ವಿದ್ಯಾರ್ಥಿಗಳ ಜ್ಞಾನಕ್ಕೊಂದು ವಿಜ್ಞಾನ ವಸ್ತು ಪ್ರದರ್ಶನ

0
167

 ಕಲಿಕೆ ಎನ್ನುವುದು ವಿವಿಧ ಕಾರ್ಯ ಕಲಾಪ ಹಾಗೂ ಚಟುವಟಿಕೆಗಳನ್ನೊಳಗೊಂಡ ಒಂದು ಸೃಜನಾತ್ಮಕ ಕ್ರಿಯೆ.ಮನೆಯಿಂದಲೇ ಪ್ರಾರಂಗೊಳ್ಳುವ ಈ ಪ್ರಕ್ರಿಯೆ ಶಾಲೆಗಳಲ್ಲಿ ವಿದ್ಯಕ್ತವಾಗಿ ಅಬಿವೃದ್ದಿ ಹೊಂದುತ್ತದೆ.ಕಲಿಕಾ ಕ್ರಮದ ಪ್ರತಿ ಹೆಜ್ಜೆಯಲ್ಲೂ ಮಗುವಿಗೆ ಕೆಲವು ನಿರ್ದಿಷ್ಟವಾದ ಕೆಲವು ಅಗತ್ಯಗಳಿರುತ್ತವೆ.ಶಾಲೆಗಳು ಮಕ್ಕಳ ಕಲಿಕೆಗೆ ವ್ಯವಸ್ಥಿತ ಅಭಿಪ್ರೇರಣೆ ನೀಡಬಲ್ಲವು.ಅಂಥಹ ಅಭಿಪ್ರೇರಣೆ ಎಲ್ಲ ವಿಷಯಗಳಲ್ಲಿ ಜರುಗಬೇಕು.ಅದರಲ್ಲೂ ವಿಜ್ಞಾನ ಗಣಿತ ಕಲಿಕೆಯಲ್ಲಿ ಇನ್ನೂ ಹೆಚ್ಚು ಪ್ರೌತ್ಸಾಹದಾಯಕ ಕಲಿಕೆ ಜರುಗಬೇಕು ಎಂಬುದು ಇಲಾಖೆಯ ಆಶಯ.

     ಮಕ್ಕಳಲ್ಲಿ ವಿಜ್ಞಾನದ ಆಸಕ್ತಿ ಬೆಳೆಸುವುದು.ವಿಜ್ಞಾನ ವಿಷಯದಲ್ಲಿ ಅಭಿರುಚಿ ಬೆಳೆಸುವುದಷ್ಟೇ ಅಲ್ಲ ಸ್ವತಃ ಮಕ್ಕಳೇ ಪ್ರಯೋಗ ಮಾಡುವ ಮೂಲಕ ವಿಜ್ಞಾನದ ಕಲಿಕೆಯನ್ನು ಅನುವಿಸುವಂತಾಗಬೇಕು ಎಂಬುದು ಡಾಃ ಎ.ಪಿ.ಜೆ,ಅಬ್ದುಲ್ ಕಲಾಂ ಕನಸು. ಇಂಥ ವಿಜ್ಞಾನದ ಆಸಕ್ತಿ ಹೆಚ್ಚಿಸಲು ಕರ್ನಾಟಕ ಸರಕಾರದ ಶಿಕ್ಷಣ ಇಲಾಖೆ  ವಿಜ್ಞಾನದ ಯುವ ಪ್ರತಿಗಳನ್ನು ಗುರುತಿಸಲು,ಪ್ರೌತ್ಸಾಹಿಸಲು ಮತ್ತು ರಾಷ್ಟ್ತ್ರ ಪ್ರಗತಿಯಲ್ಲಿ ವಿಜ್ಞಾನಕ್ಕೆ ಮಕ್ಕಳಿಂದ ಕೊಡುಗೆಯನ್ನು ಬಳಸಲು ವಿಜ್ಞಾನ ವಸ್ತು ಪ್ರದರ್ಶನ ಹುಟ್ಟು ಹಾಕಿದೆ. ಇತ್ತೀಚೆಗಷ್ಟೇ ಬೆಳಗಾವಿ ಜಿಲ್ಲೆಯಾದ್ಯಂತ ಶಿಕ್ಷಣ ಇಲಾಖೆಯಿಂದ ಈ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.ಸವದತ್ತಿ ಮತ್ತು ರಾಮದುರ್ಗ ತಾಲೂಕುಗಳ ಜಂಟೀಯಾದ ವಿಜ್ಞಾನ ವಸ್ತು ಪ್ರದರ್ಶನ ಸವದತ್ತಿಯ ಎಸ್.ಕೆ.ಪ್ರೌಢಶಾಲೆ. ಬಿ.ಬಿ.ಮಮದಾಪೂರ ಪ್ರೌಢ ಶಾಲೆ ಮತ್ತು ಕೆ.ಎಲ್.ಇ. ಶಾಲೆಗಳಲ್ಲಿ ಸವದತ್ತಿ ತಾಲೂಕಿನ 207 ರಾಮದುರ್ಗ ತಾಲೂಕಿನ 75 ವಿಜ್ಞಾನ ಮಾದರಿಗಳ ಇನ್ ಸ್ಪೈರ್ ಅವಾರ್ಡ ಪ್ರದರ್ಶನ ಜರುಗಿತು.

ಸವದತ್ತಿ ಯಲ್ಲಮ್ಮಾ ವಿಧಾನಸಯೆ ಶಾಸಕರಾದ ಆನಂದ ಮಾಮನಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬೆಳಗಾವಿ ಡಯಟ್ ಪ್ರಾಚಾರ್ಯ ಜಿ.ಆರ್.ಕೆಂಚರಡ್ಡಿ ಮಾತನಾಡಿದರು.

ಈ ಸಂರ್ದದಲ್ಲಿ  ಶಿಕ್ಷಣಾಧಿಕಾರಿ ಶ್ರೀಶೈಲ.ಎಸ್.ಕರೀಕಟ್ಟಿ  ಸವದತ್ತಿ ತಾ.ಪಂ ಅಧ್ಯಕ್ಷ ಸುರೇಶ ಹಾರೋಬೀಡಿ. ಜಿ.ಪಂ ಸದಸ್ಯರಾದ ಮಂಜುನಾಥ ಬಾನಿ.ಲಕ್ಷ್ಮಣ ದೊಡಮನಿ. ಡಯಟ್ ಹಿರಿಯ ಉಪನ್ಯಾಸಕರಾದ ಎಸ್.ಡಿ.ಗಾಂಜಿ.ಎಸ್.ಎಂ.ಮುಲ್ಲಾ. ಉಪ ಪ್ರಾಂಶುಪಾಲರಾದ ಬಿ.ಟಿ.ಬೊಂಗಾಳೆ. ಸವದತ್ತಿ ತಾಲೂಕಿನ ನೋಡಲ್ ಅಧಿಕಾರಿಗಳಾದ ಎಲ್.ಸಿ.ಮಾಚಕನೂರ ಉಪನ್ಯಾಸಕರಾದ ಜೆ.ಎಚ್.ತಮ್ಮಣ್ಣವರ. ಎ.ಎನ್.ಪ್ಯಾಟಿ.ಆರ್.ಬಿ.ಕಾಳೆ.ಬಿ.ಬಿ.ನಾರಿ.ಡಿ.ವಿ.ಕಾಂಬ್ಳೆ.ಎಮ್.ಎಚ್.ಪಾಟೀಲ. ಜೆ.ಎಚ್,ಚಿಮ್ಮಲಗಿ.ಎಸ್.ಎಸ್.ಹಿರೇಮಠ.ಖವಟಕೊಪ್ಪ ಹಾಗೂ ರಾಮದುರ್ಗ ತಾಲೂಕಿನ ಬಿ.ಆರ್.ಸಿ ಸಮನ್ವಯಾಧಿಕಾರಿಗಳಾದ ಎನ್.ಆರ್.ಪಾಟೀಲ ಸಿಆರ್ ಪಿಗಳು ತಾಲೂಕಿನ ಪ್ರೌಢ ಶಾಲೆಗಳ ಮುಖ್ಯೌಪಾಧ್ಯಾಯರುಗಳು ಉಪಸ್ಥಿತರಿದ್ದರು.ಬಿ.ಆಯ್.ಚಿನಗುಡಿ ಕಾರ್ಯಕ್ರಮ ನಿರೂಪಿಸಿದರು.ಸವದತ್ತಿ ತಾಲೂಕಿನ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಆರ್.ಆರ್.ಸದಲಗಿ ವಂದಿಸಿದರು.

ಎರಡು ದಿನಗಳ ಕಾಲ ಜರುಗಿದ ಈ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಸುತ್ತ ಮುತ್ತಲಿನ ಶಾಲೆಗಳ ಮಕ್ಕಳು ವೀಕ್ಷಿಸುವ ಈ ಕಾರ್ಯಕ್ರಮ ವೀಕ್ಷಿಸುವ ಜೊತೆಗೆ ವಿಜ್ಞಾನ ಮಾದರಿಗಳ ಪರಿಚಯ ಪಡೆದುಕೊಂಡರು.

ವಿಜ್ಞಾನ ವಸ್ತು ಪ್ರದರ್ಶನಕ್ಕೆ ಎಂಥಹ ಮಾದರಿಗಳನ್ನು ಮಾಡಬಹುದು.

 

1)ಮಾನವನ ಜೀರ್ಣಾಂಗವ್ಯೂಹ. ಇದಕ್ಕೆ ಥರ್ಮಾಕೋಲ್.ಬಣ್ಣ,ಹತ್ತಿ ಅರಳೆ,ಅಂಟು,ಕಾರ್ಡಶೀಟ್ ಅಥವ ಪ್ಲಾಸ್ಟರ್ ಆಪ್ ಪ್ಯಾರಿಸ್ ಮೂಲಕ ತೆಳುವಾದ ತಂತಿ ಬಳಸಿ ನೈಜತೆ ಬಿಂಬಿಸುವ ಮಾದರಿ ಮಕ್ಕಳು ಸ್ವತಃ ಶಿಕ್ಷಕರ ಮಾರ್ಗದರ್ಶನದಲ್ಲಿ ತಯಾರಿಸಬಹುದು.

2)ಮಾನವನ ಶ್ವಾಸಾಂಗವ್ಯೂಹ.ಇದು ಕ್ರಿಯಾತ್ಮಕವಾಗಿ ಆಗಬೇಕಾದಲ್ಲಿ ಆಸ್ಪತ್ರೆಯಲ್ಲಿ ಬಳಸುವ ಸೈಲೈನ್ ರಬ್ಬರ ಟೂಬು ಅಥವ ವೃರ್,ಥರ್ಮಾಕೋಲ್.ಬಲೂನ್ ಅಥವಾ ಸಣ್ಣ ಸಣ್ಣ ಬಲ್ಬುಗಳು,ಬಣ್ಣ ಬಳಸಿ ತಯಾರಿಸಬಹುದು.

3) ಹೃದಯದ ಮಾದರಿ; ಸಣ್ಣ ಸಣ್ಣ ಬಲ್ಬುಗಳನ್ನು ಬಳಸಿ ಕ್ರಿಯಾತ್ಮಕ ಮಾದರಿ ತಯಾರಿಸಲು ಸಾದ್ಯವಿದೆ. ಅಥವಾ ಬಲೂನ್.ಥರ್ಮಾಕೋಲ್,ರಟ್ಟು,ಅಂಟು ಬಳಸಿ ತಯಾರಿಸಬಹುದು.

4)ನೀರಿನ ಘಟಕಗಳನ್ನು ಗುರುತಿಸುವ ಮೋಲ್ಟಾ ಮೀಟರ್: ದೊಡ್ಡ ಗಾಜಿನ ಪಾತ್ರೆ,ವೈಯರ್,ಶುಷ್ಕಕೋಶ.ತಾಮ್ರದ ತಗಡುಗಳು,ಟೆಸ್ಟ ಟ್ಯೂಬ್.ಬಳಸಿ ತಯಾರಿಸುವುದು ಸುಲ

5)ಆವರ್ತಕ ಪ್ರತಿಫಲನ: ಚೌಕಾಕಾರದ ಎರಡು ಕನ್ನಡಿಗಳ ಜೋಡಣೆ,ಮೇಣದ ಬತ್ತಿ, ಅಂಟು,ಬಿಳಿಯ ಹಾಳೆ

6) ವಿಸರ್ಜನಾಂಗವ್ಯೂಹ;ಕಾರ್ಡಶೀಟ್,ಥರ್ಮಾಕೋಲ್.ಮಾರ್ಕರ್ ಪೆನ್,ಅಂಟು,ಇತ್ಯಾದಿ ಅವಶ್ಯಕ ಸಾಮಗ್ರಿಗಳನ್ನು ಬಳಸಿ ತಯಾರಿಸಬಹುದು.

7)ಹೂವಿನ ಮಾದರಿಗಳು: ಕಾರ್ಡಷೀಟ್,ಮಾರ್ಕರ್ ಪೆನ್,ವಿವಿಧ ಬಣ್ಣದ ಡಬ್ಬಿಗಳು,ಬ್ರಷ್,ಥರ್ಮಾಕೋಲ್,ಅಂಟು8)ಪೆರಿಸ್ಕೌಪ್,;ರಟ್ಟು,ಕೊಳವೆಯಾಕಾರದ ಊಧುಬತ್ತಿ ಹಾಕಿರುವ ಕೊಳವೆಯಾಕಾರದ ರಟ್ಟಿನ ಡಬ್ಬಿ.ದರ್ಪಣಗಳು 2.ಅಂಟು.ಬಿಳಿಯ ಹಾಳೆ

9)ಕೃಷಿ ಉಪಕರಣಗಳು ಕೂರಿಗೆ ನೇಗಿಲು;ಇಂಥವುಗಳ ಪರಿಚಯ ಮೊದಲು ಮಕ್ಕಳಿಗೆ ಇದ್ದರೆ ಮಾತ್ರ ಇವುಗಳನ್ನು ವಿಜ್ಞಾನ ಮಾದರಿಗಳನ್ನಾಗಿ ತಯಾರಿಸಲು ಸಾಧ್ಯ.ಇವುಗಳ ತಯಾರಿಕೆಗೆ ಥರ್ಮೋಕೋಲ್,ಪೆವಿಕಾಲ್,ಬಣ್ಣ ಸಾಕು.10)ರಾಕೆಟ್; ಕೊಳವೆ ಕಟ್ಟಿಗೆಗಳ ಕೆತ್ತನೆಯ ಮೂಲಕ, ಅದರಲ್ಲಿ ಸೆಲ್ ಮೂಲಕ ಬಲ್ಬ ಅಳವಡಿಸಿ,ತಯಾರಿಸಬಹುದು.

11)ಸೌರವ್ಯೂಹ: ಕಟ್ಟಿಗೆಯ ತುಂಡು,ತಂತಿಗಳು,ಮಕ್ಕಳು ಆಟಕ್ಕೆ ಬಳಸುವ ವಿವಿಧ ಮಾದರಿಯ ಪ್ಲಾಸ್ಟಿಕ್ ಚೆಂಡುಗಳು,ಬಲ್ಬ,ಟೆಪ್ ರಿಕಾರ್ಡನಲ್ಲಿರುವ ಬ್ಯಾಟರಿ,ವೈಯರ್,ಸೈಕಲ್ ರಿಮ್,ಇತ್ಯಾದಿ ಇದನ್ನು ನಾವು ಕ್ರಿಯಾತ್ಮಕ ಮಾದರಿ ಮಾಡಲು ಸಾಧ್ಯವಿದೆ.ಸೌರವ್ಯೂಹ ಆಕಾರಕ್ಕೆ ತಂತಿಗಳನ್ನು ಮಣಿಸಿ ಅದರೊಳಗೆ ವಿವಿಧ ಗ್ರಹಗಳ ಆಕಾರಕ್ಕೆ ತಕ್ಕಂತೆ ಪ್ಲಾಸ್ಟಿಕ್ ಚೆಂಡು ಅಳವಡಿಸಿ ಸೈಕಲ್ ರಿಮ್ ಕಟ್ಟಿಗೆಯ ತುಂಡಿಗೆ ಜೋಡಿಸಿ. ಒಂದು ಬದಿ ಬ್ಯಾಟರಿ ಅಳವಡಿಸುವುದು. ನಂತರ ತಂತಿಗಳನ್ನು ರಿಮ್ ಒಳಕ್ಕೆ ಎಲ್ಲಾ ಬದಿಗಳಿಂದ ಅಳವಡಿಸಿ ನಡುವೆ ಸೂರ್ಯನನ್ನು ಬಿಂಬಿಸಲು ಬಲ್ಬ ಜೋಡಿಸಿ ಅದಕ್ಕೆ ವೈಯರ್ ಜೋಡಿಸಿ ಬ್ಯಾಟರಿಗೆ ಕೂಡಿಸುವುದು.ಬೈಟಗಿಯ ಒಂದು ಕನೆಕ್ಸನ್ ಸೈಕಲ್ ರಿಮ್ ಗೂ ಅಳವಡಿಸಬೇಕು. ನಾವು ರಿಮ್ ಕನೆಕ್ಸನ್ ಬ್ಯಾಟಿರಿಗೆ ಕೊಟ್ಟಾಗ ಎಲ್ಲ ಗ್ರಹಗಳು ಸೂರ್ಯನ ಸುತ್ತುತ್ತವೆ ಎಂಬುದನ್ನು ತೋರಿಸಬಹುದು. ಸೂರ್ಯನಿಗೆ ಅಳವಡಿಸಿರುವ ಬಲ್ಬ ಕನೆಕ್ಸನ್ನ ನಿರಂತರವಾಗಿಡುವ ಮೂಲಕ ಸೂರ್ಯ ಆರದ ದೀಪ ಎಂಬುದನ್ನು ಇಲ್ಲಿ ತಿಳಿಸಲು ಹಾಗೂ ೂಮಿಗೆ ಇನ್ನೊಂದು ಬಲ್ಬ ಜೋಡಿಸುವ ಮೂಲಕ ಚಂದ್ರನನ್ನು ತೋರಿಸಿ ಇಲ್ಲಿ ಗ್ರಹಣ(ಸೂರ್ಯಗ್ರಹಣ,ಚಂದ್ರಗ್ರಹಣ) ತಿಳಿಸಲು ಅವಕಾಶ ಇದೊಂದು ಬಹುವಿಧದ ಚಲನಶೀಲ ಮಾದರಿ ಇದನ್ನು ಶಿಕ್ಷಕರು ಮಕ್ಕಳಿಗೆ ತಿಳಿಸಿದರೆ ಕಡಿಮೆ ಖರ್ಚಿನಲ್ಲಿ ಮಾಡಲು ಅವಕಾಶವಿದೆ.                                                     ವೈ.ಬಿ.ಕಡಕೋಳ  

                                                                ಸಂಪನ್ಮೂಲ ವ್ಯಕ್ತಿಗಳು

loading...

LEAVE A REPLY

Please enter your comment!
Please enter your name here