ಬೆಳಗಾವಿ

Belgaum city and district news

ಚಿಕ್ಕೋಡಿ ಎಡಿಎಚ್ಒ ಮುನ್ನಾಳ ಅಮಾನತು

ಕನ್ನಡಮ್ಮ ಸುದ್ದಿ ಚಿಕ್ಕೋಡಿ 04: ಅಧಿವೇಶನ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಸಲ್ಲಿಸದ ಚಿಕ್ಕೋಡಿ ಅಪರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್.ವಿ. ಮುನ್ಯಾಳ ಅವರನ್ನು ಕರ್ತವ್ಯಲೋಪದ ಆರೋಪದ ಮೇಲೆ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಕುಡಚಿ ಶಾಸಕ ಪಿ. ರಾಜೀವ್ ಅವರು ರಾಯಬಾಗ ತಾಲೂಕಿನ ಕುಡಚಿ ಮತ್ರಕ್ಷೇತ್ರದಲ್ಲಿ ಎಷ್ಟು ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಮತಕ್ಷೇತ್ರದಲ್ಲಿ ಜನಸಂಖ್ಯೆಗೆ ಈಗಿರುವ ಆರೋಗ್ಯ ಕೇಂದ್ರಗಳು ಸಮರ್ಪಕವಾಗಿವೆಯೇ? ಎಂಬುದು ಸೇರಿದಂತೆ ಇನ್ನೀತರ ಪ್ರಶ್ನೆಗಳನ್ನು ವಿಧಾನಸಭೆಯಲ್ಲಿ ಕೇಳಿದ್ದರು. ಆದರೆ ರಾಜ್ಯ ಆರೋಗ್ಯ ಇಲಾಖೆ ಆಯುಕ್ತಾಲಯಕ್ಕೆ ಚಿಕ್ಕೋಡಿ ಎಡಿಎಚ್ಒ ಮಾಹಿತಿ...

ಹಳ್ಳ ಹಿಡಿಯುವತ್ತ ಸ್ಮಾರ್ಟಸಿಟಿ ಯೋಜನೆ !

video
ಪಿಎಂಸಿ ಕಂಪನಿ ಕೈಗೊಳ್ಳುವ ಕ್ರಿಯಾ ಯೋಜನೆಗಳಿಂದಾಗಿ ಸಮಸ್ಯೆ ಶೃಷ್ಠಿ ಮಾಲತೇಶ ಮಟಿಗೇರ https://youtu.be/ZXMVjSbuDfQ ಬೆಳಗಾವಿ: ಬೆಳಗಾವಿ ಸ್ಮಾರ್ಟಸಿಟಿ ಯೋಜನೆಗಳು ಟಿಎಂಸಿ ಕಂಪನಿ ಸಿಬ್ಬಂದಿಗಳ ಕೊರತೆ ಹಾಗೂ ಸರಿಯಾದ ಕ್ರಿಯಾ ಯೋಜನೆಗಳನ್ನು ರೂಪಿಸದೆ ಇರುವ ಕಾರಣ ಸ್ಮಾರ್ಟಸಿಟಿ ಯೋಜನೆ ಹಳ್ಳ ಹಿಡಿಯುವ ಲಕ್ಷಣಗಳು ಮೇಲ್ನೊಟಕ್ಕೆ ಗೋಚರಿಸುತ್ತಿವೆ. ಕೇಂದ್ರ ಸರ್ಕಾರದ ಸ್ಮಾರ್ಟ್ಸಿಟಿ ಯೋಜನೆಯಲ್ಲಿ ಆಯ್ಕೆಯಾದ ಬೇರೆ ನಗರಗಳಂತೆ ಬೆಳಗಾವಿ ನಗರದಲ್ಲಿ ಕಾರ್ಯಗಳು ನಡೆಯದೆ ಕುಂಟಿತವಾಗುತ್ತಿವೆ. ಇದಕ್ಕೆಲ್ಲಾ ಕಾರಣ ಪಿಎಂಸಿ ಕಂಪನಿಯು...

*ಸಂಕೇಶ್ವರ ಪೋಲಿಸರ ಭರ್ಜರಿ ಬೇಟೆ *ಕಳ್ಳರ ಬಂಧನ ೧೬ ಲಕ್ಷ ಮೌಲ್ಯದ ಚಿನ್ನಾಭರಣ ವಶ

*ಸಂಕೇಶ್ವರ ಪೋಲಿಸರ ಭರ್ಜರಿ ಬೇಟೆ *ಕಳ್ಳರ ಬಂಧನ ೧೬ ಲಕ್ಷ ಮೌಲ್ಯದ ಚಿನ್ನಾಭರಣ ವಶ *ಕನ್ನಡಮ್ಮ ಸುದ್ದಿ-ಸಂಕೇಶ್ವರ* : ರಾತ್ರಿಯ ಹೊತ್ತು ಮನೆ ಕಳ್ಳತನ ಮಾಡುತ್ತಿದ್ದ ಇಬ್ಬರು ಖದಿಮರನ್ನು ಬಂದಿಸಿರುವ ಪೋಲಿಸರು ಅವರಿಂದ ಒಂದು ಬೈಕ್ ಹಾಗೂ 16, ಲಕ್ಷ ರೂ.ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದಾರೆ. ನಗರದ ಇರ್ಫಾನ ಬಾಬಾಸಾಬ ಮಾಲ್ದಾರ (38) ಹಾಗೂ ತೌಫೀಕ ನಿಕಂದರ ಜಮಾದಾರ (25) ಸೇರಿ ರಾತ್ರಿಯ ಹೊತ್ತು ಕಾರಿನಲ್ಲಿ ಈ ಕಳ್ಳರು ಸಂಶಯಾಸ್ಪದ ರೀತಿಯಲ್ಲಿ ಕಂಡುಬಂದಾಗ ಗಸ್ತು ತಿರುಗುತ್ತಿದ ಸಮಯದಲ್ಲಿ ಪೋಲಿಸರು ಬಂಧಿಸಿ ವಿಚಾರಿಸಿದಾಗ ಈ ಹಿಂದೆ ಸಂಕೇಶ್ವರ ಹಾಗೂ ಗೋಕಾಕ...

ಜನತಾ ಪರಿವಾರದ ನಾಯಕರು ಮರಳಿ ಗೂಡಿಗೆ: ಕುಮಾರಸ್ವಾಮಿ

ಕನ್ನಡಮ್ಮ ಸುದ್ದಿ ಬೆಳಗಾವಿ:11 ಜೆಡಿಎಸ್ ಪಕ್ಷವನ್ನು ಸ್ವತಃ ಮುಖ್ಯಮಂತ್ರಿಗಳೇ ಒಡೆಯಬೇಕೆಂಬ ಕುತಂತ್ರದ ಪ್ರಯತ್ನ ನಡೆಸಿದ್ದಾರೆ. ಅದರಲ್ಲಿ ಕೆಲ ಯಶಸ್ವಿ ಕಂಡರೂ ಅದು ಅವರಿಗೆ ಪ್ರಯೋಜನವಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರ ಸ್ವಾಮಿ ಇಂದಿಲ್ಲಿ ಹೇಳಿದರು. ಅವರು ಗುರುವಾರ ನಗರದ ಹೊರ ವಲಯದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತ, ಮೂಲ ಜನತಾ ದಳದ ಪಕ್ಷದಲ್ಲಿ ಇದ್ದು ಕಾಂಗ್ರೆಸ್ ಪಕ್ಷ ಸೇರಿ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯನವರು ಜೆಡಿಎಸ್ ಪಕ್ಷವನ್ನು ಒಡೆಯಬೇಕೆಂಬ ಕುತಂತ್ರದ ಪ್ರಯತ್ನ ನಡೆಸಿದ್ದಾರೆ. ಅದರಲ್ಲಿ ಅವರು ಯಶಸ್ವಿ ಕಂಡರೂ ಅದು ಪ್ರಯೋಜನವಾಗುವುದಿಲ್ಲ ಎಂದರು. ಭ್ರಷ್ಟಾಚಾರ ಮುಕ್ತ ಆಡಳಿತ...

ದುಷ್ಕರ್ಮಿಗಳಿಂದ ಗಣೇಶ ಮೂರ್ತಿಗೆ ಕಲ್ಲು ಎಸೆತ:ತಡರಾತ್ರಿ ಬೆಂಡಿ ಬಜಾರದಲ್ಲಿ  ಗಲಾಟೆ

ದುಷ್ಕರ್ಮಿಗಳಿಂದ ಗಣೇಶ ಮೂರ್ತಿಗೆ ಕಲ್ಲು ಎಸೆತ:ತಡರಾತ್ರಿ ಬೆಂಡಿ ಬಜಾರದಲ್ಲಿ  ಗಲಾಟೆ ಕನ್ನಡಮ್ಮ ಸುದ್ದಿ-ಬೆಳಗಾವಿ:ನಗರದ  ಬೆಂಡಿ ಬಜಾರ್​ನ ತೆಂಗಿನಕರಗಲ್ಲಿಯಲ್ಲಿ ಸ್ಥಾಪಿಸಿರುವ ಗಣಪತಿ ಮೂರ್ತಿ ಮೇಲೆ ತಡ ರಾತ್ರಿ ದುಷ್ಕರ್ಮಿಗಳು ಕಲ್ಲು ಎಸೆದಿದ್ದು ಗಲಾಟೆಯಾಗಿದೆ. ಗಲಭೆಯಲ್ಲಿ ಎರಡು ಆಟೋಗಳು, ಒಂದು ಕಾರು ಜಖಂಗೊಂಡಿದೆ. ಕಿಡಿಗೇಡಿಗಳು ಗಣಪತಿಯ ಕಿವಿ, ಕಾಲಿಗೆ ಕಲ್ಲು ಎಸೆದಿದ್ದಾರೆ ಎಂದು ಹೇಳಲಾಗುತ್ತಿದೆ.ತಕ್ಷಣ ಎಚ್ಚತುಕೊಂಡ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಸ್ಥಳದಲ್ಲಿ ಹೆಚ್ವನ ಪೊಲೀಸರನ್ನು ನಿಯೋಜಿಸಿ ಭದ್ರತೆ ಕಲ್ಪಿಸಲಾಗಿದೆ. ಸ್ಥಳಕ್ಕೆ ಡಿಸಿಪಿ ಸೀಮಾ ಲಾಟ್ಕರ್​, ಬೆಳಗಾವಿ ಕಮಿಷನರ್​ ಡಿಸಿ ರಾಜಪ್ಪ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.ವದಂತಿಗೆ ಕಿವಿಗೊಡದಂತೆ ಪೊಲಿಸ್...

ಕರ್ನಾಟಕ ಪೊಲೀಸ್ ಕಾಯ್ದೆ-1963

ರೌಡಿ ಶಿಟರ್ ಹೆಸರಿನಲ್ಲಿ ಪೊಲೀಸರಿಂದ ಹಣ ವಸೂಲಿ! ಭರಮಗೌಡಾ ಪಾಟೀಲ ಬೆಳಗಾವಿ 13: ಸಾಮಾನ್ಯವಾಗಿ ಪೊಲೀಸ್ ಠಾಣೆಗಳಿಗೆ ಹೋದಾಗ ಪೊಲೀಸ್ ಠಾಣೆಯ ಪ್ರವೇಶದ್ವಾರದಲ್ಲಿ ಪ್ರಮುಖವಾದ ಜಾಗೆಯಲ್ಲಿ ಎದ್ದು ಕಾಣುವಂತೆ ಎರಡು ಗುಂಪುಗಳನ್ನೊಳಗೊಂಡ ಛಾಯಾಚಿತ್ರಗಳಯುಳ್ಳ ವ್ಯಕ್ತಿಗಳ ಬೋರ್ಡಗಳನ್ನು ರೋಗ್ಸ್ ಗ್ಯಾಲರಿ ಎಂಬ ಶೀರ್ಷಿಕೆಯಡಿ ಕಾಣುತ್ತವೆ. ಅದೇ ರೀತಿ ಪೊಲೀಸರು ಸಾಮಾನ್ಯ ಜನರನ್ನು ಹೆದರಿಸಲು ರೌಡಿ ಶಿಟರ್ ಪಟ್ಟಿಗೆ ಸೇರಿಸುತ್ತವೆ, ಹುಷಾರ! ಎಂದು ಬೆದರಿಸುವುದು ಇಂದು ಸಾಮಾನ್ಯವಾಗಿ ಕಾಣುತ್ತೇವೆ. ಇಲ್ಲಿ ರೌಡಿ ಶಿಟರ್‍ಗಳು ಎಂದರೆ ಏನು? ಯಾರನ್ನು ರೌಡಿ ಶಿಟರ್ ಪಟ್ಟಿಗೆ ಸೇರಿಸಲಾಗುತ್ತದೆ? ಏಕೆ ಸೇರಿಸಲಾಗುತ್ತದೆ? ಇದರ ಉದ್ದೇಶ ಮತ್ತು...

ಕಿಷ್ಕಿಂದೆಯಂತಾಗಿರುವ ಬೆಳಗಾವಿ ಹಿಂದಕ್ಕೆ ಸಾಗಲು ಜನಪ್ರತಿನಿಧಿಗಳೇ ಕಾರಣ ! – ಸ್ಮಾರ್ಟ್ ಬೆಳಗಾವಿಯಾಗುವುದು ಬೇಡವೇ – ಇಲ್ಲಿ ಎಲ್ಲಕ್ಕೂ ಅಡ್ಡಗಾಲು

ಕನ್ನಡಮ್ಮ ವಿಶೇಷ ಬೆಳಗಾವಿ:19 ಬೆಳಗಾವಿ ಮಹಾನಗರ ಪಾಲಿಕೆ ವಾರದ ಹಿಂದೆ ನಡೆಸಿದ ಭಾರೀ ಕಾರ್ಯಾಚರಣೆ ನಗೆಪಾಟಲಿಗೀಡಾಗಿದೆ. ಬೇಸ್‍ಮೆಂಟ್ ತೆರವು ಕಾರ್ಯಾಚರಣೆ ಕೈಗೊಳ್ಳುವ ಮೂಲಕ ಪಾಲಿಕೆಯ ಅಧಿಕಾರಿಗಳು ಆರಂಭ ಶೂರತ್ವ ತೋರಿಸಿರುವುದು ಬೆಳಗಾವಿ ಜನತೆಯಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಖಡೇಬಜಾರ, ಮಾರುತಿಗಲ್ಲಿ, ಗಣಪತಿಗಲ್ಲಿಯಲ್ಲಿ ಏಕಕಾಲಕ್ಕೆ ವಿವಿಧ ತಂಡಗಳಾಗಿ ಪಾಲಿಕೆ ಕೈಗೊಂಡ ಕಾರ್ಯಾಚರಣೆ ವ್ಯಾಪಾರಿಗಳ ಪಾಲಿಗೆ ನಡುಕ ಹುಟ್ಟಿಸಿತ್ತು. ಆದರೆ ಅಷ್ಟೇ ವೇಗದಲ್ಲಿ ತಾನು ಕೈಗೊಂಡ ಕಾರ್ಯಾಚರಣೆಯಿಂದ ಪಾಲಿಕೆ ಹಿಂದೆ ಸರಿದಿರುವುದು ಬೆಳಗಾವಿ ಪಾಲಿಕೆಯಿಂದ ಯಾವ ಕೆಲಸವೂ ಆಗದು ಎನ್ನುವುದನ್ನು ಮತ್ತೇ ತೋರ್ಪಡಿಸಿದೆ. ಒಂದೇ ದಿನಕ್ಕೆ ರಾಜಾರೋಷದಲ್ಲಿ ಇಂಥ ಕಾರ್ಯಾಚರಣೆ...

ಬಡಕಲ್‌ಗಲ್ಲಿಯಲ್ಲಿ ಕಲ್ಲು ತೂರಾಟ ಕನ್ನಡಮ್ಮ ಸುದ್ದಿ-ಬೆಳಗಾವಿ: ನಗರದಲ್ಲಿ ಗಣೇಶ ಚತರ‍್ಥಿ ಮೂಗಿಯಿತು ಅನ್ನುವುದರಲ್ಲಿಯೇ ಮತ್ತೆ ಬಡಕಲ್ ಗಲ್ಲಿಯಲ್ಲಿ ಎರಡು ಗುಂಪುಗಳ ನಡುವೆ ಕಲ್ಲು ತೂರಾಟವಾಗಿದೆ. ಗಣೇಶ ಹಬ್ಬ ಮೂಗಿಯುವುದರಲ್ಲಿಯೇ ಮೂರನೇ ಬಾರಿ ಈ ರೀತಿಯ ಘಟನೆಯ ನಡೆದಿದೆ. ಪೊಲೀಸ್ ಎಷ್ಟೆÃ ಭದ್ರತೆ ನೀಡಿದರು ಸಹ ನಗರದಲ್ಲಿ ಪದೇ ಪದೇ ಕಿಡಿಗೇಡಿಗಳು ಕಲ್ಲು ತೂರಾಟವನ್ನು ನಡೆಸಿದ್ದಾರೆ. ಇಂದು ರಾತ್ರಿ ೮.೩೦ರ ಸುಮಾರಿಗೆ ಎರಡು ಗುಂಪುಗಳ ನಡುವೆ ಕಲ್ಲು ತೂರಾಟ ನಡೆದಿದೆ. ವಿಷಯ ತಿಳಿದು ತಕ್ಷಣ ಪೊಲೀಸ್ ರು ಸ್ಥಳಕ್ಕೆ ದೌಡಾಯಿಸಿದ್ದಾರೆ ಎಂದು ತಿಳಿದು ಬಂದಿದೆ.

ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಗ್ರಾಪಂ ನೌಕರರಿಂದ ಜಿಪಂ ಕಚೇರಿ ಎದುರು ಪ್ರತಿಭಟನೆ

video
https://youtu.be/hzQESdEO2Ps ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಗ್ರಾಪಂ ನೌಕರರಿಂದ ಜಿಪಂ ಕಚೇರಿ ಎದುರು ಪ್ರತಿಭಟನೆ .ಕನ್ನಡಮ್ಮ ಸುದ್ದಿ-ಬೆಳಗಾವಿ : ತುಟ್ಟಿ ಭತ್ಯೆ ,ಕನಿಷ್ಠ ವೇತನ, ಬಡ್ತಿ ಮೂಲಕ ನೇಮಕಾತಿ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ ನೌಕರರ ಸಂಘದ ಜಿಲ್ಲಾ ಸಮಿತಿ ವತಿಯಿಂದ ಗ್ರಾಪಂ ನೌಕರರು ಜಿಲ್ಲಾ ಪಂಚಾಯತ ಎದುರು ಧರಣಿ ಕುಳಿತು ಪ್ರತಿಭಟನೆ ನಡೆದಿದರು. ಇದೇ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಜಿ.ಎಂ‌ ಜೈನೆಖಾನ್ ಮಾತನಾಡಿ, ಗ್ರಾಮ ಪಂಚಾಯತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳು ಪಂಚಾಯತ ರಾಜ್ಯ ಜಾರಿಗೆ ಬಂದ ಮೇಲೆ ಕಡಿಮೆ ವೇತನದಲ್ಲಿ ಕೆಲಸ ನಿರ್ವಹಿಸಿದ್ದಾರೆ....
loading...