Àುಂಗನ ಕಾಯಿಲೆಗೆ ಮೂರನೇ ಹಂತದ ಲಸಿಕೆ ಖಾನಾಪುರ:

0
10

ಮಂಗನ ಕಾಯಿಲೆಗೆ ಮೂರನೇ ಹಂತದ ಲಸಿಕೆ
ಖಾನಾಪುರ: ಕಳೆದ ವರ್ಷ ತಾಲೂಕಿನ ಜಾಂಬೋಟಿ ಹಾಗೂ ಕಣಕುಂಬಿ ಅರಣ್ಯಭಾಗದ ಗ್ರಾಮಗಳಲ್ಲಿ ಕಂಡುಬಂದಿದ್ದ ಮಂಗನ ಕಾಯಿಲೆಯ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಮೂರನೇ ಹಂತದ ರೋಗ ನೀರೋಧಕ ಲಸಿಕೆ ನೀಡುವ ಕಾರ್ಯಕ್ರಮಕ್ಕೆ (ಕೆಎಫ್‌ಡಿ ವ್ಯಾಕ್ಸಿನೇಶನ್‌) ಇತ್ತೀಚೆಗೆ ತಾಲೂಕಿನ ಜಾಂಬೋಟಿ ಗ್ರಾಮದಲ್ಲಿ ಚಾಲನೆ ನೀಡಲಾಯಿತು. ಜಾಂಬೋಟಿ ಭಾಗದ ಜಿಪಂ ಸದಸ್ಯ ಜಯರಾಮ ದೇಸಾಯಿ, ಜಿಲ್ಲಾ ಸರ್ವೇಕ್ಷಣಾಧೀಕಾರಿ ಡಾ.ಪಲ್ಲೇದ ಮತ್ತು ಕಣಕುಂಬಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ: ವಿಕಾಸ ಪೈ ಉಪಸ್ಥಿತರಿದ್ದರು.
ಪ್ರಥಮ ಹಂತದಲ್ಲಿ 19 ಗ್ರಾಮಗಳಲ್ಲಿ 7 ಸಾವಿರ ಜನರಿಗೆ ಲಸಿಕೆ ನೀಡಲು ಗುರಿ ಹೂಂದಲಾಗಿದ್ದು, 10 ತಂಡಗಳನ್ನು ರಚಿಸಿ ಸಾರ್ವಜನಿಕ ಸ್ಥಳಗಳಲ್ಲಿ, ಶಾಲೆಗಳಲ್ಲಿ, ಮಂದಿರಗಳಲ್ಲಿ ಲಸಿಕೆ ನೀಡಲು ಆರಂಭಿಸಲಾಗಿದೆ. ಕಣಕುಂಬಿ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಕಾಪೊಲಿ, ಅಮಟೆ, ಮುಡಗೈ, ಚಿಕಲೆ, ಕಣಕುಂಬಿ ಮತ್ತು ಚೋರ್ಲಾ, ಪಾರವಾಡ, ಜಾಂಬೋಟಿ, ವಿಜಯನಗರ, ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಲಸಿಕೆ ನೀಡಲಾಗುತ್ತಿದ್ದು, ಅರಣ್ಯ ಭಾಗದ ಸಾರ್ವಜನಿಕರು ಮುಂಜಾಗೃತಾ ಕ್ರಮವಾಗಿ ಲಸಿಕೆಯನ್ನು ಪಡೆಯಬೇಕು ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ.ಸಂಜಯ ಡುಮ್ಮಗೋಳ ಕರೆ ನೀಡಿದರು.
ಆರೋಗ್ಯ ಇಲಾಖೆಯ ಖಾನಾಪುರ ಸಮುದಾಯ ಆರೋಗ್ಯ ಕೇಂದ್ರ ಮತ್ತು ಕಣಕುಂಬಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಕಾರ್ಯಕ್ರಮದ ಅಂಗವಾಗಿ ಜಾಂಬೋಟಿ ಗ್ರಾಮದ ಗ್ರಾಮಸ್ಥರಿಗೆ ಲಸಿಕೆ ನೀಡಿದರು.

loading...

LEAVE A REPLY

Please enter your comment!
Please enter your name here