ಅಭಿವೃದ್ದಿಯಲ್ಲಿ ಶಾಸಕ ಅಭಯ ಹಸ್ತಕ್ಷೇಪ

0
42

ಬೆಳಗಾವಿ 8- ಹಲವು ಅಭಿವೃದ್ದಿ ಯೋಜನೆಗಳಲ್ಲಿ ಹಸ್ತಕ್ಷೇಪ ಮಾಡುವುದು ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲರಿಂದ ತಿಳಿದುಕೊಳ್ಳಬೇಕು.

ಇವರ ಇನ್ನೊಂದು ರಾಜಕೀಯ ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಅಭಯ ಪಾಟೀಲರಿಂದಲೇ ನಡೆದಿದೆ ಎನ್ನುವ ದೂರು ಉತ್ತರ ವಿಧಾನಸಭಾ ಕ್ಷೇತ್ರದ ಜನತೆಯಿಂದ ಅಸಮಾಧಾನದ ಕೂಗಾಗಿ ಹೊರಹೊಮ್ಮಿದೆ. ನೂರಾರು ಎಕರೆ ಪ್ರದೇಶದ ಟಿಳಕವಾಡಿಯ ಸಮೃದ್ಧ ಹಸಿರಿನ ಹಾಗೂ ಸಸ್ಯೌಷಧಿ ಸಿರಿಯ ನೆಲದಲ್ಲಿ ಸರಕಾರ ಹೆರಿಟೇಜ್ ಪಾರ್ಕ್ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿದೆ. ದೇಶದ ಅತ್ಯುನ್ನತ ವಿನ್ಯಾಸ ಕಂಪನಿಯಾದ ದೆಹಲಿಯ ಸ್ಕೂಲ್ ಆಫ್ ಪ್ಲ್ಯಾನಿಂಗ್ ಆರ್ಕಿಟೆಕ್ಚರ್ ಸಂಸ್ಥೆಯಲ್ಲಿ ಹೆರಿಟೇಜ್ ಪಾರ್ಕ್ನ ನೀಲನಕ್ಷೆ ಸಿದ್ಧಗೊಳ್ಳುತ್ತಿದೆ. ಇಲ್ಲಿನ ಹಸಿರು ಸಿರಿಯನ್ನು ಇನ್ನಷ್ಟು ನಳನಳಿಸುವಂತೆ ಯೋಜನೆ ಸಿದ್ಧಗೊಳ್ಳುತ್ತಿದೆ.

ವಿಷಯವೆಂದರೆ ಬೆಳಗಾವಿ ಉತ್ತರ ವಿಧಾನಸಭಾ ವ್ಯಾಪ್ತಿಗೆ ಒಳಪಡುವ ಕೊಲ್ಲಾಪುರ ವೃತ್ತದ ಸಮೀಪದ ಧರ್ಮನಾಥ ಭವನದ ಪ್ರದೇಶದಲ್ಲಿ ಸರಕಾರ ಲೇಜರ್ ಪಾರ್ಕ್ ನಿರ್ಮಾಣಕ್ಕೆ ಮುಂದಾಗಿದೆ. ಈ ಪಾರ್ಕ್ನಲ್ಲಿ ಇಂಡೋ ಸ್ಟೇಡಿಯಂ, ಸ್ಪೌರ್ಟ್ಸ್ ಕಾಂಪ್ಲೆಕ್ಸ ಸನ್ನದ್ಧಗೊಳ್ಳಲಿವೆ. ಈ ಮಹತ್ವಾಕಾಂಕ್ಷಿ ಯೋಜನೆ ಉತ್ತರ ವಿಧಾನಸಭಾ ಕ್ಷೇತ್ರದ ಹೆಮ್ಮೆಯಾಗಿದೆ. ಈ ಯೋಜನೆಯನ್ನು ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಕೊಂಡೊಯ್ಯಬೇಕೆಂಬ ತವಕ ಶಾಸಕ ಅಭಯ ಪಾಟೀಲರದ್ದಾಗಿದೆ ಎನ್ನುವ ಅಸಮಾಧಾನಗಳು ಉತ್ತರ ಕ್ಷೇತ್ರದ ಪ್ರಜ್ಞಾವಂತರ ಮಾತಾಗಿವೆ.

ಸಧ್ಯ ಟಿಳಕವಾಡಿಯ ವ್ಯಾಕ್ಸಿನ್ ಡಿಪೋದಲ್ಲಿನ ಹೆರಿಟೇಜ್ ಪಾರ್ಕ್ನಲ್ಲಿಯೇ ಲೇಜರ್ ಪಾರ್ಕ್ ಕೊಂಡೊಯ್ಯಬೇಕೆನ್ನುವ ತರಾತುರಿಯಲ್ಲಿ ಅಭಯ ಪಾಟೀಲ ಪಾರ್ಕ್ ರಾಜಕೀಯ ಆರಂಭಿಸಿದ್ದಾರೆ. ಗುತ್ತಿಗೆದಾರರಿಗೆ ಕಿರುಕುಳ ನೀಡುತ್ತಿದ್ದಾರೆ ಎನ್ನುವ ಮಾತುಗಳು ಈಗಾಗಲೇ ಚದುರಿಕೊಂಡಿವೆ. ಸಮೃದ್ಧ ಹಸಿರಿನ ವ್ಯಾಕ್ಸಿನ್ ಡಿಪೋಕ್ಕೆ ಲೇಜರ್ ಪಾರ್ಕ್ ಕೊಂಡೊಯ್ದರೆ ಅಲ್ಲಿನ ಈಗಿರುವ ಹಸಿರು ಸಿರಿಯೆಲ್ಲ ಹೇಳ ಹೆಸರಿಲ್ಲದಂತೆ ಕರಗಿ ಹೋಗುವ ಆತಂಕವಿದೆ. ಸಧ್ಯದ ಚುನಾವಣೆಯ ಪ್ರಸಿದ್ದಿ ಹಾಗೂ ಪ್ರಚಾರಕ್ಕಾಗಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಉತ್ತರ ಕ್ಷೇತ್ರದ ಲೇಜರ್ ಪಾರ್ಕ್ನ್ನು ತಮ್ಮ ದಕ್ಷಿಣ ಕ್ಷೇತ್ರಕ್ಕೆ ಕಬಳಿಸುವ ರಾಜಕೀಯ ತಂತ್ರದಲ್ಲಿದ್ದಾರೆ ಎನ್ನುವ ಅಸಮಾಧಾನಗಳು ಕೇಳಿ ಬರುತ್ತಿವೆ.

ಅಭಿವೃದ್ದಿಯಲ್ಲಿ ಸಮಾನತೆ ಇರಬೇಕು. ಈ ಕಾರಣದಿಂದಲೇ ನಂಜುಂಡಪ್ಪ ವರದಿ ಸಾಕಷ್ಟು ಪ್ರಚಾರದಲ್ಲಿದೆ. ಸರಕಾರ ಇದರ ಅನುಷ್ಠಾನದ ಪ್ರಯತ್ನದಲ್ಲಿಯೂ ಇದೆ. ಉತ್ತರದ ಯೋಜನೆಗಳನ್ನು ದಕ್ಷಿಣಕ್ಕೆ ಕಬಳಿಸಬೇಕೆನ್ನುವ ಅಭಯ ಅವರ ರಾಜಕೀಯವನ್ನು ಉತ್ತರ ಭಾಗದ ಜನ ಸಹಿಸಲಾರರು ಎನ್ನುವ ಮಾತುಗಳು ಪ್ರತಿಭಟನೆಯ ರೂಪ ತಳೆದರೂ ಅಚ್ಚರಿ ಪಡಬೇಕಿಲ್ಲ. ಉತ್ತರ ವಿಧಾನಸಭಾ ಕ್ಷೇತ್ರಕ್ಕೂ ಉತ್ತಮ ಯೋಜನೆಗಳು ಇರಬೇಕು ಎನ್ನುವ ಪ್ರಜ್ಞೆ ಅಭಯ ಪಾಟೀಲರಿಗೆ ಬರಬೇಕಿದೆ. ಅಲ್ಲದೆ ರಾಜ್ಯದ ಎಲ್ಲ ಯೋಜನೆಗಳು ದಕ್ಷಿಣ ಕ್ಷೇತ್ರಕ್ಕಿರಲಿ ಎನ್ನುವ ಸ್ವಾರ್ಥ ಅತಿಯಾದದ್ದು. ಲೇಜರ್ ಪಾರ್ಕ್ ಹೊತ್ತೊಯ್ದು ವ್ಯಾಕ್ಸಿನ್ ಡಿಪೋಕ್ಕೆ ತಳ್ಳಿದರೆ ವ್ಯಾಕ್ಸಿನ್ ಡಿಪೋದಲ್ಲಿನ ಸುಂದರ ಹಸಿರು ಪರಿಸರ ಹೇಳ ಹೆಸರಿಲ್ಲದಂತಾಗುವುದರಲ್ಲಿ ಎರಡು ಮಾತಿಲ್ಲ ಎನ್ನುತ್ತಾರೆ ಪರಿಸರವಾದಿಗಳು.

ಅಭಯ ಪಾಟೀಲರು ತಮ್ಮ ರಾಜಕೀಯ ದೃಷ್ಟಿಯನ್ನು ಬದಲಿಸಿ ಒಟ್ಟಾರೆ ಜನರ ಹಿತದೃಷ್ಟಿಯನ್ನು ಗಮನಿಸುವುದು ಉತ್ತರಮ.

loading...

LEAVE A REPLY

Please enter your comment!
Please enter your name here