ಪ್ರಥಮ ದಿನ ಪ್ರಾಬಲ್ಯ ಸಾಧಿಸಿದ ಭಾರತ ಅತಿಥೇಯರನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿದ ಟೀಂ ಇಂಡಿಯಾ

0
77

 

ಬಿ.ಕಿಶನ್ ಸಿಂಗ್

 

ಹುಬ್ಬಳ್ಳಿ.ಅ.9: ಅತಿಥೇಯ ಕೆರೆಬಿಯನ್ನ್ ದೈತ್ಯರನ್ನು 268 ರನ್ಗಳಿಗೆ ನಿಯಂತ್ರಿಸಿದ ಭಾರತ ತಂಡ. ದಿನದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 10 ರನ್ಗಳಿಸಿ ಪ್ರಥಮ ದಿನ ತನ್ನ ಪ್ರಾಬಲ್ಯ ಮೆರೆಯಿತು.

ದಿನದ ಅಂತ್ಯಕ್ಕೆ ಭಾರತ ವಿಕೆಟ್ ನಷ್ಟವಿಲ್ಲದೇ 10 ರನ್ಗಳಿಸಿದೆ. ಆರಂಭಿಕರಾಗಿ ಕಣಕ್ಕೆ ಇಳಿದಿರುವ ಎಡಗೈ ಬ್ಯಾಟ್ಸ್ಮನ್ ಗೌತಮ ಗಂಭೀರ, ವಿ.ಎ.ಜಗದೀಶ ಕ್ರಮವಾಗಿ 2 ಹಾಗೂ 8 ರನ್ಗಳಿಸಿ ಇಂದಿಗೆ ಕ್ರಿಸ್ ಕಾಯ್ದುಕೊಂಡಿದ್ದಾರೆ.

ಮೋಡ ಮುಸುಕಿದ ವಾತಾವರಣದಲ್ಲಿ ಬೆಳಿಗ್ಗೆ ಟಾಸ್ ಗೆದ್ದು ಫಿಲ್ಡಿಂಗ್ ಆಯ್ದುಕೊಂಡ ಚೇತೇಶ್ವರ ಪೂಜಾರಾ. ದಿನದ ಅಂತ್ಯಕ್ಕೆ ತಮ್ಮ ನಿರ್ಣಯ ಸರಿಯೆಂದು ತೋರಿಸಿದರು.ನಾಯಕನ ಭರವಸೆಯನ್ನು ಹುಸಿಗೊಳಿಸದ ಜಹೀರ ಖಾನ್ ತಮ್ಮ 5 ನೇ ಓವರಿನ ಮೂರನೇ ಎಸೆತದಲ್ಲಿ ಕೇವಲ ಒಂದು ರನ್ಗಳಿಸಿದ್ದ ಕ್ರೇಗ್ ಬ್ರಾಥ್ವೇಟ್ ಅವರು ವಿಕೆಟ್ ಕೀಪರ್ ಕೌಲ್ಗೆ ಸುಲಭವಾದ ಕ್ಯಾಚ್ ನೀಡಿ ನಿರ್ಗಮಿಸಿದರು.

ಇದಾದ ನಂತರ ಎಡ್ವರ್ಡ್ ಬದಲಿಗೆ ನಾಯಕತ್ವ ವಹಿಸಿಕೊಂಡ ಕಿರನ್ ಪೊವೆಲ್ 10 ನೇ ಓವರ್ನಲ್ಲಿ 12 ರನ್ ಗಳಿಸಿದ್ದಾಗ ಜೀವದಾನ ಲಭಿಸಿತು. ಪಾಂಡೆ ಎಸೆತದಲ್ಲಿ ಗೌತಮ ಗಂಬೀರ ಸ್ಲಿಪ್ನಲ್ಲಿ ಕೈ ಚೆಲ್ಲಿದರು. ಹಿಂದುರಿಗಿ ನೋಡದ ಪೊವೆಲ್ ವೇಗವಾಗಿ  ರನ್ಗಳಿಕೆಗೆ ಮುಂದಾದರು. ಇವರಿಗೆ ಜತೆಯಾದ ಲಿಯಾನ್ ಜಾನ್ಸನ್ ಆರಂಭಿಕ ಆಘಾತದಿಂದ ತಂಡವನ್ನು ಪಾರು ಮಾಡಲೆತ್ನಿಸಿದರು.

ತಂಡದ ಮೊತ್ತ ಕೇವಲ 53 ರನ್ ಆಗಿದ್ದಾಗ ಧವಳ ಕುಲಕರ್ಣಿಯ 4 ನೇ ಓವರಿನ ಮೂರನೇಯ ಎಸೆತವನ್ನು ಬೌಂಡರಿಗೆ ಅಟ್ಟುವ ನೆಪದಲ್ಲಿ ಕ್ಲಿನ್ ಬೌಲ್ಡ್ ಆದರು.ಇವರಿಬ್ಬರು ಎರಡನೇ ವಿಕೆಟ್ಗೆ 44 ರನ್ಗಳ ಜತೆಯಾಟ ನೀಡಿದರು.

 

 

ಜೀವದಾನದ ಲಾಭ ಪಡೆದ ಲಿಯಾನ್ ಜಾನ್ಸ್ನ್

ಜಹೀರ ಖಾನ್ ಬೌಲಿಂಗ್ನಲ್ಲಿ ಸ್ಲಿಪ್ನಲ್ಲಿ ಮತ್ತೆ ಗಂಭೀರ ಲಿಯಾನ್ ಜಾನ್ಸ್ನ್ ಕ್ಯಾಚ್ ಕೈ ಚೆಲ್ಲಿದರು. ಜಾನ್ಸನ್ ವೈಯಕ್ತಿಕ ಮೊತ್ತ 22 ರನ್ ಗಳಿಸಿದ್ದಾಗ ಪಡೆದ ಜೀವದಾನದಿಂದ ಅದ್ಬುತ್ ಬ್ಯಾಟಿಂಗ್ ಪ್ರದರ್ಶಿಸಿದರಲ್ಲದೇ. ಮೂರನೇ ವಿಕೆಟ್ಗೆ ನರಸಿಂಗ್ ದೇವ ನಾರಾಯಣ ಜತೆ 125 ಎಸೆತಗಳಲ್ಲಿ 70 ರನ್ಗಳ ಜತೆಯಾಟದ ಕಾಣಿಕೆ ನೀಡಿದರು. ನಾರಾಯಣ 55 ಎಸತೆದಲ್ಲಿ 33 ರನ್ಗಳ ಕಾಣಿಕೆ ನೀಡಿ ಅಭಿಷೇಕ್ ನಾಯರ್ ಓಟ್ಸ್ವಿಂಗ್ ಬೌಲನ್ನು ಕೆಣಕಿ ವಿಕೆಟ್ ಕೀಪರ್ ಉದಯ ಕೌಲ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರೇ. ಜಾನ್ಸ್ನ ಅಂತಿಮವಾಗಿ 143 ಎಸೆತಗಳಲ್ಲಿ 15 ಬೌಂಡರಿ ಒಳಗೊಂಡ 81 ರನ್ಗಳಿಸಿ ನಾಯರ್ ಎಸೆತದಲ್ಲಿ ಎಲ್.ಬಿ.ಬಲೆಗೆ ಬಿದ್ದರು.

ಇದಕ್ಕೂ ಮುಂಚೆ ಅವರು ಡೋಗ್ರಾ ಅವರಿಂದ ಜೀವದಾನ ಪಡೆದು ಅಸಾದ್ ಫವಾದುದ್ದೀನ ಜತೆ ನಾಲ್ಕನೇಯ ವಿಕೆಟಿಗೆ 52 ರನ್ಗಳ ಜತೆಯಾಟ ನಿಭಾಯಿಸಿದ್ದರು.

ಚಹಾ ವಿರಾಮದ ವರೆಗೆ ಕೇವಲ ಮೂರು ವಿಕೆಟ್ ಕಳೆದುಕೊಂಡು 175 ರನ್ಗಳಿಸಿದ್ದ ಕೆರೆಬಿಯನ್ನರು, ಚಹಾ ವಿರಾಮದ ನಂತರ ನಾಟಕೀಯ ಕುಸಿತ ಕಂಡು ಕೇವಲ 93 ರನ್ ಗಳಿಸುವಷ್ಟರಲ್ಲಿಯೇ 7 ವಿಕೆಟ್ ಕಳೆದು ಕೊಂಡು ಸಾಧಾರಣವೆನ್ನಬಹುದಾದ 268 ರನ್ಗಳಿಸಿ ತನ್ನ ಇನ್ನಿಂಗ್ಸ್ಗೆ ಮಂಗಳ ಹಾಡಿತು.

ಇನ್ನಿಂಗ್ಸ್ ಮಧ್ಯದಲ್ಲಿ ಅಸಾದ್ ಫುದದಿನ್ ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಗಟ್ಟಿಯಾಗಿ ನೆಲಕಚ್ಚಿ ಆಡಿ ತಮ್ಮ ತಂಡಕ್ಕೆ ಅಮೂಲ್ಯ 47 ರನ್ಗಳ ಕಾಣಿಕೆ ನೀಡಿ ದವಳ ಕುಲಕರ್ಣಿಯ ಮೂರನೇಯ ಬಲಿಯಾದರು ಸ್ಲಿಪ್ ನಲ್ಲಿದ್ದ ವಿ,ಜಗದೀಶಗೆ ಕೈಕ್ಯಾಚ್ ನೀಡಿದ ನಿರ್ಗಮಿಸಿದರು.

ಜೋನಾಥನ್ ಕಾರ್ಟ್ರ 24 ರನ್ಗಳಿಸಿ ಪಾಂಡೆ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನಿಡಿ ನಿರ್ಗಮಿಸಿದರೆ. ಹ್ಯಾಮಿಲ್ಟನ್ 15 ರನ್ ಗಳಿಸಿ ಧವಳ ಕುಲಕರ್ಣಿ ಎಸೆತದಲ್ಲಿ ಬೌಲ್ಡ್ ಆದರು.ಫುದಾಧ್ದೀನ ನಂತರ ಆಡಲು ಬಂದ ಯಾವ ಆಟಗಾರನೂ 2 ಅಂಕಿ ಗಡಿ ದಾಟಲಿಲ್ಲ. ಅಶ್ಲೇ ನರ್ಸ್ (4) , ಡಿ.ಜಾನ್ಸ್ನ್ ಶೂನ್ಯ ಸಂಪಾದನೆ ಹಾಗೂ ನಿಖಿತಾ ಮಿಲ್ಲರ್ 18 ರನ್ನಗಳಿಸಿ ನಾಯರ್ ನ ಕೊನೆಯ ಹುದ್ದರಿ ಯಾದರು.

 

ಮಿಂಚಿದ ಧವಳ ಕುಲಕರ್ಣಿ, ಅಭಿಷೇಕ ನಾಯರ್

ಮುಂಬೈನ ಬಲಗೈ ಮಧ್ಯಮ ವೇಗಿ ಧವಳ ಕುಲಕರ್ಣಿ ಭೋಜನದ ವಿರಾಮದ ವರೆಗೂ ಶಾಂತವಾಗಿ ಹರಿಯುವ ನದಿಯಾದರೇ ಭೋಜನದ ವಿರಾಮದ ನಂತರ ಭೋರ್ಗೆರುವ ನದಿಯಾದರು. ಈಗಾಗಲೇ ಮೃದುವಾಗಿದ್ದ ಪಿಚ್ನಲ್ಲಿ ವೇಗವಾಗಿ ಪಿಚ್ಗೆ ಬೌಲ್ ಎಸೆಯುತ್ತಿದ್ದರಿಂದ ಅವರು ನೀರೀಕ್ಷಿತ ಮಟ್ಟದ ಫಲಿತಾಂಶ ಪಡೆದರು.

ತಮ್ಮ ಮೊದಲನೇ ಸ್ಪೆಲ್ನಲ್ಲಿ ವಿಕೆಟ್ ಕಿತ್ತ ಅವರು ಅಂತಿಮವಾಗಿ 16 ಓವರ್ ಎಸೆದು 3 ವಿಕೆಟ್ ಕಿತ್ತರು. ಅಭಿಷೇಕ್ ನಾಯರ್ ಅತ್ಯಮೂಲ್ಯ 4 ವಿಕೆಟ್ ಕಿತ್ತು ಭಾರತದ ಪರ ಅತ್ಯಂತ ಯಶಸ್ವಿ ಬೌಲರ್ ಎನಿಸಿದರು.

 

ಸ್ಕೌರ್ ವಿವರ

ವೆಸ್ಟ್ಇಂಡೀಸ್ ಎ ಪ್ರಥಮ ಇನ್ನಿಂಗ್ಸ್ 268( ಆಲ್ ಓಟ್) 77.4 ಓವರ್

ಕ್ರೇಗ್ ಬ್ರಾಥ್ವೇಟ್ ಬಿ.ಜಹೀರ್ ಖಾನ್ ಸಿ. ಉದಯ ಕೌಲ್   1

ಕಿರನ್ ಪೊವೆಲ್   ಬಿ.ಧವಳ ಕುಲಕರ್ಣಿ                   21

ನರಸಿಂಗ್ ದೇವ ನಾರಾಯಣ  ಬಿ.ಅಭಿಷೇಕ ನಾಯರ್ ಸಿ. ಉದಯ ಕೌಲ್ 35

ಲಿಯಾನ್ ಜಾನ್ಸನ್ ಬಿ.ಅಭಿಷೇಕ್ ನಾಯರ್ ಎಲ್ಬಿಡಬ್ಲ್ಯೂ                      81

ಜೋನಾಥನ್ ಕಾರಟರ್ ಬಿ.ಪಾಂಡೆ ಸಿ. ಉದಯ ಕೌಲ್               17

ಜಾಹ್ಮರ್ ಹ್ಯಾಮಿಲ್ಟನ್ ಬಿ.ಧವಳ ಕುಲಕರ್ಣಿ ಬೋಲ್ಡ್                 15

ಅಸಾದ್ ಫುದದೀನ ಬಿ.ಧವಳ ಕುಲಕರ್ಣಿ ಸಿ.ವಿ.ಜಗದೀಶ               47

ಆಶ್ಲೇ ನರ್ಸ್ ಬಿ.ಭಾರ್ಗವ ಭಟ್                                         4

ದಿಲಾನ್ ಜಾನ್ಸ್ನ  ಬಿ.ಅಭಿಷೇಕ ನಾಯರ್ ಸಿ.ಧವಳ ಕುಲಕರ್ಣಿ        0

ನಿಕಿತಾ ಮಿಲ್ಲರ್ ಬಿ.ಅಭಿಷೇಕ್ ನಾಯರ್ ಸಿ,ಪಾರಸ್ ಡೋಗ್ರಾ                 18

ಮಿಗೆಲ್ ಕಮೀನ್ಸ್ ನಾಟ್ ಓಟ್

 

 

ಬೌಲಿಂಗ್ ವಿವರ ಭಾರತ ಎ

ಓ  ಮೇ  ರ ವಿ

ಜಹೀರ ಖಾನ್                       15  5   33  1

ಈಶ್ವರ್ ಪಾಂಡೆ              16  4   44  1

ಧವಳ ಕುಲಕರ್ಣಿ               16  4    60  3

ಅಭಿಷೇಕ್ ನಾಯರ್           20.4 6   61  4

ಭಾರ್ಗವ ಭಟ್                    10   1   47   1

 

ಇತರೆ -29

12 ಬೈಸ್, 11 ಲೆಗ್ ಬೈಸ್, 2 ನೋ ಬಾಲ್, 4 ವೈಡ್

 

ಭಾರತ ಪ್ರಥಮ ಇನ್ನಿಂಗ್ಸ್ ಮೊದಲನೇಯ ದಿನ

10 ರನ್ 5 ಓವರ್

ಗೌತಮ ಗಂಭೀರ ನಾಟ್ ಓಟ್   2

ವಿ.ಜಗದೀಶ  ನಾಟ್ ಓಟ್      8

 

 

ಬೌಲಿಂಗ್ ವಿವರ ವೆಸ್ಟ್ಇಂಡೀಸ್ ಎ

 

ಓ  ಮೇ  ರ ವಿ

ಕಮಿಂಗ್ಸ್     2   1   5   0

ಡಿ.ಜಾನ್ಸ್ನ    2   1   2   0

ಜೆ.ಕಾರ್ಟ್ರ    1   0   3   0

 

ಸೂರ್ಯನ ಬೆಳಕಿನ ಕೊರತೆಯಿಂದ ಹಾಗೂ ನಿಧಾನಗತಿಯ ಬೌಲಿಂಗ್ ನಿಂದಾಗಿ ಒಟ್ಟು 82.4 ಓವರ್ಗಳ ಆಟ ಮಾತ್ರ ಸಾಧ್ಯವಾಯಿತು

 

 

ಇಂದಿನ ಪ್ರದರ್ಶನ ದಿಂದ ನಿರಾಸೆ: ಪೊವೆಲ್

 

“ ಇಂದಿನ ಪ್ರದರ್ಶನದಿಂದ ನಿರಾಸೆಯಾಗಿದೆ,ಭೊಜನದ ವಿರಾಮದ ವರೆಗೂ ಪಂದ್ಯದ ಮೇಲೆ ಹಿಡಿತ ವಿತ್ತು ಆದರೆ ಚಹಾ ವಿರಾಮದ ನಂತರ ಚೆಂಡು ವಿಪರೀತ ತಿರುವು ಪಡೆದು ಕೊಳ್ಳುತ್ತಿದ್ದರಿಂದ ಬೇಗನೇ ವಿಕೆಟ್ ಚೆಲ್ಲಿ ನಿರಾಸೆ ಅನುಭವಿಸಿದೇವು ನಾಳೆ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆಳಿಳಿ

ಫೋಟೋ ಇದೆ—ಕಿರನ್ ಪೊವೆಲ್

 

 

ಅಕ್ರಮಣವೇ ತಂತ್ರ

“ಆಕ್ರಮಣಕಾರಿ ಬೌಲಿಂಗ್ ತಂತ್ರ ಇಲ್ಲಿ ನೆರವಿಗೆ ಬಂತು ಪಿಚ್ ಮೃದುವಾಗಿರುವದರಿಂದ ಇಲ್ಲಿ ರಭಸವಾಗಿ ಚೆಮಡು ಎಸಯ ಬೇಕಾಗಿತ್ತು ಇದರಿಂದ ವಿಕೆಟ್ ಲಭಿಸಿದವು, ಒಟ್ಟಾರೆ ಇಂದಿನ ಪಂದ್ಯ ತೃಪ್ತಿ ನಿಡಿತು ಅಲ್ಲದೇ ಇದು ತಂಡದ ಸಾಂಘಿಕ ಪ್ರದರ್ಶನದ ಫಲವಾಗಿದೆಳಿಳಿ

ಫೋಟೋ ಇದೆ—ಧವಳ ಕುಲಕರ್ಣಿ

 

 

 

loading...

LEAVE A REPLY

Please enter your comment!
Please enter your name here