಯಂತ್ರಣ ಮಂಡನೆ ರೂಪಿಸಬೇಕಾದ ಅನಿವಾರ್ಯತೆ ಇದೆ. ಈ ವಿರಸ ಇದೇ ರೀತಿ ಮುಂದುವರೆದರೆ ಮುಂದಿನ ಪಂದ್ಯಗಳಲ್ಲಿಯೂ ಇದೇ ರೀತಿಯ ಸೋಲನ್ನು ನಮ್ಮ ತಂಡ ಅನುಭವಿಸಬೇಕಾಗುತ್ತದೆ. ಆದ್ದರಿಂದ ನಿಯಂತ್ರಣ ಮಂಡನೆ ಆದಷ್ಟು ಬೇಗ ಈಗ ತಂಡದಲ್ಲಿ ಕಂಡು ಬಂದಿರುವ ಭಿನ್ನಮತವನ್ನು ನಿವಾರಿಸುವ ಕಾರ್ಯವನ್ನು  ಮಾಡಬೇಕಾಗಿದೆ. ಆದ್ದರಿಂದ ತಂಡ ಮತ್ತೆ ಬಲಿಷ್ಠವಾದ  ಎದ್ದು ನಿಲ್ಲಬೇಕಾದರೆ ಈ  ಭಿನ್ನಮತ ನಿವಾರಣೆ ಮಾಡುವುದು ಆಧ್ಯತೆಯ ಕಾರ್ಯವಾಗಿದೆ. ಆದ್ದರಿಂದ ಎಲ್ಲ ಕೆಲಸ ಬಿಟ್ಟು ಮೊದಲು ಈ ಕಾರ್ಯವನ್ನು ಭಾರತೀಯ ಕ್ರಿಕೇಟ ನಿಯಂತ್ರಣ ಮಂಡಳಿ ಮಾಡಬೇಕಾಗಿದೆ.

loading...

LEAVE A REPLY

Please enter your comment!
Please enter your name here