ರಾಜ್ಯದಲ್ಲಿ ಬಿಎಸ್ಆರ್ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ-ನವೀನಕುಮಾರ ಗುಳಗಣ್ಣವರ್ ವಿಶ್ವಾ

0
28

ಯಲಬುರ್ಗಾ,ಫೆ,12- ಸ್ವಾಭಿಮಾನಿ ಬಿ.ಶ್ರೀರಾಮುಲು ಅವರು ಬಡವರ ಶ್ರಮಿಕರ ಸಲುವಾಗಿ ಹಗಲಿರುಳು ಹೋರಾಡುವ ಮೂಲಕ ಬಿ.ಶ್ರೀರಾಮುಲು  ಅವರ ನೇತೃತ್ವದ ಬಿಎಸ್ಆರ್ ಕಾಂಗ್ರೇಸ್ ಪಕ್ಷದತ್ತ ನಾಡಿನ ಪ್ರಜ್ಞವಂತಾ ಮತದಾರರು ಒಲವು ವ್ಯಕ್ತವಾಗುತ್ತಿರುವ ಹಿನ್ನಲೆಯಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಬಹುಮತದೊಂದಿಗೆ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವೊಂದು ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ತಾಲೂಕಾ ಬಿಎಸ್ಆರ್ ಪಕ್ಷದ ಯುವ ಮುಖಂಡರು,ನಿಯೋಜಿತ ಅಭ್ಯರ್ಥಿ ನವೀನಕುಮಾರ ಗುಳಗಣ್ಣನವರ್ ವಿಶ್ವಾಸ ವ್ಯಕ್ತಪಡಿಸಿದರು. ತಾಲೂಕಿನ ಸಂಕನೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸ್ವಾಭಿಮಾನಿ ಶ್ರೀಮುಲು ಸಂದೇಶ ಯಾತ್ರೆ ಕಾರ್ಯಕ್ರಮದಲ್ಲಿ  ಭಾಗವಹಿಸಿ ಮಾತನಾಡುತ್ತಿದ್ದ ಅವರು,.ಇಂದಿನ ದುಬಾರಿ ದಿನಾಮಾನಗಳಲ್ಲಿ ಸುಮಾರು 43 ಸಾವಿರ ಸಾಮೂಹಿಕ ವಿವಾಹಗಳನ್ನು ಮಾಡಿ,ಅವರ ಜೀವನಕ್ಕೆ ಆಧಾರ ಸ್ತಂಬ್ದವಾಗಿ ನಿಂತ ಧೀಮಂತ ವ್ಯಕ್ತಿ.ಅಂದು ರಾಜ್ಯದಲ್ಲಿ ಹೊಸ ಗಾಳಿಯನ್ನೆ ದೃಷ್ಠಿಸಿದ ಬಿ.ಶ್ರೀರಾಮುಲು ಮತ್ತು ಜಿ.ಜನಾರ್ದನ ರೆಡ್ಡಿ ಅವರಿಬ್ಬರ ಶ್ರಮದಿಂದಾಗಿ ಬಿಜೆಪಿ ಪಕ್ಷ ದಕ್ಷೀಣ ಭಾರತದಲ್ಲಿಯೇ ಪ್ರಥಮಭಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಕಷ್ಟು ಶ್ರಮ ವಹಿಸಿದ್ದವರು.ಅವರ ಪ್ರತಿಫಲದಿಂದಾಗಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂತು.ಆದರೆ ಅವರ ಉಪಯೋಗವನ್ನು ಬಳಸಿಕೊಂಡ ಬಿಜೆಪಿ ಸರಕಾರ,ಇವರಿಬ್ಬರನ್ನು ಬೆಳೆಸಬಾರದು ಎಂಬ ಉದ್ದೇಶದಿಂದ ಅವರ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿ,ದೂರ ಇಟ್ಟರು.ಶ್ರೀರಾಮುಲು ಮತ್ತು ಜನಾರ್ಧನ ರೆಡ್ಡಿ ಅವರಿಗೆ ಬಿಜೆಪಿ ಸರಕಾರ ಅನ್ಯಾವನ್ನು ಎಸಗುವ ಮೂಲಕ ದ್ರೌಹ ಮಾಡಿದ್ದಾರೆ ಎಂದಾ ಅವರು,ಹುಟ್ಟು ಹೋರಾಟಗಾರ ಆಗಿರುವ ಶ್ರೀರಾಮುಲು ಅವರು ರಾಜಕೀಯಕ್ಕಗಿ ತಮ್ಮ ಪ್ರಾಣವನ್ನೆ ಮುಡಿಪಿಟ್ಟು.ತ್ಯಾಗ ಬಲಿದಾನದಿಮದ ತಮ್ಮ ಆಸ್ತಿತ್ವವನ್ನು ಉಳಿಸಿಕೊಂಡು ಬಂದ ದಿಟ್ಟ ಹೋರಾಟಗಾಗಿರುವ ಬಿ.ಶ್ರೀರಾಮುಲು ಅವರು ಸಚಿವರಾಗಿದ್ದ ಸಂದರ್ಬದಲ್ಲಿ ಆರೋಗ್ಯ ಇಲಾಖೆಯಲ್ಲಿ ಹೊಸ ಬದಲಾವಣೆ ತರುವ ಮೂಲಕ ಇಲಾಖೆಗೆ ಹೊಸ ಚೈತನ್ಯ ತುಂಬಿದ್ದಾರೆ.ರಾಜ್ಯದ ಇತಿಹಾಸದಲ್ಲಿಯೇ ಆರೋಗ್ಯ ಕ್ಷೇತ್ರದಲ್ಲಿ ಮೊಟ್ಟ ಮೊದಲ ಬಾರಿಗೆ ಒಂದು ಅಭಿವೃದ್ದಿಯ ಕ್ರಾಂತಿಯನ್ನು ಎಬ್ಬಿಸಿ ಇಡೀ ದೇಶದಲ್ಲಿಯೇ ಕರ್ನಾಟಕ ರಾಜ್ಯದ ಆರೋಗ್ಯ ಇಲಾಕೆಯನ್ನು ನಂ 1 ರ ಸ್ಥಾನಕ್ಕೆ  ನಿಲ್ಲಿಸುವ ಮೂಲಕ  ತಂದು ಕೊಟ್ಟಿದ್ದಾರೆ.ಆರೋಗ್ಯ  ರಕ್ಷ ಕವಚ 108 ಅಂಬುಲೈನ್ಸ ಯೋಜನೆ ಇಡೀ ರಾಜ್ಯದ 6 ಕೋಟಿ ಕನ್ನಡಿಗರ ಪ್ರೀತಿಗೆ ಪಾತ್ರವಾಗಿದೆ,ನಮ್ಮ ತಂದೆಯವರು ಶಾಸಕರಾಗಲು ಬಿ.ಶ್ರಿರಾಮುಲು,ಮತ್ತು ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಅವರ ಹೋರಾಟದ ಫಲವಾಗಿ ತಾಲೂಕಿನ ಮತದಾರರ ಆಶೀರ್ವಾದದಿಂದ ಬಹುಮತದೊಂದಿಗೆ ಚುನಾಯಿತರಾದರು.ಆದರೆ ಅನರೋಗ್ಯದಿಂದ ಬಳಲುತ್ತಿದ್ದರು ಕೂಡಾ ನಮ್ಮನ್ನು ಸರಕಾರ ಮರೆತು ಬಿಟ್ಟಿದ್ದನ್ನು ವಿಷಾದ ವ್ಯಕ್ತಪಡಿದರು..,ಬಿಎಸ್ಆರ್ ಕಾಂಗ್ರೇಸ್ ಪಕ್ಷ ಮುಂದಿನ ಚುನಾವಣೆಯಲ್ಲಿ ಅಧಿಕಾರಿಕ್ಕೆ ಬಂದರೆ ರಾಜ್ಯದಲ್ಲಿ ಹೊಸ ಬದಲಾವಣೆಯನ್ನು ತರುಬೇಕೆಂಬ ಕನಸು ಕಂಡಿರುವ ಶ್ರೀರಾಮುಲು ಅವರಿಗೆ ರಾಜ್ಯದ ಜನರು ಆಶೀರ್ವಾದಿಸುವ ಮೂಲಕ ಶ್ರೀ ರಾಮುಲು ಅವರ ಕೈ ಬಲಪಡಿಸುವಂತೆ ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಗ್ರಾಮದ ವಿವಿಧ ಪಕ್ಷದ ಮುಖಂಡರು ಬಿಎಸ್ ಆರ್ ಪಕ್ಷಕ್ಕೆ ಸೇರ್ಪಡೆಯಾದರು.ಅವರನ್ನು ಪಕ್ಷಕ್ಕೆ ನವೀನಕುಮಾರ ಗುಳಗಣ್ಣವರ್ ಬರಮಾಡಿಕೊಂಡರು.ಇದಕ್ಕೂ ಮೊದಲು ಗ್ರಾಮದ ವರ್ಮರಮಠ,ವಿಜಯಮಹಾಂತೇಶ್ವರ ಮಠ,ಮಾರುತಿ ದೇವಸ್ಥಾನಕ್ಕೆ ಭೆಟಿ ನೀಡಿ ದೇವರ ದರ್ಶನ ಪಡೆದುಕೊಂಡರು.ಈ ಸಂದರ್ಭದಲ್ಲಿ ಗ್ರಾಮದ ಹಿರಿಯ ಮುಖಂಡ ಗುರುರಾಜ ದೇಸಾಯಿ ಪ್ರಾಸ್ತವಿಕವಾಗಿ ಮಾತನಾಡಿರು.ಬಿಎಸ್ ಆರ್ ಪಕ್ಷದ ಜಿಲ್ಲಾ ಎಸ್.ಟಿ.ಮಹಿಳಾ ಘಟಕದ ಅಧ್ಯಕ್ಷೆ ಶಾಂತಾ ನಾಯಕ,ದೊಡ್ಡನಗೌಡ ತೊಟಗಂಟಿ,ಶಿವಕುಮಾರ ಗುಳಗಣ್ಣನವರ್,ಶೇಖರಗೌಡ ಚಿಕ್ಕೊಪ್ಪ,ಷಣ್ಮುಖಪ್ಪ ರಾಂಪೂರು,ನಾಗನಗೌಡ ಕಡಬಲಕಟ್ಟಿ,ಮಲ್ಲಿಕಾರ್ಜುನ ಕುರಟ್ಟಿ,ಚನ್ನಬಸಪ್ಪ ರಾಟಿ,ಬಸವರಾಜ ಬಿಜಕಲ್,ವಿಕ್ರಮ ಛಲವಾದಿ,ವೀರೇಶ್ ಹಟ್ಟಿ,ಶರಣಪ್ಪಗೌಡ,ಕಲ್ಲಪ್ಪ ನಾಯ್ಕರ,ರಮೇಶ್ ಕೊಪ್ಪದ,ಖಾಜಾವಲಿ ಅಮರಾವತಿ,ಖಾಸಿಂಸಾಬ ಅಮರವತಿ,ಕಳಕಪ್ಪ ಅಂಗಡಿ,ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here