ಮಿನಿ ಉದ್ಯೌಗ ಮೇಳ

0
53

ಹುಬ್ಬಳ್ಳಿ.ಅ.28: ಹುಬ್ಬಳ್ಳಿಯ ಜಿಲ್ಲಾ ಉದ್ಯೌಗ ವಿನಿಮಯ ಕೇಂದ್ರ ಮಿನಿ ವಿಧಾನಸೌಧದಲ್ಲಿ ಹಾಗೂ ನವನಗರದ ಜಿಲ್ಲಾ ಉದ್ಯೌಗ ವಿನಿಮಯ ಕೇಂದ್ರದಲ್ಲಿ ಮಿನಿ ಉದ್ಯೌಗ ಮೇಳವನ್ನು ಮಾನವ ಸಂಪನ್ಮೂಲ ಅಭಿವೃದ್ದಿ ಕೇಂದ್ರ, ಜಿಲ್ಲಾ ಉದ್ಯೌಗ ವಿನಿಮಯ ಕಚೇರಿ, ಹುಬ್ಬಳ್ಳಿ ಮತ್ತು ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ದಿ ತರಬೇತಿ ನಿಗಮ ನಿಯಮಿತ ಇವರ ಸಂಯುಕ್ತ ಆಶ್ರಯದಲ್ಲಿ ಇದೇ ದಿ. 30 ರಂದು ಹುಬ್ಬಳ್ಳಿಯ ಜಿಲ್ಲಾ ಉದ್ಯೌಗ ವಿನಿಮಯ ಕೇಂದ್ರದಲ್ಲಿ ಮಿನಿ ಉದ್ಯೌಗ ಮೇಳವನ್ನು ಮುಂಜಾನೆ 9-30 ರಿಂದ ಮಧ್ಯಾಹ್ನ 2-30 ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ.
ಅಂದಿನ ದಿನದ ಉದ್ಯೌಗ ಮೇಳದಲ್ಲಿ ಬೆಳಗಾವಿಯ ಬೆಮ್ಕೊ ಹೈಡ್ರಾಲಿಕ್ಸ್, ಕ್ವೆಸ್ಟ್ ಗ್ಲೌಬಲ್ ಮ್ಯಾನುಫ್ಯಾಕ್ಚರಿಂಗ್ ಪ್ರೈ. ಲಿ, ಮೈಸೂರಿನ ಹಿಂದುಜಾ ಗ್ಲೌಬಲ್ ಸಲ್ಯೂಶನ್ಸ್, ಹುಬ್ಬಳ್ಳಿಯ ಹೈಕ್ಯೂರ್ ಫಾರ್ಮಾಸುಟಿಕಲ್ಸ್, ಕೋರಾಡಾ ಫರ್ನಿಚರ್ಸ, ಅಂಕುಶ ಇಂಡಸ್ಟ್ತ್ರೀಸ್, ಹಾಂಡಾ ಗ್ರೂಪ್ಸ, ಸಿದ್ದೇಶ್ವರ ್ಘ ಕಂ, ರಿಚ್ ಇನ್ಪ್ತ್ರಾ ಡೆವಲಪರ್ಸ, ಪ್ರೆಸೂಲ್ ಇನ್ಪೌಟೆಕ್, ಗುರು ಇಂಡಸ್ಟ್ತ್ರೀಸ್, ಎಮ್.ಎಮ್. ಜೋಷಿ ಆಯ್ ಇನ್ಸಟಿಟ್ಯೂಟ್, ಯುರೇಕಾ ಫೋರ್ಬ್ಸ ಹಾಗೂ ಬೆಂಗಳೂರಿನ ಇಂಡೊ-ಯುಎಸ್-ಮಿಮ್ ಮುಂತಾದ ಖಾಸಗಿ ರಂಗದ ಉದ್ಯೌಗದಾತರುಗಳು ಭಾಗವಹಿಸಿ ತಮ್ಮ ಸಂಸ್ಥೆಯಲ್ಲಿಯ ವಿವಿಧ ಖಾಲಿ ಹುದ್ದೆಗಳಿಗೆ ಅಭ್ಯರ್ಥಿಗಳ ಸಂದರ್ಶನ ನಡೆಸಿ ನೇಮಕಾತಿ ಮಾಡಿಕೊಳ್ಳುವವರಿರುತ್ತಾರೆ. ಕಾರಣ ಎಸ್.ಎಸ್.ಎಲ್.ಸಿ. ಪಿ.ಯು.ಸಿ. ಉತ್ತೀರ್ಣ ಅಥವಾ ಅನುತ್ತೀರ್ಣ, ಐ.ಟಿ.ಐ-್ಲಫಿಟ್ಟರ್, ಟರ್ನರ್, ಮಶಿನಿಸ್ಟ್, ಇಲೆಕ್ಟ್ತ್ರಿಶಿಯನ್, ವೆಲ್ಡರ್ ಹಾಗೂ ಇತರ್ವ ಡಿಪ್ಲೌಮಾ-್ಲಮೆಕ್ಯಾನಿಕಲ್ವ್ ಸಿ.ಎನ್.ಸಿ ಆಪರೇಟರ್ಸ, ಎಮ್.ಫಾರ್ಮಾ, ಬಿ.ಫಾರ್ಮಾ ಹಾಗೂ ಪದವೀಧರರು ಸಂದರ್ಶನಕ್ಕೆ ಹಾಜರಾಗಬಹುದು. ಮೇಲಿನ ಅರ್ಹತೆಯನ್ನು ಹೊಂದಿ ಸದರಿ ಸಂದರ್ಶನಕ್ಕೆ ಹಾಜರಾಗುವ ಇಚ್ಛೆ ಹೊಂದಿದ್ದಲ್ಲಿ ಹುಬ್ಬಳ್ಳಿಯ ನವನಗರದಲ್ಲಿರುವ ಜಿಲ್ಲಾ ಉದ್ಯೌಗ ವಿನಿಮಯ ಕೇಂದ್ರಕ್ಕೆ ವಿದ್ಯಾರ್ಹತೆಯ ಎಲ್ಲ ಮೂಲ ಪ್ರಮಾಣ ಪತ್ರ, ಪಾಸಪೋರ್ಟ ಅಳತೆಯ ಭಾವಚಿತ್ರ ಹಾಗೂ ಬಯೋಡಾಟಾದೊಂದಿಗೆ ತಮ್ಮ ಸ್ವಂತ ಖರ್ಚಿನಲ್ಲಿ ದಿನಾಂಕ 30-10-2013 ರ ಬುಧವಾರದಂದು ಮುಂಜಾನೆ 9-30 ಗಂಟೆಗೆ ಸರಿಯಾಗಿ ಹಾಜರಿರಲು ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0836-2225289 ನ್ನು ಸಂಪರ್ಕಿಸಲು ತಿಳಿಸಲಾಗಿದೆ.

loading...

LEAVE A REPLY

Please enter your comment!
Please enter your name here