ಅಹವಾಲು ಆಲಿಸದ ಅಧಿಕಾರಿಗೆ ಮುತ್ತಿಗೆ

0
35

ಹುಬ್ಬಳ್ಳಿ, ಫೆ.2- ಹು-ಧಾ ಅವಳಿನಗರದ ಮಧ್ಯೆ ನಿರ್ಮಿಸಲು ಉದ್ದೇಶಿಸಲಾದ ಬಿಆರ್ಟಿಎಸ್ ಯೋಜನೆಯಲ್ಲಿನ ಸಮಸ್ಯೆಗಳ ಬಗೆಗೆ ಚರ್ಚಿಸಲು ಇಂದು ಕರೆದ ಸಭೆಯಲ್ಲಿ ತಮ್ಮ ಆಹವಾಲುಗಳಿಗೆ ಸರಿಯಾಗಿ ಸ್ಪಂದನೆ ಸಿಕ್ಕಿಲ್ಲ ಎಂದು ಆರೋಪಿಸಿ ಮಾಜಿ ಸಚಿವ ಜಬ್ಬಾರಖಾನ್ ಹೋನ್ನಳಿ ಸೇರಿದಂತೆ ಹಲವಾರು ಮುಖಂಡರುಗಳನ್ನೊಳಗೊಂಡ ಬಾಧಿತರು ಇಂದು ಯೋಜನಾಧಿಕಾರಿಗಳಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಘಟನೆ ಇಲ್ಲಿನ ಗೋಕುಲ ರಸ್ತೆಯ ಸಾಮ್ರಾಟ್ ಹಾಲ್ನಲ್ಲಿ ಜರುಗಿತು.

ಅರ್ಬನ್ ಲ್ಯಾಂಡ್ ಟ್ರಾನ್ಸ್ ಪೋರ್ಟ್ ಡಿಪರ್ಟ್ಮೆಂಟ್ನ ಕಾರ್ಯದರ್ಶಿ ಮಂಜುಳಾ ವಿ. ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಬಾಧಿತ ಸಭೆಯಲ್ಲಿ ಯೋಜನೆಯಿಂದ ಆಗುವ ಸಮಸ್ಯೆಗಳಿಗೆ ಸೂಕ್ತಸ್ಪಂದನ ಸಿಗದೇ ಕೇವಲ ಅಧಿಕಾರಿಗಳು ಹೇಳುವ ಮಾತನ್ನೆ ಕೇಳುವಂತಾಗಿದೆ ಎಂದು ಆರೋಪಿಸಿದ ಜಬ್ಬಾರಖಾನ್ ಹೊನ್ನಳ್ಳಿ,ಎ.ಎಂ.ಹಿಂಡಸಗೇರಿ, ಮಹ್ಮದ ಯುಸೂಫ್ ಸವಣೂರ, ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಹಾಗೂ ಮುಖಂಡರುಗಳಾದ ಪ್ರೊ.ಐ.ಜಿ.ಸನದಿ, ಶಫಿ ಮುದ್ದೇಬಿಹಾಳ ಸೇರಿದಂತೆ ಇನ್ನಿತರ ಬಾಧಿತರು ಸಭೆಯನ್ನು ಬಹಿಷ್ಕರಿಸಿ ಯೋಜನೆಯ ಕಾರ್ಯದರ್ಶಿ ಮಂಜುಳಾ ಅವರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಈ ಯೋಜನೆಯಡಿ ಉಣಕಲ್ ಭಾಗದಲ್ಲಿ ಅಂಡರಪಾಸ್ ನಿರ್ಮಿಸುವುದರಿಂದ ಆ ಪ್ರದೇಶ ಇಬ್ಬಾಗವಾದಂತಾಗುತ್ತದ. ಅಲ್ಲದೇ ರಸ್ತೆ ಬದಿ ವ್ಯಾಪಾರಸ್ಥರಿಗೆ ತುಂಬಾ ಅನಾನುಕೂಲತೆ ಉಂಟಾಗಲಿದ್ದು, ಈ ಹಿನ್ನೆಲೆಯಲ್ಲಿ ಪ್ಲೈ ಓವರ್ ನಿರ್ಮಿಸುವಂತೆ ಆಧಿಕಾರಿಗಳಿಗೆ ಬಾಧಿತರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮಂಜುಳಾ ಅವರು ಪ್ಲೈ ಓವರ್ ನಿರ್ಮಾಣಕ್ಕೆ ಬಹಳಷ್ಟು ಜಾಗ ಬೇಕಾಗುತ್ತದೆ. ಅಲ್ಲದೇ ಮೆಟ್ಟಿಲು ಹತ್ತಿ ಕೆಳಗಿಳಿಯಲು ವೃದ್ದರಿಗೆ ತೊಂದರೆಯಾಗುತ್ತಿದೆ. ಆದರೆ ಅಂಡರ್ ಪಾಸ್ನಿಂದ ಈ ಸಮಸ್ಯೆ ಉದ್ಬವವಾಗುವುದಿಲ್ಲ ಎಂದರು. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ, ಇದನ್ನು ಹೊರತುಪಡಿಸಿ ವ್ಯಾಪಾರಸ್ಥರ ಹಾಗೂ ಇನ್ನಿತರ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಿದಲ್ಲಿ ಪರಾಮರ್ಶಿಸಲಾಗುವುದೆಂದು ಸ್ಟಷ್ಟಪಡಿಸಿದರು.

loading...

LEAVE A REPLY

Please enter your comment!
Please enter your name here