ಸಮಾಜದ ಏಳ್ಗೆಗಾಗಿ ಮಠ-ಮಾನ್ಯಗಳ ಪಾತ್ರ ಶ್ಲಾಘನೀಯ

0
28

ಉಳ್ಳಾಗಡ್ಡಿ-ಖಾನಾಪೂರ 12: ಸಮಾಜದಲ್ಲಿನ ಭಕ್ತರನ್ನು ಧಾರ್ಮಿಕ ನೆಲೆಗಟ್ಟಿನಡಿಯಲ್ಲಿ ಸುವ್ಯವಸ್ಥಿತವಾದ ಜೀವನ ನಡೆಸುವ ಕಲೆಯನ್ನು ಇಂದು ಶ್ರಾವಣ ಮಾಸಗಳಲ್ಲಿ ಮಠ-ಮಾನ್ಯಗಳು ಮಾಡುತ್ತಿರುವ ಕಾರ್ಯ ಸಮಾಜದೋನ್ನತಿಗಾಗಿ ಎಂದು ಹತ್ತರಗಿಯ ಕಾರಿಮಠದ ಶ್ರೀ ಗುರುಸಿದ್ದ ಮಹಾಸ್ವಾಮಿಗಳು ನುಡಿದರು.

ಅವರು ಸಮೀಪದ ಹತ್ತರಗಿ ಸುಕ್ಷೇತ್ರದಲ್ಲಿ ಹಮ್ಮಿಕೊಂಡ ಶ್ರಾವಣ ಮಾಸದ ಮುಕ್ತಾಯ ಹಾಗೂ ಸತ್ಕಾರ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತ, ಮಠಾಧೀಶರಿಂದು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರೊಂದಿಗೆ ಇಂದು ಭಕ್ತ ಸಮೂಹ ಪರಿಶುದ್ದರಾಗುವತ್ತ ಗಮನಹರಿಸುತ್ತಿರುವುದಾಗಿ ಅಭಿಪ್ರಾಯ ಪಟ್ಟರು.

ಇದೇ ಸಂದರ್ಭದಲ್ಲಿ ಹೆಬ್ಬಾಳ ಜಿಪಂ ಸದಸ್ಯೆ ಅಂಜನಾ ಹೆಬ್ಬಾಳಿ ಮಾತನಾಡಿದರು.

ಈ ಸಂದರ್ಭದಲ್ಲಿ ಕಾಯಕ ಶ್ರೀ ಪ್ರಶಸ್ತಿ ಪಡೆದ ಹತ್ತರಗಿ ಗ್ರಾಮದ ದೀಪಾ ಮಹಾತೇಶ ಕುಡಚಿಯವರನ್ನು ಶ್ರೀಗಳು ಫಲಪುಷ್ಪ ನೀಡಿ ಸತ್ಕರಿಸಿದರು.ಎಂ.ಜಿ.ಶಿವಪೂಜಿ. ಈರಣ್ಣಾ ಕುಡಚಿ. ಕಿರಣ ರಜಪೂತ. ರವೀಂದ್ರ ಜಿಂಡ್ರಾಳಿ. ಜೋಮಲಿಂಗ ಪಟೋಳಿ. ಹಣಮಂತ ಗಾಡಿವಡ್ಡರ. ರಾಮಲಿಂಗ ಕಾಡಪ್ಪನವರ. ಇವರನ್ನು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಅಶೋಕ ಸಾಳೆ, ಮಹಾತೇಶ ಕುಡಚಿ. ಉಪಸ್ಥಿತರಿದ್ದರು ಎ.ಎಂ.ಕರ್ನಾಚಿ ಸ್ವಾಗತಿಸಿದರು. ಕೊನೆಯಲ್ಲಿ ಜಿ.ಕೆ. ಚಪಣಿ ವಂದಿಸಿದರು.

loading...

LEAVE A REPLY

Please enter your comment!
Please enter your name here