Home ಬೆಳಗಾವಿ

ಬೆಳಗಾವಿ

Belgaum city and district news

ಕಬ್ಬು ತುಂಬಿದ ಟ್ರ್ಯಾಲಿಗೆ ಬೈಕ್ ಡಿಕ್ಕಿ -ಬೈಕ್ ಸವಾರ ಸಾವು

0
ಕಬ್ಬು ತುಂಬಿದ ಟ್ರ್ಯಾಲಿಗೆ ಬೈಕ್ ಡಿಕ್ಕಿ -ಬೈಕ್ ಸವಾರ ಸಾವು ಕನ್ನಡಮ್ಮ ಸುದ್ದಿ ಚಿಕ್ಕೋಡಿ : ಕಬ್ಬು ತುಂಬಿದ ಟ್ರ್ಯಾಲಿಗೆ ಬೈಕ್ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸಾವನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದ ಹೊರ ವಲಯದಲ್ಲಿ ನಡೆದಿದೆ. ಕಾಗವಾಡ ತಾಲೂಕಿನ ಕೃಷ್ಣಾ ಕಿತ್ತೂರ ಗ್ರಾಮದ ಶಿವಪ್ಪ ಬಸರಗಿ (58) ವೃತ ವ್ಯಕ್ತಿ ಇತ ಮೋಳೆದಿಂದ ಕೃಷ್ಣಾ ಕಿತ್ತೂರ ಗ್ರಾಮಕ್ಕೆ ತೆರಳುವಾಗ ದಾರಿ ಮದ್ಯದಲ್ಲಿ ಕಬ್ಬು ತುಂಬಿದ ಟ್ರ್ಯಾಲಿ ಹಿಂಬದಿಗೆ ಡಿಕ್ಕಿ ಹೊಡೆದಿದ್ದು ಇತನನ್ನು ಅಥಣಿ ಸರ್ಕಾರಿ ಆಸ್ಪತ್ರೆಗೆ ಕರೆದೊಯುವಾಗ ದಾರಿ...

ಮುದ್ರಣ, ದೃಶ್ಯ ಮಾಧ್ಯಮಗಳು ಜನರ ವಿಶ್ವಾಸ ಬೆಳೆಸಲಿ:ಅಶೋಕ ಚಂದರಗಿ

0
ಮುದ್ರಣ, ದೃಶ್ಯ ಮಾಧ್ಯಮಗಳು ಜನರ ವಿಶ್ವಾಸ ಬೆಳೆಸಲಿ:ಅಶೋಕ ಚಂದರಗಿ ಗೋಕಾಕ: ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳು ಮೌಲ್ಯಾಧಾರಿತ ಸುದ್ದಿಗಳಿಂದ ಜನರ ವಿಶ್ವಾಸ ಉಳಿಸಿಕೊಳ್ಳಬೇಕೆಂದು ಬೆಳಗಾವಿ ಜಿಲ್ಲಾ ಕನ್ನಡ ಕ್ರೀಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಹೇಳಿದರು. ರವಿವಾರದಂದು ನಗರದ ಶ್ರೀ ವೆಂಕಟೇಶ್ವರ ಸಭಾಂಗಣದಲ್ಲಿ ಗುರುಮಾರ್ಗ ಶೈಕ್ಷಣಿಕ ಮಾಸ ಪತ್ರಿಕೆ ಅವರು ಹಮ್ಮಿಕೊಂಡ ಆದರ್ಶ ಶಿಕ್ಷಕ ಹಾಗೂ ಸಾಧಕರ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಮಾಧ್ಯಮಗಳು ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚಲ್ಲುವ ಸುದ್ದಿಗಳ ಮೂಲಕ ಸಮಾಜವನ್ನು ತಿದ್ದುವ ಕಾರ್ಯಮಾಡಬೇಕು ಇಂದು ರಾಜಕೀಯಕ್ಕಿಂತ ಸಮಾಜಿಕ ನಿಲುವಿಗೆ ಜನತೆ ಆಸಕ್ತಿ ತೊರಿಸುತ್ತಿದ್ದಾರೆ....

ತರಬೇತಿಯಲ್ಲಿದ್ದ ಸೈನಿಕ ಕಾಣೆ

0
ತರಬೇತಿಯಲ್ಲಿದ್ದ ಸೈನಿಕ ಕಾಣೆ ಬೆಳಗಾವಿ: ಇಲ್ಲಿನ ಎಮ್‌ಎಲ್‌ಐಆರ್‌ಸಿ ಕ್ಯಾಂಪ್‌ನಲ್ಲಿ ತರಬೇತಿ ಪಡೆಯುತ್ತಿದ್ದ ಯುವಸೈನಿಕ ಕಣ್ಮರೆಯಾಗಿರುವ ಘಟನೆ ಶುಕ್ರವಾರ ನಡೆದಿದೆ. ಹುಕ್ಕೇರಿ ತಾಲೂಕಿನ ನಿರಲಿ ಗ್ರಾಮದ ರಿಕ್ಯೂಬ್ ಅರ್ಬಾಜಲಿ ನದಾಪ (೨೦) ಕಾಣೆಯಾದ ಯುವಕ, ಸೈನಿಕ ವೃತ್ತಿಗೆ ಆಯ್ಕೆಯಾದ ಬಳಿಕ ಬೆಳಗಾವಿ ಎಮ್‌ಎಲ್‌ಐಆರ್‌ಸಿ ಕ್ಯಾಂಪ್‌ನಲ್ಲಿ ತರಬೇತಿ ಪಡೆದುಕೊಳ್ಳುತ್ತಿದ್ದ ೨೭ ರಂದು ಶುಕ್ರವಾರ ಕ್ಯಾಂಪ್‌ನ ಮೇಲಾಧಿಕಾರಿಗಳಿಗೆ ಯಾವುದೇ ಮಾಹಿತಿ ನೀಡದೆ ತರಬೇತಿ ಕ್ಯಾಂಪ್‌ನಿAದ ಕಾಣೆಯಾಗಿದ್ದಾನೆ. ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮರಾಠಿಗೆ ೨ಎ ಸ್ಥಾನ ಒದಗಿಸದಿದ್ದರೆ ಉಪಚುನಾವಣೆ ಬಹಿಷ್ಕಾರ: ಶಾಸಕಿ ನಿಂಬಾಳ್ಕರ್

0
ಮರಾಠಿಗೆ ೨ಎ ಸ್ಥಾನ ಒದಗಿಸದಿದ್ದರೆ ಉಪಚುನಾವಣೆ ಬಹಿಷ್ಕಾರ: ಶಾಸಕಿ ನಿಂಬಾಳ್ಕರ್ ಬೆಳಗಾವಿ: ಮರಾಠಾ ಸಮುದಾಯಕ್ಕೆ ೨ಎ ಮೀಸಲಾತಿ ಒದಗಿಸಲು ಸರಕಾರ ಮುಂದಾಗಬೇಕಿದೆ. ಇದರಲ್ಲಿ ಹಿನ್ನಡೆಯಾದರೆ ಚುನಾವಣೆಗೆ ಬಹಿಷ್ಕರಿಸಲು ನಾವು ಸನ್ನದ್ಧರಾಗಿದ್ದೆವೆ ಶಾಸಕಿ ಅಂಜಲಿ ನಿಂಬಾಳ್ಕರ್ ಸರಕಾರ ಎಚ್ಚರಿಗೆ ರವಾನಿಸಿದ್ದಾರೆ. ಧಾರವಾಡದಲ್ಲಿ ಕಾರ್ಯಕ್ರಮದ ಮರಾಠಾ ಕ್ರಾಂತಿ ಮೋರ್ಚಾ ಸಭೆಯಲ್ಲಿ ಮಾತನಾಡಿದ ಅವರು, ಮಾರಾಠಾ ಸಮುದಾಯಕ್ಕೆ ಅಭಿವೃದ್ಧಿ ನಿಗಮ ಬೇಡ, ಈ ಸಮುದಾಯದ ಬಗ್ಗೆ ಸರಕಾರ ಇಚ್ಛಾಶಕ್ತಿ ಇದ್ದರೆ ೨ಎಮೀಸಲಾತಿ, ಸೂಕ್ತ ಸ್ಥಾನಮಾನ ನೀಡ ಮರಾಠಾಗರನ್ನು ಅಭಿವೃದ್ಧಿ ಪಡಿಸಲಿ. ಮಸ್ಕಿ, ಬಸವಕಲ್ಯಾಣದಲ್ಲಿ ನಡೆಯಲಿರುವ ಉಪಚುನಾವಣೆ ಸೇರಿದಂತೆ ಎಲ್ಲಾ ಲೋಕಸಭಾ ಚುನಾವಣೆಗೆ...

ಗಾಂಜಾಕೋರರಿಬ್ಬರು ಸಿಐಡಿ ವಶಕ್ಕೆ

0
ಗಾಂಜಾಕೋರರಿಬ್ಬರು ಸಿಐಡಿ ವಶಕ್ಕೆ ಬೆಳಗಾವಿ: ನಗರದ ವ್ಯಾಪ್ತಿಯಲ್ಲಿ ಅಪಾರ ಮೌಲ್ಯದ ಗಾಂಜಾ ಮಾರಾಟ ಮಾಡುತ್ತಿದ್ದ ಗಾಂಜಾಕೋರರಿಬ್ಬರನ್ನು ಸಿಐಡಿ ಅಧಿಕಾರಿಗಳು ರವಿವಾರ ಬಂಧಿಸಿದ್ದಾರೆ. ಆಕೀಬ್ ಜಾವೀದ್ ದುನಿಯಾರ್ ತಂದೆ ಜಾವೀದ್ ಮನಿಯಾರ್(೨೭), ಪೀರಣವಾಡಿಯ ಆನಸಾರ ಗಲ್ಲಿಯ ಸೈಪ್‌ಅಲಿ ಮಾಡಿವಾಲೆ (೨೭) ಬಂಧಿತ ಆರೋಪಿಗಳು. ಇವರಿಬ್ಬರಿಂದ ೨೩ ಸಾವಿರ ರೂ. ನಗದು ಹಾಗೂ ಎರಡು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಅಯೋಧ್ಯ ನಗರದ ವ್ಯಾಪ್ತಿಯಲ್ಲಿ ಹಾಗೂ ಬೋಗಾರವೆಸ್, ಧರ್ಮವೀರ ಸಂಭಾಜಿ ವೃತ್ತದಲ್ಲಿ ಗಾಂಜಾ ಮಾರಾಟ ಮಾಡುವ ಸಂದರ್ಭದಲ್ಲಿ ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಸಿಐಡಿ ಬೆಳಗಾವಿ ಘಟಕದ ಪೊಲೀಸ್ ಇನ್ಸ್ಪೆಕ್ಟರ್ ಎಸ್.ಕೆ.ಕುರಗೊಡಿ...

ನಾಳೆ ಬೆಳಗಾವಿಗೆ ಆಗಮಿಸಲಿದ್ದಾರೆ ಗೃಹ ಸಚಿವ ಬೊಮ್ಮಾಯಿ

0
  ಬೆಳಗಾವಿ ರಾಜ್ಯ ಗೃಹ ಸಚಿವ ಹಾಗೂ ಹಾವೇರಿ ಜಿಲ್ಲೆ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ನ.30ರಂದು ಬೆಳಗಾವಿಗೆ ಆಗಮಿಸಲಿದ್ದಾರೆ. ಮೂರು ದಿನಗಳ ಕಾಲ ಧಾರವಾಡ, ಗದಗ, ಹಾವೇರಿ, ಬೆಳಗಾವಿ ಪ್ರವಾಸ ಕೈಗೊಂಡಿರುವ ಸಚಿವರು ನಾಳೆ ಬೆಳಗಾವಿಗೆ ರಾತ್ರಿ 10 ಗಂಟೆಗೆ ಆಗಮಿಸಿ ವಾಸ್ತವ್ಯ ಮಾಡಲಿದ್ದಾರೆ. ಡಿಸೆಂಬರ್ 1 ರಂದು ಬೆಳಿಗ್ಗೆ 9 ಗಂಟೆಗೆ ಕೆಎಸ್ ಆರ್ ಪಿ 6ನೇ ತಂಡದ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮ, 11.30 ಗಂಟೆಗೆ ಪೊಲೀಸ್ ಕಮೀಷನರ್ ಕಾರ್ಯಾಲಯದ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಶಂಕು ಸ್ಥಾಪನಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಮಧ್ಯಾಹ್ನ 3...

ಕಾಣೆಯಾಗಿದ್ದ ಯುವಕ ಕಿನಾಲ್ ನಲ್ಲಿ ಶವವಾಗಿ ಪತ್ತೆ

0
  ಬೆಳಗಾವಿ : ಕಳೆದ ಮೂರು ದಿನಗಳ ಹಿಂದೆ ಕಾಣೆಯಾಗಿದ್ದ ಒಂಬತ್ತು ವರ್ಷದ ಬಾಲಕನೋರ್ವ ಮುನವಳ್ಳಿ ಬಳಿಯ ಮಲಪ್ರಭಾ ನದಿಯ ಕಿನಾಲ್ ವೊಂದರಲ್ಲಿ ಅನುಮಾಸ್ಪದ ಶವವಾಗಿ ಪತ್ತೆಯಾದ ಘಟನೆ ನಡೆದಿದೆ. ತಾಲೂಕಿನ ಮುನವಳ್ಳಿ ಪಟ್ಟಣದ ಸೂಲಕಟ್ಟಿ ಓಣಿ ಬಾಲಕ ಪಂಚನಗೌಡ ದ್ಯಾಮಪ್ಪಗೋಳ (09) ಮೃತ ದುರ್ದೈವಿ. ಮೃತ ಬಾಲಕ ತಂದೆ ಗೌಡಪ್ಪಾ ದ್ಯಾಮಪ್ಪಗೋಳ ಕಳೆದ ನ.26ರಂದು ರಾತ್ರಿ 7.30ರ ಸುಮಾರಿಗೆ ಆಟ ಆಡಲು ಹೊರಗಡೆ ಹೋಗುತ್ತೇನೆಂದು ಹೇಳಿ ಹೋದವನು ಮರಳಿ ಮನೆಗೆ ಬಾರದೆ ಇದ್ದಾಗ ಕಾಣೆಯಾಗಿರುವ ಕುರಿತು ಸವದತ್ತಿ ಪೋಲೀಸ್ ಠಾಣೆಯಲ್ಲಿ‌ ದೂರು ದಾಖಲಿಸಿದ್ದರು. ತನಿಖೆ...

ಕೈ ಕೊಟ್ಟು ಕಮಲ ಹಿಡಿಯಲು ಮುಂದಾದ ಅನಗೋಳ್ಕರ್

0
  ಬೆಳಗಾವಿ ಕಾಂಗ್ರೆಸ್ ಪಕ್ಷದ‌ ಪ್ರಾಥಮಿಕ ಸ್ಥಾನ ಹಾಗೂ ಜಿಪಂ ಸದಸ್ಯ ಸ್ಥಾ‌ನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಕೃಷ್ಣಾ ಅನಗೋಳ್ಕರ್ ಹೇಳಿದರು. ಭಾನುವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಕಾಂಗ್ರೆಸ್ ನಲ್ಲಿ ಇಲ್ಲಿಯವರೆಗೆ ದುಡಿದರೂ ಅದು ಸರಿ ಹೊಂದಲಿಲ್ಲ. ಮೂರು ಬಾರಿ ಗ್ರಾಪಂ‌ ಸದಸ್ಯ ಹಾಗೂ ಜಿಪಂ‌ ಸದಸ್ಯರಾಗಿ ಕೆಲಸ ಮಾಡಿದ್ದೇನೆ. ನೇಕಾರರಿಗೆ ಸೌಲಭ್ಯ ಕೊಡಿಸುವ ನಿಟ್ಟಿನಲ್ಲಿ ನಾನು ಜಿಪಂ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದರು. ಮುಂಬರು ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ಮಾಡುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪ್ರಾಥಮಿಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಶೀಘ್ರದಲ್ಲೇ ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿದ್ದೇನೆ...

ಜಿಂಕೆ ಕೊಂಬು ಸಾಗಿಸುತ್ತಿದ್ದ ಇಬ್ಬರ ಬಂಧನ

0
  ಬೆಳಗಾವಿ ಜಿಂಕೆ ಕೊಂಬು ಸಾಗಿಸುತ್ತಿದ್ದ ಇಬ್ಬರು ಅಂತರಾಜ್ಯರದ ಆರೋಪಿಗಳನ್ನು ಬಂಧಿಸುವಲ್ಲಿ ಬೆಳಗಾವಿ ಅರಣ್ಯ ಸಂಚಾರಿ ದಳದ ಪೊಲೀಸರು ಯಶಸ್ವಿಯಾಗಿದ್ದಾರೆ. ನೆರೆಯ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಅಜರಾ ತೇಜಸ್ ತಾನಾಜಿ ಪಾಟೀಲ (24) ಹಾಗೂ ತುಷಾರ ತಾನಾಜಿ (26) ಬಂಧಿತರು. ಆರೋಪಿಗಳಿಂದ ತಲೆಯ ಎಲುಬು ಸಮೇತ ಇದ್ದ ಎರಡು ಜಿಂಕೆ ಕೊಂಬುಗಳನ್ನು ವಶಕ್ಕೆ ಪಡೆಯಲಾಗಿದೆ. ಬೇರೆ ಅರಣ್ಯ ಪ್ರದೇಶದಲ್ಲಿ ಬೇಟೆಯಾಡಿ ಸಂಗ್ರಹಿಸಿದ ಕೊಂಬುಗಳನ್ನು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು, ಕಳ್ಳರನ್ನು ಖೆಡ್ಡಾಗೆ ಕೆಡವಲು ಯಶಸ್ವಿಯಾಗಿದ್ದಾರೆ. ಈ ದಾಳಿಯಲ್ಲಿ ಅರಣ್ಯ ಸಂಚಾರಿ...

ಬಸ್ ಡಿಕ್ಕಿ: ವಿದ್ಯಾರ್ಥಿ ಸಾವು

0
ಬಸ್ ಡಿಕ್ಕಿ: ವಿದ್ಯಾರ್ಥಿ ಸಾವು ಬೆಳಗಾವಿ: ಇಲ್ಲಿನ ಭಾಗ್ಯ ನಗರದ ಬಳಿಯಲ್ಲಿ ಬೈಕ್‌ಗೆ ಬಸ್ ಅಪ್ಪಳಿಸಿರುವ ದುರ್ಘಟನೆಯಿಂದ ಯುವಕ ಸ್ಥಳದಲ್ಲಿ ಅಸುನಿಗಿರುವ ಘಟನೆ ಶನಿವಾರ ನಡೆದಿದೆ. ಖ್ಯಾತ ಚಾರ್ಟೆಡ್ ಅಕೌಂಟAಟ್ ಮನೋಜ ಹುಯಿಲಗೋಳ ಅವರ ಮಗ ತನಯ (೧೮) ಮೃತ ದುರ್ದೈವಿ, ಮನೋಜ ಅವರ ಏಕೈಕ ಪುತ್ರ ಎಂದು ತಿಳಿದು ಬಂದಿದೆ. ಮಗನ ಸಾವಿನ ಸುದ್ದಿ ಅರಗಿಸಿಕೊಳ್ಳಲಾಗಿದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಟ್ರಾಫಿಕ್ ಸೌತ್‌ನಲ್ಲಿ ಪ್ರಕರಣ ದಾಖಲಾಗಿದೆ.