ವಿಶ್ವ ಮಾನವ ಸಂದೇಶ ನೀಡಿದ ಭಾಷೆ ಕನ್ನಡ : ಕಾಡಮ್ಮನವರ

0
48

ನವಲಗುಂದ : ಸ್ಥಳೀಯ ಶ್ರೀ ಶಂಕರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಜರುಗಿದ ಕರ್ನಾಟಕ ರಾಜ್ಯೌತ್ಸವ ಕಾರ್ಯಕ್ರಮದಲ್ಲಿ  ಕನ್ನಡ ಭಾಷೆಗೆ ಭವ್ಯವಾದ ಪರಂಪರೆ ಹಾಗು ಇತಿಹಾಸ ಇದೆ. ಭಾರತದಲ್ಲಿರುವ ಹಾಗೂ ಪ್ರಪಂಚದ ಭಾಷೆಗಳ ಜೊತೆಗೆ ಸ್ಪರ್ಧೆಯನ್ನು ಮಾಡುವ ಸತ್ವ ಹಾಗೂ ಸಂಸ್ಕ್ಕತಿಯನ್ನು ಕನ್ನಡ ಭಾಷೆಯು ಮೈಗೂಡಿಸಿಕೊಂಡಿದೆ. ಆದ್ದರಿಂದಲೇ ಕನ್ನಡ ಭಾಷೆಗೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ದೊರಕಿವೆ. ಆದಿಮಹಾಕವಿ ಪಂಪನಿಂದ ಹಿಡಿದು ಇಂದಿನವರೆಗೆ ಕನ್ನಡ ಭಾಷೆಯಲ್ಲಿ ಬರುವ ಕೃತಿಗಳು ವಿಶ್ವ ಮಾನವ ಸಂದೇಶವನ್ನು ನೀಡುತ್ತಿರುವದು ಅತ್ಯಂತ ಹೆಮ್ಮೆಯ ವಿಷಯ ಎಂದು ಪ್ರೊ ಎಸ್.ಎಸ್.ಕಾಡಮ್ಮನವರು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ  ಪ್ರಾಚಾರ್ಯರಾದ ಎಸ್. ಬಿ. ಯಳ್ಳೂರರವರು ತಮ್ಮ ಸಮಾರೋಪದಲ್ಲಿ ಕನ್ನಡ ನಾಡು-ನುಡಿ, ನೆಲ-ಜಲ, ಸಾಹಿತ್ಯ-ಸಂಸ್ಕ್ಕತಿಯನ್ನು ರಕ್ಷಣೆಯನ್ನು ಮಾಡುತ್ತ ಕನ್ನಡ ಭಾಷೆ ಏಳ್ಗೆಗಾಗಿ ಗೋಕಾಕ ಚಳುವಳಿಯ ಮಾದರಿಯಲ್ಲಿ ಆರು ಕೋಟಿ ಕನ್ನಡಿಗರು ನಿರಂತರ ಹೋರಾಟದ ಮೂಲಕ ಜಾಗೃತಿಯನ್ನುಂಟು ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಹೇಳಿದರು.

ಈ ಸಂದರ್ಭದಲ್ಲಿ ಪ್ರಾಚಾರ್ಯರಾದ ಪ್ರೊ. ಎಸ್.ಬಿ. ಕುಂದಗೋಳ, ಪ್ರೊ ಜಿ.ಎಸ್. ಪಲ್ಲೇದ, ಪದವಿ ಹಾಗೂ ಪಪೂ ಮಹಾವಿದ್ಯಾಲಯದ ಎಲ್ಲ ಬೋಧಕ ಬೋಧಕೇತರ ಸಿಬ್ಬಂದಿಯವರು ಉಪಸ್ಥಿತರಿದ್ದರು.

ಆರಂಭದಲ್ಲಿ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪೂಜಾ ಕಾರ್ಯ ನೆರವೇರಿತು.

ಶಿಬಿ. ಎಚ್ ಹೂಗಾರರವರಿಂದ ನಾಡಗೀತೆ, ಪ್ರೊ. ಜಿ.ಎಸ್. ಗುಡಾರದರಿಂದ ಭಾವಗೀತೆ, ವಿದ್ಯಾರ್ಥಿ ಒಕ್ಕೂಟದ ಕಾರ್ಯಾಧ್ಯಕ್ಷರಾದ ಪ್ರೊ ಎಸ್.ಬಿ. ಬದಾಮಿಯವರು ಸ್ವಾಗತಿಸಿದರು.  ಮಹೇಶ ಕುರ್ತಕೋಟಿ ವಂದಿಸಿದರು. ಗ್ರಂಥಾಧಿಕಾರಿ ಡಿ.ಎಫ್. ಮಾಬನೂರ ಕಾರ್ಯಕ್ರಮ ನಿರೂಪಿಸಿದರು

loading...

LEAVE A REPLY

Please enter your comment!
Please enter your name here