ಮಾಸಿಕ ಆಪ್ತಾಲೋಚನೆ ಸಭೆ

0
45

ಬೈಲಹೊಂಗಲ 8- ಸಮೀಪದ ಸಮೂಹ ಸಂಪನ್ಮೂಲ ಕೇಂದ್ರ ತಲ್ಲೂರ ಕೇಂದ್ರದಲ್ಲಿ ಇತ್ತೀಚೆಗೆ ಮಾಸಿಕ ಆಪ್ತಾಲೋಚನೆ ಸಭೆ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಶಿಕ್ಷಕರಿಗೆ ಶಿಕಿಶೋರಿಷಿಯರ ಆಹಾರ ಬಗ್ಗೆ ಉಪನ್ಯಾಸವನ್ನು ಮಬನೂರ ಶಾಲೆ ಸಹಶಿಕ್ಷಕರಾದ ವಿ.ಬಿ.ದೇವರಡ್ಡಿ ನೀಡಿದರು.

ಇದೇ ಸಂದರ್ಭದಲ್ಲಿ ಸಿಆರ್ಸಿ ವತಿಯಿಂದ ಶಿಕ್ಷಣ ಇಲಾಖೆ ವತಿಯಿಂದ ಜಿಲ್ಲಾ ಮಟ್ಟದ ಪ್ರಶಸ್ತಿ ಪಡೆದ ಶ್ರೀಮತಿ ಜಿ.ಎನ್. ಮಲಕಣ್ಣವರ(ಸ.ಕಿ.ಪ್ರಾ.ಶಾಲೆ ಶ್ರೀರಂಗಪುರ) ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಶಿಕರ್ನಾಟಕ ಶಿಕ್ಷಣ ರತ್ನಷಿ ಪ್ರಶಸ್ತಿ ಪಡೆದ ಡಿ.ಡಿ.ಭೋವಿ (ಸ.ಹಿ.ಪ್ರಾ.ಶಾಲೆ ತಲ್ಲೂರ) ಅದೇ ರೀತಿಯಾಗಿ ಕರ್ನಾಟಕ ರಾಜ್ಯ ಪ.ಜಾ/ಪ.ಪಂ. ಇಲಾಖೆ ವತಿಯಿಂದ ಪ್ರಶಸ್ತಿ ಪಡೆದ ಎಮ.ಎಸ್.ಹಾದಿಮನಿ ಇವರನ್ನು ಸನ್ಮಾನಿಸಲಾಯಿತು.

ಇದೆ ಸಂದರ್ಭದಲ್ಲಿ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಸ್.ಸಿ.ಕರಿಕಟ್ಟಿ ಅವರು ಭೇಟಿ ನೀಡಿ ಸಭೆ ಕುರಿತು ಹರ್ಷ ವ್ಯಕ್ತ ಪಡಿಸಿ ತಮ್ಮ ವಿಚಾರಗಳನ್ನು ಶಿಕ್ಷಕರೊಂದಿಗೆ ಹಂಚಿಕೊಂಡರು. ಯರಗಟ್ಟ್ಘಿತಲ್ಲೂರ ಪ್ರಾ.ಆ.ಕೇಂದ್ರದ ಆರೊಗ್ಯ ಸಿಬ್ಬಂದಿಯವರು ಹಾಜರಿದ್ದರು.

 

loading...

LEAVE A REPLY

Please enter your comment!
Please enter your name here