ಬೀಳಗಿ ಪಟ್ಟಣಕ್ಕೆ ಸಿಹಿಸುದ್ದಿ; ದಿನ ಬಿಟ್ಟು ದಿನಕ್ಕೆ ಕುಡಿವ ನೀರು

0
23

 

ಬೀಳಗಿ: ಮೊದಲು ನಾಲ್ಕು ದಿನಕ್ಕೊಮ್ಮೆ ಸಿಗುತ್ತಿದ್ದ ಕುಡಿವ ನೀರು,  ಜೂ,11 ರಿಂದ ಪಟ್ಟಣದ ನಾಗರಿಕರಿಗೆ ಒಂದು ದಿನಬಿಟ್ಟು ಒಂದು ದಿನಕ್ಕೆ ಕುಡಿವ ನೀರು ಕೊಡಲು ಮುಂದಾಗಿದ್ದಾರೆ ಎಂದು ಹೇಳಿರುವ ಪಪಂ ಸದಸ್ಯ ಪಡಿಯಪ್ಪ ಕರಿಗಾರ, ಕುಡಿವ ನೀರಿನ ಭವಣೆಯಿಂದ ಬಳಲುತ್ತಿದ್ದ ನಗರದ ನಾಗರಿಕರಿಗೆ ಸಿಹಿಸುದ್ದಿ ನೀಡಿದ್ದಾರೆ. ಶಾಸಕ ಜೆ.ಟಿ.ಪಾಟೀಲರ ಕಟ್ಟುನಿಟ್ಟಿನ ಸೂಚನೆ ಮೇರೆಗೆ ಕಾರ್ಯಪ್ರವೃತ್ತರಾಗಿರುವ ಪಪಂ ಇಲಾಖೆ ಎಚ್ಚೆತ್ತುಕೊಂಡಂತಾಗಿದೆ.

ಸ್ಥಳೀಯ ಜಿಎಲ್ಬಿಸಿ ಪ್ರವಾಸಿ ಮಂದಿರದಲ್ಲಿ ಸೋಮವಾರ ಈ ಕುರಿತು ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಪಟ್ಟಣದ ಕುಡಿವ ನೀರು ಸರಬರಾಜು ಯೋಜನೆಯನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ, ಗುಳಬಾಳ ಜಾಕವೆಲ್ನಲ್ಲಿ ಸಧ್ಯ ಅಳವಡಿಸಲಾಗಿರುವ ನೀರು ಎತ್ತುವ 40 ಅಶ್ವಶಕ್ತಿಯ ಎರಡು ವಿದ್ಯುತ್ ಯಂತ್ರಗಳನ್ನು ಬದಲಿಸಿ 75 ಅಶ್ವಸಕ್ತಿಯ ಎರಡು ವಿದ್ಯುತ್ ಯಂತ್ರಗಳನ್ನು ಅಳವಡಿಸುವುದು ಹಾಗೂ ಏರ್ ವಾಲ್ಗಳನ್ನು ದುರಸ್ತಿಗೊಳಿಸುವದರ ಜೊತೆಗೆ ಇನ್ನಿತರ ನೀರು ಸರಬರಾಜು ಕಾಮಗಾರಿಗಳ ಬಲವರ್ಧನೆಗಾಗಿ 1.20 ಕೋಟಿ ಅಂದಾಜು ವೆಚ್ಚದ ಯೋಜನೆ ರೂಪಿಸಿ ಪ್ರಸ್ತುತ ವರದಿಯನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಇಲಾಖೆಯ ಮುಖಾಂತರ ಸರಕಾರದ ಮಂಜೂರಾತಿಗಾಗಿ ಕಳುಹಿಸಲಾಗಿದೆೆ ಎಂದು ಪಪಂ ಮುಖ್ಯಾಧಿಕಾರಿ ಬಿ.ಎಂ.ಬಡಿಗೇರ ತಿಳಿಸಿದ್ದಾರೆ ಎಂದು ಹೇಳಿದ ಅವರು, ಇದರಿಂದ ಪಟ್ಟಣದ ಕುಡಿವ ನೀರು ವ್ಯವಸ್ಥೆ ಇನ್ನಷ್ಟು ಸುಧಾರಿಸಲಿದೆ ಎಂದರು. ಆದರೂ ಕೂಡಾ ಈಗಿರುವ ಮೂಲಸೌಕರ್ಯವನ್ನೇ ಬಳಸಿಕೊಂಡು ಮಂಗಳವಾರದಿಂದಲೇ ಪಟ್ಟಣದ ಎಲ್ಲ ವಾರ್ಡಗಳಿಗೂ ಪ್ರತಿ ನೀರಿನ ಪಾಳೆಯಲ್ಲಿ 45 ನಿಮಿಷ ಅವಧಿ ನಿಗಧಿ ಪಡಿಸಿ ದಿನ ಬಿಟ್ಟು ದಿನಕ್ಕೆ ನೀರು ಒದಗಿಸಲು ಪಪಂ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಕಾರಣ ಪಟ್ಟಣದ ನಾಗರಿಕರು ತಮ್ಮ ನಳಗಳಿಗೆ ಚಾವಿ ಅಳವಡಿಸಬೇಕು ಹಾಗೂ ನೀರು ವ್ಯರ್ಥವಾಗಿ ಪೋಲಾಗದಂತೆ ಜಾಗೃತೆ ವಹಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ

ಪಟ್ಟಣದಲ್ಲಿ ಅಕ್ರಮವಾಗಿ ನಳಗಳ ಸಂಪರ್ಕ ಪಡೆದುಕೊಂಡಿರುವ ನಾಗರಿಕರು ಕೂಡಲೇ ಜೂನ್ ಅಂತ್ಯದೊಳಗಾಗಿ ತಮ್ಮ ನಳಗಳಿಗೆ ಪಪಂ ನಿಂದ ಅಧಿಕೃತ ಪರವಾನಿಗೆ ಪಡೆದುಕೊಳ್ಳಲು ಸೂಚನೆ ನೀಡಿ. ಇಲ್ಲವಾದರೆ ಸೂಕ್ತ ದಂಡ ವಿಧಿಸುವ ಮೂಲಕ ಅಕ್ರಮ ನಳಗಳಿಗೆ ಕಡಿವಾಣ ಹಾಕಲು ಪಪಂ ಅಧಿಕಾರಿಗಳು ಮುಂದಾಗಬೇಕು ಎಂದು ಒತ್ತಾಯಿಸಿದರು.

ಬಿ.ಆರ್.ಸೊನ್ನದ, ಅಜೀಜ ಬಾಯೀಸರಕಾರ, ಸಂತೋಷ ಜಂಬಗಿ, ಶಿವಾನಂದ ಮಾದರ, ಶ್ರೀಶೈಲ ತಳೇವಾಡ, ಎಂ.ಎಂ.ಖಾಜಿ, ಬಸವರಾಜ ಪಾಟೀಲ, ಬಾಬು ಬೀಳಗಿ ಇತರರು ಗೋಷ್ಠಿಯಲ್ಲಿದ್ದರು.

 

loading...

LEAVE A REPLY

Please enter your comment!
Please enter your name here