ಅನ್ಯಭಾಷೆ ಹಾಗೂ ಇಂಗ್ಲೀಷ ವ್ಯಾಮೋಹಕ್ಕೆ ಸಿಲುಕಿ ಕನ್ನಡ ಸಂಸ್ಕ್ಕತಿ ನಶಿಸುತ್ತಿದೆ: ಎನ್.ಎಚ್.ಕೋನರಡ್ಡಿ.

0
69

ನವಲಗುಂದ : ಪಟ್ಟಣದ ಶ್ರೀಕಂಠಶಾಸ್ತ್ತ್ರೀ ಕಲಾಭವನದಲ್ಲಿ ಏರ್ಪಡಿಸಿದ್ದ ಕರ್ನಾಟಕ ರಾಜ್ಯೌತ್ಸವ ಸಮಾರಂಭದಲ್ಲಿ, ಅಧ್ಯಕ್ಷತೆ ವಹಿಸಿದ  ಶಾಸಕ ಎನ್.ಎಚ್.ಕೋನರಡ್ಡಿಯವರು  ಅನ್ಯಭಾಷೆ ಹಾಗೂ ಆಂಗ್ಲಭಾಷೆಯ ವ್ಯಾಮೋಹಕ್ಕೆ ಸಿಲುಕಿ ಕನ್ನಡ ಸಂಸ್ಕ್ಕತಿ ನಶಿಸುತ್ತಿದೆ ಎಂದು ಹೇಳಿ ಮಾತನಾಡಿದರು.

ಕನ್ನಡ ಭಾಷೆ ಸ್ವಾಭಿಮಾನ ಗೌರವ ನಮ್ಮ ಉಸಿರಾಗಬೇಕೆಂದು ಹೇಳಿದರು. ಉತ್ತರ ಕರ್ನಾಟಕದವರೆ ಹೆಚ್ಚು ಕನ್ನಡ ಸ್ವಾಭಿಮಾನಯುಳ್ಳವರಾಗಿದ್ದಾರೆ. ಉಸಿರಿರುವರೆಗೆ ಕನ್ನಡ ಭಾಷೆ ನಾಲಿಗೆ ಮೇಲೆ ಇರಬೇಕು. ಹಿಂದೆ ಸಾಕಷ್ಟು ಸಾಹೀತಿಗಳು ಸಾಸ್ತೀಯ ಭಾಷೆ ಸ್ಥಾನಮಾನದ ಹೋರಾಟ ಮಾಡುತ್ತಿದ್ದಾರೆ, ರಾಜ್ಯದ ಗಡಿನಾಡ ಪ್ರದೇಶಗಳಲ್ಲಿ ಕನ್ನಡ ಭಾಷೆ ಮೇಲೆ ಒತ್ತಾಯಪೂರ್ವಕವಾಗಿ ಅನ್ಯಭಾಷೆ ಪ್ರಭಾವ ಬೀರುತ್ತವೆ ಎಂದು ವಿಷಾದಿಸಿದರು.

ಟಿ.ಟಿ. ದಾಸರ ಉಪನ್ಯಾಸಕರಾಗಿ ಆಗಮಿಸಿದ ಅವರು ಹರಪ್ಪ ಮೊಹಂಜೋದಾರು ಕಾಲದಿಂದ ಹುಟ್ಟಿ ಬೆಳೆದು ಕನ್ನಡ ಭಾಷೆಗೆ ಅಜಗಜಾಂತರ ಇತಿಹಾಸ ಹೊಂದಿದೆ. ಬಹುತೇಕ ರಾಜ್ಯದಲ್ಲಿ ಕನ್ನಡ ಭಾಷೆ ಸ್ವಾಭಿಮಾನ ಕಡಿಮೆಯಾಗಿ  ರಾಜ್ಯೌತ್ಸವ ಬಂದಾಗ ಮಾತ್ರಾ ವಿಜೃಂಭಣೆ ಆಚರಣೆಗೆ ಮುಂದಾಗುತ್ತಾರೆ ಹೊರತು ಕನ್ನಡ ಭಾಷೆ ಸ್ವಾಭಿಮಾನದಿಂದಲ್ಲ. ಕನ್ನಡ ಭಾಷೆ ಸ್ವಾಭಿಮಾನ ನಶಿಸಿ ಮುಂದೊಂದು  ದಿನ , ಅದರ ಪಳಿಯುಳಿಕೆ ಹುಡುಕಾಡುವ ಪರಿಸ್ಥಿತಿ ಬಂದರೂ ಬರಬಹುದು. ಇದರಲ್ಲಿ ಎರಡು ಮಾತಿಲ್ಲ. ಅದ್ದರಿಂದ ರಾಜ್ಯದಲ್ಲಿ ಕನ್ನಡ ಭಾಷೆ ಪ್ರಭಾವ ಹೆಚ್ಚಿಸಲು ಅಧಿಕಾರಿಗಳು , ಮಂತ್ರಿಗಳು,     ಸಾಹಿತಿಗಳು ಮನಸ್ಸು ಮಾಡಬೇಕು ಎಂದು ಮಾತನಾಡಿ ತಿಳಿ ಹೇಳಿದರು.

ಇದರ ಪೂರ್ವದಲ್ಲಿ ಕರ್ನಾಟಕ ಮಾತೆ ತಾಯಿ ಭುವನೇಶ್ವರಿ ಭಾವಚಿತ್ರದ ಮೇರವಣಿಗೆ ನಗರದ ಪ್ರಮುಖ ರಸ್ಥೆಗಳಲ್ಲಿ ನಡೆಸಿ ಗೌರವ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ತಹಸಿಲ್ದಾರ ಕೆ.ಎಲ್. ಭಜಂತ್ರಿ, ತಾ.ಪಂ. ಅಧ್ಯಕ್ಷ ಪ್ರಕಾಶ ಪಡ್ಡಣಶೆಟ್ಟಿ, ಕೃಷಿ ಇಲಾಖೆ ಅಧಿಕಾರಿ ವಿ.ವಿ.ವಿಠ್ಠಲರಾವ್, ಪುರಸಭೆ ಮುಖೈಧಿಕಾರಿ ಅಶೋಕ ಮಠದ, ಎಂ.ಎಂ.ಖೇಣಿ,     ಜಿ.ಪಂ.ಮುಖ್ಯಾಧಿಕಾರಿ ಜಿ.ಡಿ.ಜೋಶಿ, ಸಿಪಿಐ ಎಸ್.ಎಸ್.ಪಡೋಳಕರ, ಪಿಎಸ್ಐ ಯು.ಜೆ.ಶಶಿಧರ, ಕುಂದರಗಿ, ನಗರದ ಪ್ರಮೂಖರು ಮುಂತಾದವರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here