ಇಂದಿನ ದಿನಗಳಲ್ಲಿ ಹಣಕಾಸು ವಹಿವಾಟು ನಡೆಸಲು ಬ್ಯಾಂಕ್ ಅವಶ್ಯ : ಗುರುಬಸವರಾಜ

0
30

ಹೊಸಪೇಟೆ, ಫೆ.12: ಆರ್ಥಿಕ ಬೆಳವಣಿಗೆಯ ಇಂದಿನ ದಿನಗಳಲ್ಲಿ ಹಣಕಾಸು ವಹಿವಾಟು ನಡೆಸಲು ಬ್ಯಾಂಕ್ ಅವಶ್ಯ ಎಂದು  ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಅಲ್ಲಂ ಗುರುಬಸವರಾಜ ಹೇಳಿದರು.

ನಗರದಲ್ಲಿ ಸೋಮವಾರ ವಿಜಯನಗರ ಕಾಲೇಜಿನ ಆವರಣದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಹೈದ್ರಾಬಾದ್ ಕಾಲೇಜ್ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಬ್ಯಾಂಕಿನಲ್ಲಿ ಅಕೌಂಟ್ ತೆರೆದು ಬ್ಯಾಂಕಿನ ವಹಿವಾಟ ನಡೆಸುವ ಮೂಲಕ ಇದನ್ನು ಅರ್ಥ ಮಾಡಿಕೊಳ್ಳಬೇಕು, ಆರ್ಥಿಕ ವ್ಯವಸ್ಥೆ ಅರ್ಥ ಮಾಡಿಕೊಳ್ಳಲು ಇದು ನೆರವಾಗುತ್ತದೆ ಎಂದರು.

ಈ ಸಮಾರಂಭದಲಿ ವೀ.ವಿ. ಸಂಘದ ಉಪಾಧ್ಯಕ್ಷ ಕೆ.ಎಂ.ಮಹೇಶ್ವರಯ್ಯ, ಕಾರ್ಯದರ್ಶಿ ಎಚ್.ಎಂ. ಗುರುಸಿದ್ದಮೂರ್ತಿ, ಸಹ ಕಾರ್ಯದರ್ಶಿ ಜೆ.ಎಸ್. ನೇಪಾಕ್ಷಪ್ಪ, ಕೋಶಾಧಿಕಾರಿ ಸಂಗನಕಲ್ ಹಿಮಂತರಾಜ, ಕಾಲೇಜ್ ಆಡಳಿತ ಮಂಡಳಿ ಅಧ್ಯಕ್ಷ ಸಾಲಿ ಸಿದ್ದಯ್ಯಸ್ವಾಮಿ, ಬ್ಯಾಂಕ್ ಶಾಖೆಯ ವ್ಯವಸ್ಥಾಪಕ ಎ.ಎಸ್. ಕುಶ್, ಕಾಲೇಜಿನ ಪ್ರಾಚಾರ್ಯ ಎಸ್. ಎಸ್. ಪೊಲೀಸ್ ಪಾಟೀಲ ಹಾಗೂ ಆಡಳಿತ ಮಂಡಳಿ ಸದಸ್ಯರಾದ ಗುಡೇಕೋಟೆ ನಾಗರಾಜ, ಎಂ.ವಿರೂಪಾಕ್ಷಯ್ಯ, ಎಂ.ವಿಜಯಲಕುಮಾರ್, ವೀರೇಶ ಜವಳಿ ಅಧ್ಯಾಪಕರು ಸಿಬ್ಬಂದಿ ಹಾಜರಿದ್ದರು.

loading...

LEAVE A REPLY

Please enter your comment!
Please enter your name here