ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಹ.ಮ.ಪೂಜಾರಗೆ ಆಹ್ವಾನ

0
31

ಸಿಂದಗಿ, 11- ತಾಲೂಕಿನ ಬೋರಗಿ-ಪುರದಾಳ ಗ್ರಾಮದ ಶ್ರೀ ವಿಶ್ವರಾಧ್ಯ ಮಠದಲ್ಲಿ ಜೂ.15 ರಂದು ನಡೆಯಲಿರುವ ಪ್ರಥಮ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಮಕ್ಕಳ ಸಾಹಿತಿ ಹ.ಮ.ಪೂಜಾರ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿರುವುದು ಸಮ್ಮೇಳನಕ್ಕೆ ಹೆಮ್ಮೆಯ ಸಂಗತಿ ಎಂದು ಜಿಲ್ಲೆಯ ಪತ್ರಿಕಾರಂಗದ ಭೀಷ್ಮ ರೇ.ಚ.ರೇವಡಿಗಾರ ಹೇಳಿದರು.

ಸೋಮವಾರ ಹ.ಮ. ಪೂಜಾರ ಅವರ ಸ್ವಗೃಹದಲ್ಲಿ ರೇ.ಚ.ರೇವಡಿಗಾರ ಪ್ರತಿಷ್ಠಾನ ಮತ್ತು ಕಾರ್ಯನಿರತ ಪತ್ರಕರ್ತ ಸಂಘದ ವತಿಯಿಂದ ಹಮ್ಮಿಕೊಳ್ಳಲಾದ ಸರ್ವಾಧ್ಯಕ್ಷರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಮಕ್ಕಳ ಭವಿಷ್ಯದ ಕಾಳಜಿಯಿಟ್ಟುಕೊಂಡು ಮಕ್ಕಳ ಸಾಹಿತ್ಯವನ್ನು ಸೃಷ್ಠಿಸಿದವರು ಬೆರಳೆಣಿಕೆಯಷ್ಟು ಸಾಹಿತಿಗಳು ಮಾತ್ರ. ಅಂತಹವರ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುವವರೇ ಹ.ಮ.ಪೂಜಾರ. ಈ ದೃಷ್ಠಿಯಿಂದ ಪ್ರಥಮ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು ಸೂಕ್ತವ್ಯಕ್ತಿಗೆ ಸೂಕ್ತ ಸ್ಥಾನಮಾನ ಕಲ್ಪಿಸಿದಂತಾಗಿದ್ದು ಸರ್ವರಿಗೂ ಖುಷಿ ತಂದುಕೊಟ್ಟ ವಿಷಯವೆಂದು ರೇವಡಿಗಾರ ಹೇಳಿದರು.

ಬಳಿಕ ಸನ್ಮಾನ ಸ್ವೀಕರಿಸಿ ಮಾತನಾಡಿದ ಹ.ಮ.ಪೂಜಾರ ಅವರು, ತಾವು ಶಿಕ್ಷಕರಾಗಿದ್ದುಕೊಂಡು ಮಕ್ಕಳ ಸಾಹಿತ್ಯ ರಚಿಸುತ್ತಾ ಕಲಿಸುವಿಕೆಯಲ್ಲಿ ವಿಭಿನ್ನ ಪ್ರಯೋಗ ಮಾಡುತ್ತಾ, ಮನರಂಜನೆಯ ಜೊತೆಗೆ ಮಕ್ಕಳಿಗೆ ಪಾಠ ಮಾಡಿದ್ದು, ಮಕ್ಕಳ ಜೊತೆಗೆ ಮಕ್ಕಳಾಗಿತ್ತಿದ್ದುದನ್ನು ಸ್ಮರಿಸಿಕೊಂಡರಲ್ಲದೇ ಮಕ್ಕಳೊಂದಿಗಿನ ತಮ್ಮ ಶಿಕ್ಷಕ ವೃತ್ತಿಯಲ್ಲಿ ತಾವು ಧನ್ಯತಾಭಾವ ಅನುಭವಿಸಿದ್ದಾಗಿ ಹೇಳಿದರು.

ರೇ.ಚ.ರೇವಡಿಗಾರ ಪ್ರತಿಷ್ಠಾನದ ಅಧ್ಯಕ್ಷ ರಂಗನಾಥ ಥೋರ್ಪೆ, ಕಾರ್ಯದರ್ಶಿ ಆನಂದ ಶಾಬಾದಿ, ರವಿಚಂದ್ರ ಮಲ್ಲೇದ ಹಾಗೂ ಪತ್ರಕರ್ತರಾದ ವಿಜಯಕುಮಾರ ಪತ್ತಾರ, ಪಂಡಿತ ಯಂಪೂರೆ, ರಮೇಶ ಪೂಜಾರ, ಸೋಮು ಹೂಗಾರ, ಗುರು ಬಿದರಿ, ಸಂತೋಷ ಜಾಲವಾದಿ, ಸಿದ್ದಲಿಂಗ ಕಿಣಗಿ ಸೇರಿದಂತೆ ಹಲವ ರಿದ್ದರು.

loading...

LEAVE A REPLY

Please enter your comment!
Please enter your name here