ಇಂದು ಆಮ್ ಆದ್ಮಿ ಪಕ್ಷದ ವತಿಯಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

0
21

ಹುಬ್ಬಳ್ಳಿ.ಅ.21: ಅರವಿಂದ ಕೇಜ್ರಿವಾಲ್ ನೇತೃತ್ವದಲ್ಲಿ ಸ್ಥಾಪನೆಯಾದ ಅಮ್ ಆದ್ಮಿ ಪಕ್ಷದ ಸದಸ್ಯತ್ವ ಅಭಿಯಾನ ಇಂದು ಬೆಳಿಗ್ಗೆ 10.30 ಕ್ಕೆ ನಗರದ ಚೆನ್ನಮ್ಮ ವೃತ್ತದಲ್ಲಿ ನಡೆಯಲಿದೆ. ಇದಕ್ಕೂ ಮುಂಚೆ ಸೋಮವಾರ ನವನಗರದ ಗಣೇಶ ನಿಲಯದ ಆಮ್ ಆದ್ಮಿ ಪಕ್ಷದ ಜಿಲ್ಲಾ ಕಾರ್ಯಾಲಯದಲ್ಲಿ ಕಾರ್ಯಕರ್ತರ ಸಭೆಯನ್ನು ನಡೆಸಲಾಯಿತು.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕೋಮುವಾದಿ ಹಾಗೂ ಭ್ರಷ್ಟಾಚಾರಿ ಪಕ್ಷಗಳನ್ನು ಹೊರಗಿಟ್ಟು ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸುವಂತೆ ಪಕ್ಷದ ಶೈಲೇಂದ್ರಕುಮಾರ ಪಾಟೀಲ, ಅನಂತಕೃಷ್ಣಾ, ಉಮಾ ರೇವಡಿ, ರವಿ ಬೇವಿನಕಟ್ಟಿ, ಗುರುಪುತ್ರ ಗೊಜನೂರ, ಶ್ಯಾಮಸನ್, ನೂರಅಲಿ ಮುಂತಾವುದರು ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here