ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯ ಪ್ರವೇಶಕ್ಕೆ ಅರ್ಜಿ

0
46

ಬೆಳಗಾವಿ,ಮೇ.15-ಸಮಾಜ ಕಲ್ಯಾಣ ಇಲಾಖೆಯಿಂದ ಬೆಳಗಾವಿ ನಗರದಲ್ಲಿ ನಡೆಯುತ್ತಿರುವ ಈ ಕೆಳಕಂಡ ವಿದ್ಯಾರ್ಥಿ ನಿಲಯಗಳಿಗೆ 2013-14 ನೇ ಸಾಲಿಗಾಗಿ ಪ್ರವೇಶ ಪಡೆಯಲು ಪರಿಶಿಷ್ಟ ಜಾತಿ/ವರ್ಗ ಮತ್ತು ಇತರೆ ಹಿಂದುಳಿದ ವರ್ಗದ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಂದ ಅರ್ಜಿಗಳನ್ನು ಅಹ್ವನಿಸಲಾಗಿದೆ. ಪ.ಜಾತಿ ಸರಕಾರಿ ಮೆಟ್ರಿಕ ಪೂರ್ವ ಬಾಲಕರ ವಸತಿ ನಿಲಯ ನೆಹರುನಗರ ಬೆಳಗಾವಿ (5ನೇ ರಿಂದ  10ನೇ ತರಗತಿ ವರೆಗೆ), ಪ.ಜಾತಿ ಸರಕಾರಿ ಮೆಟ್ರಿಕ ಪೂರ್ವ ಬಾಲಕಿಯರ ವಸತಿ ನಿಲಯ ಸದಾಶಿವ ನಗರ ಬೆಳಗಾವಿ (3 ರಿಂದ 10 ನೇ ತರಗತಿ ವರಗೆ), ಪರಿಶಿಷ್ಟ ವರ್ಗದ ಸರಕಾರಿ ಮೆಟ್ರಿಕ ಪೂರ್ವ ಬಾಲಕರ ವಸತಿ ನಿಲಯ ಅಜಂನಗರ ಬೆಳಗಾವಿ         (5ನೇ ರಿಂದ  10ನೇ ತರಗತಿ ವರೆಗೆ),  ಸರಕಾರಿ ಆಶ್ರಮ ಶಾಲೆ ಬಾಳೇಕುಂದ್ರಿ ಬಿ.ಕೆ.(ಕ್ಯಾಂಪ) ಬೆಳಗಾವಿ, ರಾಮತೀರ್ಥ ನಗರ ಬೆಳಗಾವಿ (1ನೇ ರಿಂದ 5ನೇ ತರಗತಿ ವರೆಗೆ) ಹಾಗೂ ಸರಕಾರಿ ಆಶ್ರಮ ಶಾಲೆ ನೆಹರು ನಗರ ಬೆಳಗಾವಿ (1ನೇ ರಿಂದ 5ನೇ ತರಗತಿ ವರೆಗೆ) ವಸತಿ ನಿಲಯಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.  ಸದರಿ ವಿದ್ಯಾರ್ಥಿ ನಿಲಯಗಳಲ್ಲಿ ಖಾಲಿ ಇರುವ ಸ್ಥಳಗಳಿಗೆ ಮಾತ್ರ ಅರ್ಹತೆ ಆಧಾರದ ಮೇಲೆ ಆಯ್ಕೆ ಸಮಿತಿ ಮುಖಾಂತರ ಆಯ್ಕೆ ಮಾಡಿ ಪ್ರವೇಶ ನೀಡಲಾಗುವುದು. ಬೆಳಗಾವಿ ತಾಲೂಕಿನ ವಿದ್ಯಾರ್ಥಿಗಳಿಗೆ ಮೊದಲನೇ ಪ್ರಾಶ್ಯಸ್ತ ನೀಡಲಾಗುವುದು. ಸಾರ್ವಜನಿಕರು/ಪಾಲಕರು ತಮ್ಮ ಮಕ್ಕಳಿಗೆ ಪ್ರವೇಶ ಕಲ್ಪಿಸಿಕೊಡಲು ಆಸಕ್ತಿ ಹೊಂದಿದಲ್ಲಿ ಪ್ರವೇಶ ಅರ್ಜಿಗಳನ್ನು ತಾಲೂಕಾ ಸಮಾಜ ಕಲ್ಯಾಣ ಅಧಿಕಾರಿಗಳು ಬೆಳಗಾವಿ ಕಚೇರಿಯಿಂದ ಪಡೆದುಕೊಂಡು ಮೇ 25 ರೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗೆ ತಾಲೂಕಾ ಸಮಾಜ ಕಲ್ಯಾಣ ಅಧಿಕಾರಿಗಳು ಬೆಳಗಾವಿ ಇವರನ್ನು ಸಂಪರ್ಕಿಸಲು ಕೋರಲಾಗಿದೆ

loading...

LEAVE A REPLY

Please enter your comment!
Please enter your name here