ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಣೆ

0
52

ಬೆಳಗಾವಿ 15: ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ಚುನಾವಣೆಗಾಗಿ ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯವು ಕಳೆದ ಅಕ್ಟೌಬರ್ 1 ರಿಂದ ಪ್ರಾರಂಭವಾಗಿದ್ದು, ಅರ್ಹ ಮತದಾರರು ಹೆಸರು ನೋಂದಣಿ ಮಾಡಿಕೊಳ್ಳುವಂತೆ ಕೋರಲಾಗಿದೆ.

ಈ ಕ್ಷೇತ್ರದ ಚುನಾವಣೆಯು 2014 ರಲ್ಲಿ ನಡೆಯುವ ಸಂದರ್ಭವಿದ್ದು, ಧಾರವಾಡ, ಹಾವೇರಿ, ಗದಗ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಈ ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ ಎಂದು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಗಂಗಾರಾಮ ಬಡೇರಿಯಾ ತಿಳಿಸಿದ್ದಾರೆ.

ಈ ಕ್ಷೇತ್ರದ ಚುನಾವಣೆಗೆ ಮತದಾರರಾಗಿ ಹೆಸರು ನೋಂದಾಯಿಸಲು ಅರ್ಹ ಮತದಾರರು ಬರುವ ಅಕ್ಟೌಬರ್ 1 ರಿಂದ 30 ರವರೆಗೆ ನಮೂನೆ-18 ರಲ್ಲಿ ಅವಶ್ಯಕ ದಾಖಲಾತಿಗಳೊಂದಿಗೆ ಸಲ್ಲಿಸಬಹುದಾಗಿದೆ. ಈ ಕ್ಷೇತ್ರದ ವ್ಯಾಪ್ತಿ ಹೊಂದಿರುವ ಧಾರವಾಡ, ಹಾವೇರಿ, ಗದಗ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಜಿಲ್ಲಾಧಿಕಾರಿಗಳನ್ನು ಸಹಾಯಕ ಮತದಾರರ ನೋಂದಣಿ ಅಧಿಕಾರಿಗಳೆಂದು ಹಾಗೂ ಆಯಾ ಜಿಲ್ಲೆಗಳ ತಾಲೂಕುಗಳ ತಹಸೀಲದಾರರನ್ನು ನಿಯೋಜಿತ ಅಧಿಕಾರಿಗಳೆಂದು ನೇಮಕ ಮಾಡಲಾಗಿದೆ.

2013 ರ ನವೆಂಬರ್ 1 ರ ಅರ್ಹತಾ ದಿನಾಂಕಕ್ಕಿಂತ 3 ವರ್ಷ ಹಿಂದೆ ಪದವೀಧರ ಆಗಿದ್ದ ಬಗ್ಗೆ ಮತಕ್ಷೇತ್ರದ ಅರ್ಹ ಮತದಾರರರೆಂದು ಪರಿಗಣಿಸಲ್ಪಡುತ್ತಾರೆ.

ಮತದಾರರು ನಮೂನೆ 18 ರ ಅರ್ಜಿಯೊಂದಿಗೆ ವಿಶ್ವವಿದ್ಯಾಲಯ ಅಥವಾ ಸಂಬಂಧಪಟ್ಟ ಸಂಸ್ಥೆಯಿಂದ ಪಡೆದ ಮೂಲ ಪದವಿ ಪ್ರಮಾಣ ಪತ್ರಗಳು ಅಥವಾ ಪತ್ರಾಂಕಿತ ಅಧಿಕಾರಿಗಳಿಂದ ಅಥವಾ ವಿಧಾನಸಭಾ ಮತಕ್ಷೇತ್ರದಲ್ಲಿನ ಸಂಬಂಧಿಸಿದ ವ್ಯಾಪ್ತಿಯ ಮತಗಟ್ಟೆ ಮಟ್ಟದ ಅಧಿಕಾರಿಗಳಿಂದ ದೃಢೀಕರಣಗೊಂಡ ಮೂಲ ಪ್ರಮಾಣ ಪತ್ರದ ನಕಲು ಪ್ರತಿಯನ್ನು ಸಲ್ಲಿಸಬೇಕು.

ವಿಶ್ವವಿದ್ಯಾಲಯವು ನೋಂದಾಯಿತ ಪದವೀಧರನೆಂಬುದಾಗಿ ನೀಡಿದ ನೋಂದಣಿ ಕಾರ್ಡಿನ ದೃಢೀಕೃತ ಪ್ರತಿ, ನೋಂದಾಯಿತ ಪದವೀಧರರ ಪಟ್ಟಿ, ವಕೀಲರ ಪಟ್ಟಿ, ವೈದ್ಯಕೀಯ ವೃತ್ತಿ ನಿರತರ ರಜಿಸ್ಟರ್, ಚಾರ್ಟಡ್ ಅಕೌಂಟೆಂಟ್ರವರುಗಳ ರಜಿಸ್ಟರ್, ಇಂಜನೀಯರುಗಳ ಸಂಸ್ಥೆಯಿಂದ ನಿರ್ವಹಿಸಲಾಗುವ ಇಂಜನೀಯರುಗಳ ರಜಿಸ್ಟರ್ ಇತ್ಯಾದಿಗಳಲ್ಲಿನ ಸಂಬಂಧಪಟ್ಟ ನಮೂದನೆಯ ಪ್ರಮಾಣೀಕೃತ ಪ್ರತಿ.

ಅರ್ಜಿದಾರನಿಂದ ಆತ ಓದಿದ ವಿಶ್ವವಿದ್ಯಾಲಯದ ರಿಜಿಸಾ್ತ್ರರನು (ಕುಲಸಚಿವರು) ಅಥವಾ ಯಾವುದೇ ವಿಶ್ವವಿದ್ಯಾಲಯಕ್ಕೆ ಸಂಯೋಜಿತವಾಗಿರುವ ಕಾಲೇಜಿನ ಪ್ರಿನ್ಸಿಪಾಲರು ಅಥವಾ ಅಂತಹ ಕಾಲೇಜಿನ ವಿಭಾಗದ ಮುಖ್ಯಸ್ಥರು ನೀಡಿದ ಪ್ರಮಾಣ ಪತ್ರದಿಂದ ಸಮರ್ಥಿಸಿದಂಥ ಅಫಿಡವಿಟ್.

ಅಥವಾ ಸಂಬಂಧಪಟ್ಟ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ನೀಡಿರುವ ಮೂಲ ಅಂಕಪಟ್ಟಿ ಅಥವಾ ನಿರ್ದಿಷ್ಠಪಡಿಸಿದ ಅಧಿಕಾರಿಗಳಿಂದ/ಹೆಚ್ಚುವರಿ ನಿರ್ದಿಷ್ಟಪಡಿಸಿದ ಅಧಿಕಾರಿಯಿಂದ/ ಜಿಲ್ಲೆಯ ಪತ್ರಾಂಕಿತ ಅಧಿಕಾರಿಯಿಂದ/ವಿಧಾನಸಭಾ ಮತಕ್ಷೇತ್ರದಲ್ಲಿನ ಸಂಬಂಧಿತ ವ್ಯಾಪ್ತಿಯ ಮತಗಟ್ಟೆ ಮಟ್ಟದ ಅಧಿಕಾರಿಯಿಂದ ದೃಢೀಕರಣಗೊಂಡ ಮೂಲ ಅಂಕಪಟ್ಟಿಯ ನಕಲು ಪ್ರತಿ. ಆದರೆ ಅರ್ಜಿದಾರನು ಸಂಬಂಧಪಟ್ಟ ಪರೀಕ್ಷೆಯನ್ನು ಉತ್ತೀರ್ಣನಾಗಿರುವುದಕ್ಕೆ ಸೂಚನೆಯನ್ನು ಅಂಕಪಟ್ಟಿಯು ಒಳಗೊಂಡಿರಬೇಕು.

ಅರ್ಹ ಮತದಾರರು ವಿಧಾನಸಭಾ ಮತಕ್ಷೇತ್ರದ ಯಾದಿಯಲ್ಲಿ ಅವರು ಹೆಸರು ನಮೂದಿಸಿದ್ದ ಬಗ್ಗೆ ವಿಧಾನಸಭಾ ಮತಕ್ಷೇತ್ರದ ಹೆಸರು, ಮತದಾರರ ಯಾದಿಯ ಭಾಗ ಕ್ರಮ ಸಂಖ್ಯೆ ಹಾಗೂ ಮತದಾರರ ಗುರುತಿನ ಚೀಟಿಯ ಕ್ರಮ ಸಂಖ್ಯೆ, ಇವುಗಳ ವಿವರಗಳನ್ನು ಕರ್ನಾಟಕ ಪಶ್ಚಿಮ ಪದವೀಧರ ಮತಕ್ಷೇತ್ರ ಸಲುವಾಗಿ ಅರ್ಹ ಮತದಾರು ತಮ್ಮ ಅರ್ಜಿಯಲ್ಲಿ ನಮೂದಿಸಬೇಕಾಗಿರುತ್ತದೆ.

ಈಗಾಗಲೇ ಕರ್ನಾಟಕ ಪಶ್ಚಿಮ ಪದವೀಧರ ಮತಕ್ಷೇತ್ರದ ಮತದಾರ ಯಾದಿಯಲ್ಲಿ ಹೆಸರು ನಮೂದಿರುವ ಮತದಾರರೂ ಸಹ ಈ ವಿವರಗಳನ್ನು ತಮ್ಮ ಸಹಾಯಕ ಮತದಾರರ ನೋಂದಣಿ ಅಧಿಕಾರಿಗಳಿಗೆ ಹಾಗೂ ನಿಯೋಜಿತ ಅಧಿಕಾರಿಗಳಾದ ಜಿಲ್ಲೆಗಳಲ್ಲಿ ಒಳಪಡುವ ಎಲ್ಲ ತಹಸೀಲದಾರರ ಕಚೇರಿಗೆ ಪೂರೈಸುವುದು ಅಗತ್ಯವಾಗಿರುತ್ತದೆ ಎಂದು ಅವರು ತಿಳಿಸಿದರು.

loading...

LEAVE A REPLY

Please enter your comment!
Please enter your name here