ಬೆಳಗಾವಿ ಮೇಯರ್ ಚುನಾವಣೆ ಯಾವಾಗ?

0
39

58 ವಾರ್ಡುಗಳು ನಗರ ಸೇವಕರಿದ್ದರೂ ಅನಾಥ ಪ್ರಜ್ಞೆಯಲ್ಲಿ…!

ಕನ್ನಡಮ್ಮ ವರದಿ

ಬೆಳಗಾವಿ 15- ಮಹಾನಗರ ಪಾಲಿಕೆಯ ಚುನಾವಣೆಯಾಗಿ ನಾಲ್ಕಾರು ತಿಂಗಳು ಗತಿಸಿದರೂ ಇದುವರೆಗೂ ಬೆಳಗಾವಿ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಚುನಾವಣೆ ನಡೆದಿಲ್ಲ.

ಸರಕಾರ ಈಗಾಗಲೇ ಮಹಾಪೌರ ಹಿಂದುಳಿದ ಓಬಿಸಿ ಹಾಗೂ ಉಪಮಹಾಪೌರ ಸಾಮಾನ್ಯ ಮಹಿಳೆ ಎನ್ನುವ ಕೆಟಗರಿ ನಿಗದಿಪಡಿಸಿ ಆದೇಶ ಹೊರಡಿಸಿತ್ತು. ಮಂಗಳೂರು ಪಾಲಿಕೆ ಮೀಸಲಾತಿ ಪ್ರಶ್ನಿಸಿ ನ್ಯಾಯಾಲಯದ ಕಟ್ಟೆ ಏರಿದೆ. ಇದರಿಂದಾಗಿ ಬೆಳಗಾವಿ ಮೇಯರ್ ಚುನಾವಣೆಗೆ ತೊಡಕಿಲ್ಲದಿದ್ದರೂ ಆಯ್ಕೆ ಪ್ರಕ್ರಿಯೆಯನ್ನು ಪ್ರಾದೇಶಿಕ ಆಯುಕ್ತರು ತಡೆಹಿಡಿದಿರುವುದು ಸರಿಯಾದ ಕ್ರಮವಲ್ಲ ಎನ್ನುವ ಅಭಿಪ್ರಾಯಗಳು ಕೆಲ ನಗರಸೇವಕರು ಮತ್ತು ಪ್ರಜ್ಞಾವಂತ ನಾಗರಿಕರಿಂದ ಕೇಳಿಬರುತ್ತಿವೆ.

ಈಗಾಗಲೇ ಮೀಸಲಾತಿ ಪ್ರಕಟಿಸಿ ಒಂದೆರಡು ತಿಂಗಳು ಗತಿಸಿವೆ. ಆದರೂ ಮೇಯರ್ ಆಯ್ಕೆ ಪ್ರಕ್ರಿಯೆ ನಡೆಯದಿರುವುದು 58 ವಾರ್ಡಗಳ ಸಾರ್ವಜನಿಕರ ಅನಾಥಪ್ರಜ್ಞೆಗೆ ಕಾರಣವಾಗಿವೆ. ವಾರ್ಡಗಳಲ್ಲಿ ನಗರಸೇವಕರಿದ್ದರೂ ಸಮಸ್ಯೆಗಳಿಗೆ ಪರಿಹಾರವಿಲ್ಲ. ಶುಚಿತ್ವ, ಚರಂಡಿ, ದಾರೀದೀಪ, ಹದಗೆಟ್ಟ ರಸ್ತೆ, ಕುಡಿಯುವ ನೀರಿನ ಸಮಸ್ಯೆ ಇದಾವುದಕ್ಕೂ ಪರಿಹಾರ ಕಾಣದ ಸಾರ್ವಜನಿಕ ನಗರಸೇವಕರಿದ್ದರೂ ಅನಾಥ ಪ್ರಜ್ಞೆಯಲ್ಲಿದ್ದಾರೆ.

ಬೆಳಗಾವಿ ಮಹಾನಗರ ಪಾಲಿಕೆಯ ಮಹಾಪೌರ ಮತ್ತು ಉಪಮಹಾಪೌರ ಆಯ್ಕೆ ಪ್ರಕ್ರಿಯೆಗೆ ಪ್ರಾದೇಶಿಕ ಆಯುಕ್ತ ಗಂಗಾರಾಮ ಬಡೇರಿಯಾ ಅವರು ತಕ್ಷಣ ಆದೇಶ ಹೊರಡಿಸಿ ನಗರ ವ್ಯಾಪ್ತಿಯ ವ್ಯವಸ್ಥೆಗಳಿಗೆ ಹೊಸ ಕಾಯಕಲ್ಪ ಕೊಡಬೇಕಿದೆ. ತಮ್ಮ ನಗರಸೇವಕ ಅವಧಿಯ ಆರು ತಿಂಗಳನ್ನು ನಗರಸೇವಕರು ವ್ಯರ್ಥವಾಗಿಸಿಕೊಂಡಿದ್ದಾರೆ. ಇದೇ ಧೋರಣೆ ಮುಂದುವರೆದಲ್ಲಿ ವರ್ಷ ತಲುಪುವ ಸಾಧ್ಯತೆಗಳಿವೆ. ನಗರ ವ್ಯವಸ್ಥೆ ನಗರಸೇವಕರ ಅಧಿಕಾರದಿಂದ ಸಾಧ್ಯ ಎನ್ನುವ ಅಭಿಪ್ರಾಯಗಳು ಕೇಳಿಬರುತ್ತಿವೆ. ಸಾರ್ವಜನಿಕರು ತಮ್ಮ ವಾರ್ಡ ವ್ಯಾಪ್ತಿಯಲ್ಲಿ ಓರ್ವ ಯೋಗ್ಯ ವ್ಯಕ್ತಿಯನ್ನು ಆಯ್ಕೆ ಮಾಡಿಕೊಂಡು ತಮ್ಮ ವ್ಯಾಪ್ತಿಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ನಗರಸೇವಕರನ್ನು ನಂಬಿಕೊಂಡಿರುತ್ತಾರೆ. ಆದರೆ ಮೇಯರ್ ಚುನಾವಣೆ ನಡೆಯದ ಕಾರಣ ಸಾರ್ವಜನಿಕರ ನಂಬಿಕೆ ಹುಸಿಯಾಗಿದೆ.

loading...

LEAVE A REPLY

Please enter your comment!
Please enter your name here