ಕನ್ನಡದಲ್ಲಿ ಕಾನೂನು

0
1340

ಆಂಗ್ಲ ಭಾಷೆಯಲ್ಲಿ ಇರುವ ಕಾನೂನು ಪುಸ್ತಕಗಳು ಬಹುತೇಕ ಜನರಿಗೆ ಕಬ್ಬಿಣದ ಕಡಲೆಯಾಗಿದೆ. ಇದು ಬದಲಾವಣೆ ಆಗಲೇ ಬೇಕು. ಸಾಮಾನ್ಯ ಜನರ ತಿಳಿವಳಿಕೆಗೆ ನಿಲುಕುವಂತಹ ಮಟ್ಟದಲ್ಲಿ ಕಾನೂನು ಪುಸ್ತಕಗಳು ಬಂದರೆ ಅನುಕೂಲ ಹೆಚ್ಚಾಗುವದು ಸಹಜ ಇದೇ ದೃಷ್ಟಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾನೂನು ಪುಸ್ತಕಗಳನ್ನು  ಕನ್ನಡಲೇ ಬರೆಸಲು ಒಲವು ತೋರಿಸಿದ್ದು ಸರ್ವರಿಗೂ ಮಾನ್ಯವಾಗು ಸಂಗತಿ. ಈಗಾಗಲೇ ರಾಜ್ಯದಲ್ಲಿ ಅನೇಕ ನ್ಯಾಯಾಧೀಶರು ಕನ್ನಡದಲ್ಲಿ ತಮ್ಮ ತೀರ್ಪುಗಳನ್ನು ಬರೆಯುತ್ತಿದ್ದಾರೆ. ಇಂಥ ನ್ಯಾಯಾಧೀಶರುಗಳನ್ನು ಸನ್ಮಾನಿಸಿದ್ದ ಸಿದ್ದರಾಮಯ್ಯ ಕೇವಲ ನ್ಯಾಯಾಧೀಶರುಗಳಿಗೆ ಅಷ್ಟೇ ಅಲ್ಲ ಕನ್ನಡಕ್ಕೂ ಸನ್ಮಾನ ಮಾಡಿದಂತೆ ಆಗಿದೆ. ಕಳೆದ ಕೆಲ ವರ್ಷಗಳಿಂದ ಐಎಎಸ್ ಪರೀಕ್ಷೆಗಳು ಸಹಿತ ಕನ್ನಡಲ್ಲಯೇ ನಡೆಯುತ್ತಿದ್ದು ಎಲ್ಲರಿಗೂ ತಿಳಿದ ಸಂಗತಿ. ಐಎಎಸ್ ಅಧಿಕಾರ ಕೆ. ಶಿವರಾಂ ಕನ್ನದಲ್ಲಿಯೇ ಪರೀಕ್ಷೆ ಬರೆದು  ಆಡಳಿತ ರಂಗಕ್ಕೆ ಬಂದಿರುವದು ಇಲ್ಲಿ ಸ್ಮರಣಾರ್ಹ. ಶಿವರಾಂ ಕನ್ನಡದಲ್ಲಿ ಪಾಸಾದ ಮೊದಲ ವ್ಯಕ್ತಿಯಾಗಿದ್ದಾರೆ. ಆ ನಂತರದಲ್ಲಿ ಅನೇಕರು  ಕನ್ನಡಲ್ಲಿಯೇ ಪರೀಕ್ಷೆ ಬರೆದು ಯಶಸ್ವಿಯಾಗಿದ್ದಾರೆ. ಇದೇ ರೀತಿಯಲ್ಲಿ ಕನ್ನಡಕ್ಕೆ ಸರ್ವರಂಗದಲ್ಲಿಯೂ ಮನ್ನಣೆ ದೊರಕುವಂತಾಹ ಕ್ರಮಗಳನ್ನು  ರಾಜ್ಯ ಸರಕಾರ ಮುಂದಾಗಿ ಹಮ್ಮಿಕೊಳ್ಳುವದು ಅವಶ್ಯವಾಗಿದೆ. ರಾಜ್ಯೌತ್ಸವ ಸಮೀಪ ಬಂದಾಗ ಕನ್ನಡ ಕನ್ನಡ  ಎಂದು ಹೇಳುತ್ತಾ ಹೋಗುವ ಬದಲು ನಿರಂತರವಾಗಿ ವರ್ಚವೀಡಿ ಕನ್ನಡದ ಅಭಿವೃದ್ದಿಗೆ ಕಾರ್ಯಕ್ರಮಗಳನ್ನು ರೂಪಿಸುವ ದಿಶಯಲ್ಲಿ ಕನ್ನಡ ಬಳಕೆಯ ವಿಷಯದಲ್ಲಿ ಸರಕಾರ ಮುಂದಾಗುವದು ಲೇಸು

loading...

LEAVE A REPLY

Please enter your comment!
Please enter your name here