26ರಂದು ಮಾದಕ ವಸ್ತು ವಿರೋಧಿ ದಿನ

0
77

ಬೆಳಗಾವಿ 22: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ನ್ಯಾಯವಾದಿಗಳ ಸಂಘ ಹಾಗೂ ಶ್ರೀ ಶಕ್ತಿ ಆಸ್ಪತ್ರೆ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಇದೇ ಜೂನ್ 26 ರಂದು ನಗರದ ಟಿಳಕವಾಡಿಯಲ್ಲಿರುವ ಶ್ರೀ. ಶಕ್ತಿ ಆಸ್ಪತ್ರೆಯಲ್ಲಿ ಅಂತರರಾಷ್ಟ್ತ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆ ಅಂಗವಾಗಿ ಕಾನೂನು ಸಾಕ್ಷರತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಅಂದು ಸಂಜೆ 5 ಗಂಟೆಗೆ ಬೆಳಗಾವಿ ಎರಡನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಶ್ರೀ. ಎನ್.ಸಿ. ಶ್ರೀನಿವಾಸ ಅವರು ಈ ಕಾರ್ಯಕ್ರಮವನ್ನು ಉದ್ಘಾಟಿಸುವರು. ಡಾ|| ನರೇನ ವ್ಹಿ. ನಿಂಬಾಳ ಅವರು ಸಮಾರಂಭದ ಅಧ್ಯಕ್ಷತೆವಹಿಸುವರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಪ್ರಧಾನ ಹಿರಿಯ ಸಿವ್ಹಿಲ್ ನ್ಯಾಯಾಧೀಶರಾದ ಶ್ರೀ. ಮಧುಸೂದನ ಬಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕರಾದ ಶ್ರೀ. ಕೆ.ಎಚ್. ಓಬಳಪ್ಪ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.

ಬೆಳಗಾವಿ ಬಿಮ್ಸ್ನ ಡಾ||   ರಾಜೇಂದ್ರಕುಮಾರ ಕಟ್ಟಿ ಅವರು   ಅತಿಥಿ     ಉಪನ್ಯಾಸಕರಾಗಿ     ಆಗಮಿಸುವರು.

loading...

LEAVE A REPLY

Please enter your comment!
Please enter your name here