ನಾಚಿಕೆಗೇಡು

0
33

ಕೇಂದ್ರ ಸರಕಾರ ಕಲ್ಲಿದ್ದಲು ಹಗರಣಕ್ಕೆ ಸಂಬಂಧಪಟ್ಟ 171 ಕಡತಗಳು ನಾಪತ್ತೆಯಾಗಿರುವದು ನಾಚಿಕೆಗೇಡಿತನದ ಸಂತಿಯಾಗಿದೆ. ಈ ರೀತಿ ಮಹತ್ವದ ಕಡತಗಳನ್ನು ನಾಪತ್ತೆಯಾದರೆ ಸರಕಾರದ ಮೇಲೆ ಜನರು ಭರವಸೆ ಈಡುವದಾದರೂ ಹೇಗೆ ಎಂಬ ಪ್ರಶ್ನೆ ಜನರನ್ನು ಕಾಡತೊಡಗಿದೆ.

ಸರಕಾರಿ ಕಚೇರಿಗಳಲ್ಲಿ ಮಹತ್ವದ ದಾಖಲೆಗಳನ್ನು ಮತ್ತು ಕಡತಗಳನ್ನು ಇಟ್ಟುಕೊಳ್ಳಲು ಎಲ್ಲಾ ರೀತಿಯ ವ್ಯವಸ್ಥಯನ್ನು ಇರುತ್ತದೆ ಅದರಲ್ಲಿಯೊ ಸಚಿವಾಲಯದಲ್ಲಿ ಅತ್ಯಂತ ಹೆಚ್ಚಿನ ವ್ಯವಸ್ಥೆಗಳನ್ನು ಇರುತ್ತವೆ. ಸಿಬಿಐ ವಿಚಾರಣೆ ನಡೆಸುತ್ತಿರುವ ಕಲ್ಲಿದ್ದಲು ಹಗರಣಕ್ಕೆ ಸಂಬಂಧ ಪಟ್ಟ ಕಡತಗಳನ್ನು ಅತ್ಯಂತ ಭದ್ರವಾಗಿ ಈಡುವದು ಸಂಬಂಧಪಟ್ಟ ಅಧಿಕಾರಿಗಳ ಹೊಣೆಗಾರಿಕೆಯಾಗಿದೆ. ಆದರೆ ಇಷ್ಟೊಂದು ಪ್ರಮಾಣದಲ್ಲಿ ಒಂದೇ ವಿಷಯಕ್ಕೆ ಸಂಬಂಧಪಟ್ಟ ಕಡತಗಳು ನಾಪತ್ತೆಯಾಗಿರುವದನ್ನು ನೋಡಿದರೆ ಇದು ಕಾಣದ ಕೈಗಳ ಕೈವಾಡ ಇದೇ ಎಂಬ ಶಂಕೆ ಬರದೇ ಇರಲಾರದು.

ಈ ಪ್ರತಿಪಕ್ಷಗಳು ಸಂಸತ್ತಿನಲ್ಲಿ ವಿಷಯ ಪ್ರಸ್ಥಾಪಿಸಿ ಪ್ರಧಾನಿಯವರ ಸ್ಪಷ್ಟಿಕರಣಕ್ಕೆ ಪಟ್ಟು ಹಿಡಿದಿವೆ. ನನ್ನಂದ ಲೋಪವಾಗಿದ್ದರೆ ಕ್ರಮ ಎದುರಿಸಲು ಸಿದ್ಧ ಎಂಬ ಕಲ್ಲಿದ್ದಲು ಇಲಾಖೆಯ ಸಚಿವ ಜೈಸ್ವಾಲ್ ಅವರು ಹೇಳಿಕೆಗೆ ಪ್ರತಿಪಕ್ಷಗಳು ಯಾವುದೇ ಮಾನ್ಯತೆ ನೀಡಲ್ಲ ನಮಗೆ ನಿಮ್ಮ ಹೇಳಿಕೆ ಬೇಡ ಪ್ರಧಾನಿಯವರೆ ಖುದ್ದಾಗಿ ಈ ಕುರಿತು ಹೇಳಿಕೆ ನೀಡಬೇಕು ಎಂದು ಪ್ರತಿಪಕ್ಷಗಳಿ ಆಗ್ರಹ ಪಡಿಸಿವೆ ಈ ನಾಪತ್ತೆ ಪ್ರಕರಣದ ವಿಚಾರಣೆಗೆ ನಡೆಸಲು ಸದನ ಸಮಿತಿಯನ್ನು ನೇಮಕ ಮಾಡಲು ನಿರ್ಧರಿಸಲಾಗಿದೆ ಈ ಸಮಿತಿ ವರದಿ ನೀಡಿದ ಮೇಲೆ ಮುಂದಿನ ಕ್ರಮದ ಬಗ್ಗೆ ವಿಚಾರಣೆ ತೆಗೆದುಕೊಳ್ಳಲಾಗುವದು ಎಂದು ಹೇಳಲಾಗಿದೆ.

ಸರಕಾರ ಈಗ ಎನೇ ಹೇಳಲ್ಲ ಸರಕಾರ ದ ಕಚೇರಿಯನ್ನು ಈ ರೀತಿ ಕಡತಗಳು ನಾಪತ್ತೆಯಾಗಿರುವದು ಸರಕಾರದ ಘನತೆ ಗೌರವಗಳಿಗೆ ಧಕ್ಕೆ ತರುವ  ಸಂಗತಿಯಾಗಿದೆ. ಇದ್ದರಿಂದ ಸರಕಾರದ ಮೇಲೆ ಜನರು ಇಟ್ಟಿರುವ ನಂಬುಗೆ ಹುಸಿಯಾಗುವ ಸಾಧ್ಯತೆಯಿದೆ ಒಂದು ದೇಶ ಸರಕಾರದ ಕಚೇರಿಗಳನ್ನು ಈ ರೀತಿ ಕಡತಗಳು ನಾಪತ್ತೆಯಾಗಿರುವದು ಸರಕಾರಕ್ಕೆ ಭೂಷಣ ತರುವ ಸಂಗತಿಯಲ್ಲ ಆದ್ದರಿಂದ ಸರಕಾರ ಏನೇ ತಿಪ್ಪೆ ಸಾರಿಸಿದ್ದರು ಇದನ್ನು ಒಪ್ಪಿಕೊಳ್ಳುವದಕ್ಕೆ ಸಾಧ್ಯವಾಗುವದಿಲ್ಲ.

ಉಳಿದ ವಿಷಯಗಳಿಗೆ ಸಂಬಂಧ ಪಟ್ಟ ಕಡತಗಳು ಸುರಕ್ಷಿತವಾಗಿದೆ. ವಿವಾದಕ್ಕೆ ಉಳಗಾಗಿರವು ವಿಷಯಕ್ಕೆ ಸಂಬಂಧ ಪಟ್ಟ ಕಡತಗಳು ನಾಪತ್ತೆಯಾಗಿವೆ ಎಂದರೆ ಇದು ತಂತ್ರದ ಫಲ ಎಂದು ಯಾರು ಬೇಕಾದರು ಹೇಳಬಹುದಾಗಿದೆ. ಆದ್ದರಿಂದ ಈ ಕೃತ್ಯಕ್ಕೆ ಕಾರಣವಾದವರ ಮೇಲೆ ಅತ್ಯಂತ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು.

loading...

LEAVE A REPLY

Please enter your comment!
Please enter your name here