ಅನಂತವಿಶ್ವ ಸೇವಾ ಟ್ರಸ್ಟ್ ಉದ್ಘಾಟನೆ

0
23

ಬೆಳಗಾವಿ 04-ಸದಾಶಿವ ನಗರದಲ್ಲಿ ಶ್ರೀ ಗಣಪತಿ ದೇವಸ್ಥಾನದಲ್ಲಿ ಅನಂತವಿಶ್ವ ಟ್ರಸ್ಟ (ರಿ) ಉದ್ಘಾಟನಾ ಸಮಾರಂಭವು ಪೂಜೆಯೊಂದಿಗೆ ಗುರುವಾರ ನೆರವೇರಿತು.

ಈ ಕಾರ್ಯಕ್ರಮಕ್ಕೆ ಆಗಮಿಸಿದ ಸರ್ವರನ್ನು ಅನಂತ ವಿಶ್ವಸೇವಾ ಟ್ರಸ್ಟನ ಟ್ರಸ್ಟಿಯಾಗಿರುವ ರಾಜಶೇಖರ ಬಳೂಟಗಿ ಇವರು ಸ್ವಾಗತಿಸಿದರು. ಈ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ರೂಪಾ ಎಸ್.ಪಾಟೀಲ ಇವರು ಉದ್ಘಾಟಿಸಿ ಮಾತನಾಡಿ, ನಮ್ಮ ದೇಶದಲ್ಲಿ ಅನೇಕ ಸಂಘ ಸಂಸ್ಥೆಗಳು ಟ್ರಸ್ಟಗಳು ಬಡವರಿಗೆ ಆಸರೆಯಾಗಿವೆ.

ಇದೇ ರೀತಿ ಅನಂತವಿಶ್ವ ಸೇವಾ ಟ್ರಸ್ಟ ವತಿಯಿಂದ ದೇಶದ ಜನರಿಗಾಗಿ ಸೇವಾ ಕಾರ್ಯಕ್ರಮಗಳು ನಡೆಯುವಂತಾಗಲಿ ಎಂದು ಹಾರೈಸಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ಪ್ರಜ್ವಲ ಸೇವಾ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ವೈಶಾಲಿ ಇವರು ಮಾತನಾಡಿ ಶುಭಾಶಯವನ್ನು ತಿಳಿಸುತ್ತಾ ಇವನಾರವ, ಇವನಾರವ ಎಂದೆನಿಸದೇ ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯ ಎನ್ನುವಂತೆ ಅನಂತವಿಶ್ವ ಸೇವಾ ಟ್ರಸ್ಟನ ಸೇವಾ ಕಾರ್ಯಗಳಿಂದ ಜನರ ಮನಸ್ಸಿನಲ್ಲಿ ಸ್ಥಿರವಾಗಿ ನೆಲೆಸುವಂತೆ ಒಳ್ಳೆಯ ಕಾರ್ಯಗಳು ಜರುಗಲಿ ಎಂದು ಹೇಳಿದರು. ಕುಮಾರ ವಿಶ್ವಸಾಗರ ವಂದಿಸಿದರು.

 

loading...

LEAVE A REPLY

Please enter your comment!
Please enter your name here