ಹುಬ್ಬಳ್ಳಿ ಗ್ಲಾಸ್ಹೌಸ್ ಕಳಪೆ ಕಾಮಗಾರಿಗೆ ಅಕ್ರೌಶ

0
29

ನಿರ್ಮಿತಿ ಕೇಂದ್ರ ಕಪ್ಪು ಪಟ್ಟಿಗೆ ಸೇರಿಸಲು ಮೇಸ್ತ್ತ್ರಿ ಆಗ್ರಹ

ಹುಬ್ಬಳ್ಳಿ.ಫೆ.2-ಇಂದಿರಾ ಗಾಜಿನ ಮನೆ ಆವರಣದ ನವೀಕರಣ ಕಾಮಗಾರಿ ಆತ್ಯಂತ ಕಳಪೆಯಾದ ಹಿನ್ನೆಲೆಯಲ್ಲೇ ಪುಟಾಣಿ ರೈಲು ಹಳಿ ತಪ್ಪಿ 11 ವರ್ಷದ ವಿದ್ಯಾರ್ಥಿಯೋರ್ವನನ್ನು ಬಲಿ ತೆಗೆದುಕೊಂಡಿದ್ದು ಇಲ್ಲಿನ ಕಾಮಗಾರಿ ನಡೆಸಿದ ನಿರ್ಮಿತಿ ಕೇಂದ್ರವನ್ನು ಕಪ್ಪು ಪಟ್ಟಿಗೆ ಸೇರಿಸಬೇಕೆಂದು ಮಾಜಿ ಮೇಯರ್ ಹಾಗೂ ಕೆಜೆಪಿ ಮುಖಂಡ ವೆಂಕಟೇಶ ಮೇಸ್ತ್ತ್ರಿ ಆಗ್ರಹಿಸಿದ್ದಾರೆ.

ಈಗಾಗಲೇ ಹಲವು ಬಾರಿ ನಿರ್ಮಿತಿ ಕೇಂದ್ರದ ಕಳಪೆ ಕಾಮಗಾರಿ ಬಗೆಗೆ ಪಾಲಿಕೆ ಸಭೆಯಲ್ಲಿ ಹಾಗೂ ಜಿಲ್ಲಾಡಳಿತದ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಮುಗ್ದ ಜೀವವೊಂದು ಬಲಿಯಾಗಿದೆ ಎಂದು ಅವರು ಹೇಳಿದ್ದಾರೆ,

ಯಡಿಯೂರಪ್ಪ ಅವಧಿಯಲ್ಲಿ ಬಿಡುಗಡೆಯಾದ 200 ಕೋಟಿ ಅಭಿವೃದ್ದಿ ನಿಧಿಯ ಪೈಕಿ 8 ಕೋಟಿ ರೂ.ವೆಚ್ಚದಲ್ಲಿ ಇಂದಿರಾ ಗಾಜಿನ ಮನೆ ನವೀಕರಣ ಕಾಮಗಾರಿ ನಡೆದಿದ್ದು ಇದು ಸಂಪೂರ್ಣವಾಗಿ ಕಳಪೆ ಮಟ್ಟದ್ದಾಗಿದೆ ಎಂದವರು ಹೇಳಿದ್ದಾರೆ.

ಗಾಜಿನ ಮನೆಯಲ್ಲಿ ಸಂಭವಿಸಿದ ಅವಘಡದಲ್ಲಿ ಶುಭಂ ಕಲಾಲ ಎಂಬ ಬಾಲಕ ಮೃತಪಟ್ಟಿದ್ದರೂ ಜವಾಬ್ದಾರಿಯುತ ಜನಪ್ರತಿನಿಧಿಗಳಾರು ಅವರ ನಿವಾಸಕ್ಕೆ ತೆರಳಿ ಸಾಂತ್ವನ ಹೇಳಿಲ್ಲದಿರುವುದು ದುರದೃಷ್ಟಕರ ಎಂದಿದ್ದಾರೆ.

loading...

LEAVE A REPLY

Please enter your comment!
Please enter your name here