ಇತಿಹಾಸ ಸೇರಿದ ತಂತಿ ಸಮಾಚಾರ

0
27

ನವದೆಹಲಿ,ಜು,14: ಇಂದು ಟೆಲಿಗ್ರಾಂ ಕಳಿಸಲು ಕೊನೆಯ ದಿನ. ನಾಳೆಯಿಂದ ಈ ಸೇವೆ ಕೊನೆಗೊಂಡಿದೆ. ಇದರಿಂದಾಗಿ 160 ವರ್ಷಗಳ ದೀರ್ಘಕಾಲಿಕವಾದ ಈ ಸೇವೆ ಇತಿಹಾಸ ಪುಟಕ್ಕೆ ಸೇರಿದೆ.

ಮೊಬೈಲ್ ಫೋನ್, ಎಸ್ಎಂಎಸ್, ಇಂಟರ್ನೆಟ್, ಇ-ಮೇಲ್ ಮುಂತಾದ ತ್ವರಿತ ಸಂಪರ್ಕ ಸಂವಹನಾ ವಿಧಾನಗಳು, ಈಗ ಬಳಕೆಗೆ ಬಂದಿರುವುದರಿಂದ ಟೆಲಿಗ್ರಾಂ ಸೇವೆಗೆ ಬೇಡಿಕೆ ಕಡಿಮೆಯಾಗಿದ್ದು, ಇದು ಅಪ್ರಸ್ತುತವಾಗಿರುವುದರ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆಯೆಂದು ಬಿಎಸ್ಎನ್ಎಲ್ ಅದ­್ಯಕ್ಷ ಆರ್.ಕೆ.ಉಪಾಧ್ಯಾಯ ತಿಳಿಸಿದ್ದಾರೆ.ದೇಶದ 75 ಕೇಂದ್ರಗಳಲ್ಲಿ ಒಂದು ಸಾವಿರ ಮಂದಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಇವರಿಗೆ ಸೂಕ್ತ ತಂತಿ ಕೆಲಸ ಇಲ್ಲದ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ. ಜತೆಗೆ ನಿರ್ವಹಣಾ ವೆಚ್ಚ ಸಹ ಒಂದೇ ಸಮನೆ ಏರುತ್ತಿರುವ ಹಿನ್ನೆಲೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದಿದ್ದಾರ

 

loading...

LEAVE A REPLY

Please enter your comment!
Please enter your name here