ಮತದಾರರ ಜಾಗೃತಿ ಜಾಥಾ

0
24

ಘಟಪ್ರಭಾ 4: ಸಮೀಪದ ಧುಪದಾಳ ಗ್ರಾಮ ಪಂಚಾಯತದ ವತಿಯಿಂದ ಗ್ರಾಮದಲ್ಲಿ ಶುಕ್ರವಾರ ಬೈಕ ರ್ಯಾಲಿ ಮೂಲಕ ಸ್ವೀಪ್ ಕಾರ್ಯಕ್ರಮದಡಿ ಮತದಾರರ ಜಾಗೃತಿ ಕುರಿತು ಜಾಥಾ ನಡೆಸಿದರು.

ಇಂದು ಮುಂಜಾನೆ ಗ್ರಾ.ಪಂ ಅಭಿವೃದ್ದಿ ಅಧಿಕಾರಿ ಜಯರಾಮ ಕಾದ್ರೌಳ್ಳಿ ಅವರ ನೇತೃತ್ವದಲ್ಲಿ ಪ್ರಾರಂಭಗೊಂಡ ರ್ಯಾಲಿಯಲ್ಲಿ ಮತದಾನದ ಜಾಗೃತಿ ಕುರಿತು ಬರೆದ ಅನೇಕ ಶ್ಲೌಘಣಗಳನ್ನು ತಮ್ಮ ಬೈಕಗಳ ಮುಂಭಾಗದಲ್ಲಿ ಅಂಟಿಸಿ ಗ್ರಾಮದಲ್ಲಿ ಸಂಚರಿಸಿ ಮತದಾನದ ಕುರಿತು ಮತದಾರರಲ್ಲಿ ಜಾಗೃತಿ ಮೂಡಿಸಿದರು. ಗುಮಾಸ್ತ ಸುಭಾಸ ತಳಗೇರಿ, ಸಿಬ್ಬಂದಿಗಳಾದ ಮಹಾಂತೇಶ  ದೊಡ್ಡಲಿಂಗಪ್ಪಗೋಳ, ಅಮೃತ ಮುತ್ತೆಪ್ಪಗೋಳ, ವಿಶಾಲ ಜಗದಾಳ, ವಸಂತ ತಳಗೇರಿ ಇದ್ದರು

loading...

LEAVE A REPLY

Please enter your comment!
Please enter your name here