ಬೆಳಗಾವಿ

Belgaum city and district news

ಜು.29ರಂದು ಪ್ರಧಾನಿ ನಮೋ ಚಿಕ್ಕೋಡಿಗೆ

ಕನ್ನಡಮ್ಮ ಸುದ್ದಿ ಚಿಕ್ಕೋಡಿ 19: ಪ್ರಧಾನಿ ನರೇಂದ್ರ ಮೋದಿ ಅವರು ರೈತರು ಬೆಳೆಯುವ ಬೆಳೆಗಳಿಗೆ “ಬೆಂಬಲ ಬೆಲೆ” ಘೋಷಿಸುವ ಮೂಲಕ ರೈತರಿಗೆ ವಿಶೇಷ ಕೊಡುಗೆ ಕೊಟ್ಟಿರುವ ಹಿನ್ನೆಲೆಯಲ್ಲಿ ರೈತರನ್ನುದ್ದೇಶಿಸಿ “ಬೆಂಬಲ ಬೆಲೆ” ಘೋಷಣೆಯ ಬಗ್ಗೆ ಜು.29ರಂದು ಚಿಕ್ಕೋಡಿಯ ಬೃಹತ್ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಇದರ ಪೂರ್ವಭಾವಿ ತಯಾರಿಗಾಗಿ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಅಧ್ಯಕ್ಷತೆಯಲ್ಲಿ, ಅರವಿಂದ ಲಿಂಬಾವಳಿ, ಶಾಸಕರು ಹಾಗೂ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಬಿಜೆಪಿ ಶಾಸಕರು, ಮಾಜಿ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಸಂಸದರು ಮತ್ತು ಬಿಜೆಪಿ ತಾಲ್ಲೂಕು ಘಟಕ...

ಸ್ವತಂತ್ರ ಅಭ್ಯರ್ಥಿ ಗೆಲುವು ಕುಡಚಿಯಲ್ಲಿ ಸಂಭ್ರಮ

ಕುಡಚಿ 30: ಸ್ಥಳೀಯ ಕುಡಚಿ ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಗೆಲುವಿನ ಅಭ್ಯರ್ಥಿ ವಿವೇಕರಾವ ಅಭಿಮಾನಿಗಳು ಪಟಾಕಿ ಹಾರಿಸಿ ಸಂಭ್ರಮಿಸಿದರು. ವಿಧಾನ ಪರಿಷತ್ ಚುಣಾವಣೆ ಫಲಿತಾಂಶದಲ್ಲಿ ರಾಯಬಾಗದ ಸ್ವತಂತ್ರ ಅಭ್ಯರ್ಥಿ ವಿವೇಕರಾವ ವಿ. ಪಾಟೀಲ ಅವರು 3951 ಪಡೆದು ರಾಜ್ಯದಲ್ಲಿಯೇ ಅತೀ ಹೆಚ್ಚು ಮತಗಳನ್ನು ಪಡೆದು ಗೆಲವು ಸಾಧಿಸಿದ ಸುದ್ದಿ ತಿಳಿದ ಅಭಿಮಾನಿಗಳು ಪಟಾಕಿ ಹಾರಿಸಿ ಕೂಗು ಹೊಡೆದು ಸಂಭ್ರಮಾಚರಿಸಿದರು. ಈ ಸಮಯದಲ್ಲಿ ಆನಂದ ಜಗತಾಪ, ಈರಪ್ಪಾ ನಾಯಿಕ, ಶ್ಯಾಮು ಮನಗುತ್ತಿ, ಮಹೇಶ ಜಾಧವ, ರಾಜು ನಾಯಿಕ, ಪ್ರವೀಣ ಯಾದವ, ಸಂಜೀವ ಬ್ಯಾಕುಡೆ ಮುಂತಾದವರು...

ಜಿಲ್ಲೆಯಲ್ಲಿ ಪ್ರತಿಶತ 65 ಕ್ಕೂ ಹೆಚ್ಚು ಶಾಂತಿಯುತ ಮತದಾನ

ಬೆಳಗಾವಿ,07- ಬೆಳಗಾವಿ ಜಿಲ್ಲೆಯ 16 ನಗರ ಸ್ಥಳೀಯ ಸಂಸ್ಥೆಗಳಿಗೆ ಇಂದು ನಡೆದ ಮತದಾನವು ಸಂಪೂರ್ಣ ಶಾಂತಿಯುತವಾಗಿದ್ದು, ಅಂದಾಜು ಪ್ರತಿಶತ 65 ರಷ್ಟುಕ್ಕೂ ಹೆಚ್ಚು ಮತದಾನವಾಗಿದೆ ಎಂದು ಜಿಲ್ಲಾ ಕೇಂದ್ರಕ್ಕೆ ಬಂದಿರುವ ಪ್ರಾಥಮಿಕ ವರದಿಗಳಿಂದ ತಿಳಿದುಬಂದಿದೆ. ಗುರುವಾರ ಮುಂಜಾನೆ 7 ಗಂಟೆಗೆ ಜಿಲ್ಲೆಯಲ್ಲಿ ಮಂದಗತಿಯಿಂದ ಪ್ರಾರಂಭವಾದ ಮತದಾನವು ಬಿಸಿಲೆರುತ್ತಿದ್ದಂತೆಯೇ ತೀವ್ರಗೊಂಡಿತ್ತು. ಮುಂಜಾನೆ 9 ಗಂಟೆಗೆ ಪ್ರತಿಶತ 13.67 ರಷ್ಟು ಮತದಾನವಾಗಿತ್ತು. ಬೆಳಿಗ್ಗೆ 11 ಗಂಟೆಗೆ ಪ್ರತಿಶತ 28.1 ರಷ್ಟು, ಮಧ್ಯಾಹ್ನ 1 ಗಂಟೆಗೆ ಪ್ರತಿಶತ 42.91 ರಷ್ಟು ಹಾಗೂ ಮಧ್ಯಾಹ್ನ 3 ಗಂಟೆಗೆ ಪ್ರತಿಶತ 56.29...

ನಾಳೆ ಸಚಿವರಿಂದ ಕಾಮಗಾರಿ ಪರಿಶೀಲನೆ

ನಾಳೆ ಸಚಿವರಿಂದ ಕಾಮಗಾರಿ ಪರಿಶೀಲನೆ ಕನ್ನಡಮ್ಮ ಸುದ್ದಿ- ಬೆಳಗಾವಿ : ಸಚಿವರಾದ ಸತೀಶ್ ಜಾರಕಿಹೊಳಿ ಸೋಮವಾರ ಬೆಳಿಗ್ಗೆ ೧೧ ಗಂಟೆಗೆ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯ ಕಾಮಗಾರಿ ಪರಿಶೀಲನೆ ನಡೆಸಲಿದ್ದಾರೆ. ಇದಾದ ಬಳಿಕ ಆಸ್ಪತ್ರೆಯ ಕ್ಯಾಂಟೀನ್ ಮತ್ತು ಪಾವತಿಸಿ ಬಳಸುವ ಸಾರ್ವಜನಿಕ ಶೌಚಾಲಯ ಮತ್ತಿತರ ಕಟ್ಟಡಗಳನ್ನು ಉದ್ಘಾಟಿಸಲಿದ್ದಾರೆ.

ನೂತನ ಶಾಲಾ ಕಟ್ಟಡದ ಉದ್ಘಾಟನೆ

ಬೆಳಗಾವಿ 12- ಗಡಿ ಜಿಲ್ಲೆಯಲ್ಲಿ ಶೈಕ್ಷಣಿಕ ಕ್ರಾಂತಿಯನ್ನುಂಟು ಮಾಡಿರುವ ಕೆ.ಎಲ್.ಇ.ಸಂಸ್ಥೆ ನಿಪ್ಪಾಣಿಯಲ್ಲಿ ಅಃಖಇ ಆಂಗ್ಲ ಮಾಧ್ಯಮ ಶಾಲೆಯನ್ನು ನಡೆಸುತ್ತಿದೆ. ನಿಪ್ಪಾಣಿಯ ಗ್ರಾಮೀಣ ವಿದ್ಯಾರ್ಥಿಗಳೂ ಆಂಗ್ಲ ಶಿಕ್ಷಣ ಪಡೆಯಲೆಂಬ ಧ್ಯೇಯದೊಂದಿಗೆ ಸ್ಥಾಪನೆಗೊಂಡಿರುವ ಶಾಲೆ ಶಿಶುವಿಹಾರ ದಿಂದ 10ನೆಯ ತರಗತಿಗಳವರೆಗೆ ಶಿಕ್ಷಣ ನೀಡುತ್ತಿದೆ. ಸದ್ಯ ಸುಮಾರು 9 ಕೋಟಿ ರೂಪಾಯಿ ವೆಚ್ಚದಲ್ಲಿ ಹಾಗೂ 90 ಸಾವಿರ ಚದುರಡಿ ವಿಸ್ತೀರ್ಣದಲ್ಲಿ ಅಃಖಇ ಆಂಗ್ಲಮಾದ್ಯಮ ಶಾಲೆಯ ನೂತನ ಕಟ್ಟಡವನ್ನು ನಿರ್ಮಿಸಲಾಗಿದೆ. ಉನ್ನತ ತಂತ್ರಜ್ಞಾನವನ್ನು ಬಳಸಿಕೊಂಡಿರುವ ಪ್ರಸ್ತುತ ಕಟ್ಟಡ ವಿಶೇಷ ತರಗತಿಯ ಕೊಠಡಿಗಳನ್ನು, ಶಿಕ್ಷಕರ ಕೊಠಡಿಗಳನ್ನು, ಮಕ್ಕಳ ಆಟದ ಮನೆ,...

ಇಂದಿನಿಂದ ಬೆಳಗಾವಿಯಲ್ಲಿ ಪತಂಗೋತ್ಸವ 20 ವಿದೇಶಿ ತಂಡಗಳು ಭಾಗಿ : ಅಭಯ ಪಾಟೀಲ

ಬೆಳಗಾವಿ:17 ಮಾಜಿ ಶಾಸಕ ಅಭಯ ಪಾಟೀಲ ಅವರು ಪರಿವರ್ತನ ಪರಿವಾರದ ಸಹಯೋಗದಲ್ಲಿ ಜ. 17 ರಿಂದ 20 ರ ವರೆಗೆ ಹಮ್ಮಿಕೊಂಡಿರುವ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಕ್ಷಣ ಗಣನೆ ಆರಂಭವಾಗಿದ್ದು, ಸಾವಗಾಂವ್ ರಸ್ತೆಯ ಅಂಗಡಿ ಎಂಜಿನಿಯರಿಂಗ್ ಕಾಲೇಜು ಮೈದಾನ ಉತ್ಸವಕ್ಕೆ ಸಜ್ಜುಗೊಂಡಿದೆ. ಉತ್ಸವದ ಸ್ಥಳದಲ್ಲಿ ಶುಕ್ರವಾರದಂದು ಮಾಧ್ಯಮ ಕೇಂದ್ರ ಉದ್ಘಾಟನೆಯ ನಂತರ ಮಾಜಿ ಶಾಸಕ ಅಭಯ ಪಾಟೀಲ ಗಾಳಿಪಟ ಉತ್ಸವದ ವಿವರ ನೀಡಿದರು. ಎಂ.ಕೆ.ಪಬ್ಲಿಸಿಟಿ ಮಾಲಿಕ ಎಂ.ಕೆ. ಜೈನಾಪುರ ಮಾಧ್ಯಮ ಕೇಂದ್ರವನ್ನು ಉದ್ಘಾಟಿಸಿದರು. ವಿವರ ಇಂತಿದೆ: 5 ನೇ ಸಲದ ಉತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ...

ಚುನಾವಣಾ ಪ್ರಚಾರಕ್ಕೆ ಮಕ್ಕಳನ್ನು ಬಳಸಬೇಡಿ

ಬೆಳಗಾವಿ 14: ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಶಾಲಾ ಮಕ್ಕಳನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವ ಬಗ್ಗೆ ಚುನಾವಣಾ ಆಯೋಗಕ್ಕೆ ದೂರುಗಳು ಬಂದಿದ್ದು, ರಾಜಕೀಯ ಪಕ್ಷಗಳು ಶಾಲಾ ಮಕ್ಕಳನ್ನು ಪ್ರಚಾರ ಕಾರ್ಯಕ್ಕಾಗಿ ಬಳಸಿಕೊಳ್ಳಬಾರದೆಂದು ಚುನಾವಣಾ ಆಯೋಗ ಕಟ್ಟುನಿಟ್ಟಿನ ಆದೇಶ ನೀಡಿದೆ. ಈಗಾಗಲೇ ಪರೀಕ್ಷೆಗಳು ಮುಗಿದು ಶಾಲಾ ಕಾಲೇಜುಗಳು ರಜೆಯಲ್ಲಿವೆ. ರಜೆಯಲ್ಲಿದ್ದ ಮಕ್ಕಳು ಚುನಾವಣೆಯ ಮಜದಲ್ಲಿ ತಮಗರಿವಿಲ್ಲದಂತೆ ಬಳಕೆಯಾಗುತ್ತಿವೆ. ರಾಜಕೀಯ ಪಕ್ಷಗಳು ಈ ಮಕ್ಕಳಿಗೆ ಗಾಳ ಹಾಕುತ್ತಿರುವ ಹಿನ್ನೆಲೆಯಲ್ಲಿ ಚುನವಣಾ ಆಯೋಗ ಮಕ್ಕಳನ್ನು ಬಳಸದಂತೆ ಕಟ್ಟೆಚ್ಚರಿಕೆ ನೀಡಿದೆ.

ಕಟಾವು ಮಾಡುತ್ತಿರುವ ಅಡ್ಡೆಗೆ ಕಂದಾಯ ಇಲಾಖೆ ದಾಳಿ

ಗೋಕಾಕ ಮಾ, 31 ;- ಅನಧೀಕೃತವಾಗಿ ಮೇವು ಕಟಾವು ಮಾಡುತ್ತಿರುವ ಅಡ್ಡೆಯ ಮೇಲೆ ಕಂದಾಯ ಇಲಾಖೆಯವರು ಹಠಾತ್ತನೇ ದಾಳಿ ಮಾಡಿ ಮೇವು ಕಟಾವು ಮಾಡುವ ಮಶೀನ್ನ್ನು ವಶಪಡಿಸಿಕೊಂಡ ಘಟನೆ ಶುಕ್ರವಾರದಂದು ನಡೆದಿದೆ. ತಾಲೂಕಿನ ಯಾದವಾಡ ಗ್ರಾಮದಲ್ಲಿ ಅನಧೀಕೃತವಾಗಿ ಮೇವು ಕಟಾವು ಮಾಡಿ ಬೇರೆ ರಾಜ್ಯಗಳಿಗೆ ಸಾಗಿಸಲಾಗುತ್ತಿದೆ ಎಂದು ತಮಗೆ ಬಂದ ಮಾಹಿತಿ ಮೇರೆಗೆ ಗೋಕಾಕ ತಹಶೀಲ್ದಾರ ಓದ್ರಾಮ ಅವರ ಮಾರ್ಗದರ್ಶನದಲ್ಲಿ ಕೌಜಲಗಿ ಉಪ ತಹಶೀಲ್ದಾರ ಎಮ್.ಎಮ್.ಪಿರಜಾದೆ ಹಾಗೂ ಗ್ರಾಮ ಲೆಕ್ಕಾಧಿಕಾರಿ ಜಿ.ಎಸ್.ಸಸಾಲಟ್ಟಿ ಅವರು ಪೊಲೀಸ್ ಇಲಾಖೆಯ ಸಹಾಯದಿಂದ ಈ ಅಡ್ಡೆಯ ಮೇಲೆ ದಾಳಿ ನಡೆಸಿ,...

ನಾಳೆ ಸಂವಾದ ಕಾರ್ಯಕ್ರಮ

ಬೆಳಗಾವಿ 17: ಕರ್ನಾಟಕ ರಾಜ್ಯ ಮಾವು ಅಬಿsವೃದ್ಧಿ ಮತ್ತು ಮಾರುಕಟ್ಟೆ ನಿಗಮ (ನಿ), ಬೆಂಗಳೂರು ವತಿಯಿಂದ ಹಾಗೂ ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯತ್‌, ಬೆಳಗಾವಿ ಇವರ ಸಹಯೋಗದೊಂದಿಗೆ ಮಾವು ಉದ್ದಿಮೆಯಲ್ಲಿ ಅವಕಾಶಗಳು ಮತ್ತು ಸವಾಲುಗಳು ಕುರಿತು ಸಂವಾದ ಕಾರ್ಯಕ್ರಮವನ್ನು ಡಿಸೆಂಬರ್‌ 19 ರಂದು ವೀರಭದ್ರೇಶ್ವರ ಕಲ್ಯಾಣ ಮಂಟಪ, ಕಿತ್ತೂರುದಲ್ಲಿ ಎರ್ಪಡಿಸಲಾಗಿದೆ.

ವಕ್ರತುಂಡ ನೃತೋತ್ಸವ

ಪಾಲಭಾವಿ 7: ಸಮೀಪದ ಹಂದಿಗುಂದ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಶ್ರೀ ವಕ್ರತುಂಡ ಗ್ರಾಮೀಣ ಅಭಿವೃದ್ಧಿ ಸಂಸ್ಥೆ(ರಿ) ಹಂದಿಗುಂದ ಇವರ ಆಶ್ರಯದಲ್ಲಿ ಗುರುವಾರ ದಿ 8ರಂದು ಸಂಜೆ 7ಗಂಟೆಗೆ “ವಕ್ರತುಂಡ ನೃತೋತ್ಸವ-2016” ಸಾಂಸ್ಕ್ರತಿಕ ಕಾರ್ಯಕ್ರಮ ವು ರಂಗ ಮಂದಿರದಲ್ಲಿ ಜರುಗುವದು. ಇಂಚಗೇರಿ ಮಠದ ಶ್ರೀ ಪ್ರದೀಪಕುಮಾರ ಘಂಟಿ ಮಹಾರಾಜರು ದಿವ್ಯಸಾನಿಧ್ಯವಹಿಸಿವರು, ಶ್ರೀ ಗುರುಲಿಂಗಯ್ಯ ಸ್ವಾಮಿಜಿ ಹಿರೇಮಠ ಸಾನಿಧ್ಯವಹಿಸುವರು, ಸಣ್ಣ ಕೈಗಾರಿಕೆ, ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಕಾರ್ಯಕ್ರಮ ಉದ್ಘಾಟಿಸುವರು, ವಿಧಾನ ಪರೀಷತ್ ಸದಸ್ಯ ಪ್ರತಾಪರಾವ ಪಾಟೀಲ ಜೋತಿ ಬೆಳಗಿಸುವರು, ಜಿ,ಪಂ.ಸದಸ್ಯ ಪ್ರಣಯ...
loading...