ಮಣ್ಣಿನ ಮಡಿಕೆಯಲ್ಲಿ ಮಾಡಿದ ಅಡುಗೆ ರುಚಿಯೇ ಬೇರೆ

0
107

ಮಣ್ಣಿನ ಮಡಕೆಂುುಲ್ಲಿ ಮಾಡಿದ ಅಡುಗೆಂುು ಸ್ವಾದನೇ ಬೇರೆ. ಆ ರುಚಿಂುುನ್ನು ಕುಕ್ಕರ್ ಅಥವಾ ಅಲ್ಯುಮಿನಿಂುುಂ ಪಾತ್ರೆ ಬಳಸಿ ಮಾಡಿದರೆ ದೊರೆಂುುುವುದಿಲ್ಲ. ಇಲ್ಲಿ ನಾವು ಪನ್ನೀರ್ ಗ್ರೇವಿಂುು ರೆಸಿಪಿ ನೀಡಿದ್ದೇವೆ, ಇದನ್ನು ಮಣ್ಣಿನ ಮಡಕೆಂುುಲ್ಲಿ ಮಾಡಿದರನೇ ರುಚಿ ಹೆಚ್ಚು. ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ: ಮಣ್ಣಿನ ಮಡಕೆಂುುಲ್ಲೇ ಮಾಡಿ ಈ ಪನ್ನೀರ್ ಗ್ರೇವಿ ಬೇಕಾಗುವ ಸಾಮಾಗ್ರಿಗಳು ಪನ್ನೀರ್ 100 ಗ್ರಾಂ ಮೊಸರು ಕಾಲು ಕಪ್ ಈರುಳ್ಳಿ 1 ಟೊಮೆಟೊ 2 ಹಸಿ ಮೆಣಸಿನಕಾಯಿ 3 ಶುಂಠಿ-ಬೆಳ್ಳುಳ್ಳಿ ಪೇಸ್ಟ್ 1 ಚಮಚ ಅರಿಶಿಣ ಪುಡಿ ಅರ್ದ ಚಮಚ ಕೊತ್ತಂಬರಿ ಪುಡಿ ಅರ್ಧ ಚಮಚ ಕರಿ ಮೆಣಸಿನ ಪುಡಿ ಅರ್ದ ಚಮಚ ಗರಂ ಮಸಾಲ ಅರ್ದ ಚಮಚ ಖಾರದ ಪುಡಿ ಅರ್ಧ ಚಮಚ ಕರಿ ಬೇವಿನ ಎಲೆ ರುಚಿಗೆ ತಕ್ಕ ಉಪ್ಪು ಎಣ್ಣೆ 2 ಚಮಚ ನೀರು 1 ಕಪ್ ಮಣ್ಣಿನ ಮಡಕೆ ಸ್ವಲ್ಪ ಕೊತ್ತಂಬರಿ ಸೊಪ್ಪು ತಂುುಾರಿಸುವ ವಿಧಾನ: * ಮಣ್ಣಿನ ಮಡಿಕೆಗೆ ಒಂದು ಚಮಚ ಎಣ್ಣೆ ಹಾಕಿ ಅದರಲ್ಲಿ ಪನ್ನೀರ್ ತುಂಡುಗಳನ್ನು ಹಾಕಿ 2-3 ನಿಮಿಷ ಪೈ ಮಾಡಿ. ನಂತರ ಪನ್ನಿರ್ ಅನ್ನು ಒಂದು ಪಾತ್ರೆಂುುಲ್ಲಿ ಹಾಕಿಡಿ. * ಮಡಕೆಗೆ ಮತ್ತೊಂದು ಚಮಚ ಎಣ್ಣೆ ಹಾಕಿ ಅದಕ್ಕೆ ಕರಿಬೇವಿನ ಎಲೆ ಹಾಕಿ, ನಂತರ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ, ನಂತರ ಹಸಿ ಮೆಣಸಿನ ಕಾಯಿ ಹಾಕಿ 2 ನಿಮಿಷ ಹುರಿದು, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ, ನಂತರ ಟೊಮೆಟೊ ಹಾಕಿ ಸ್ವಲ್ಪ ಮೆತ್ತಗಾಗುವವರೆಗೆ ಹುರಿಯಿರಿ. ಈಗ ಖಾರದ ಪುಡಿ, ಕೊತ್ತಂಬರಿ ಪುಡಿ, ಗರಂ ಮಸಾಲ, ಕರಿ ಮೆಣಸಿನ ಪುಡಿ, ಅರಿಶಿಣ ಪುಡಿ ಸೇರಿಸಿ. * ನಂತರ ಚೆನ್ನಾಗಿ ಕದಡಿದಮೊಸರು ಹಾಕಿ ಚೆನ್ನಾಗಿ ತಿರುಗಿಸಿ, ನಂತರ ಸ್ವಲ್ಪ ನೀರು ಹಾಕಿ ಗ್ರೇವಿಂುುನ್ನು ಕುದಿಸಿ. * ಈಗ ಪೈ ಮಾಡಿದ ಪನ್ನೀರ್ ಹಾಕಿ ಕಡಿಮೆ ಉರಿಂುುಲ್ಲಿ 5 ನಿಮಿಷ ಕುದಿಸಿ, ನಂತರ ಉರಿಯಿಂದ ಇಳಿಸಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಪನ್ನೀರ್ ಗ್ರೇವಿ ರೆಡಿ.

loading...

LEAVE A REPLY

Please enter your comment!
Please enter your name here